Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೆರಿಗೆಗೆ ಸಂಗ್ರಹಣೆಗೆ ಸಂಬಂಧಿಸಿದಂತೆ ನೆರವು ಮತ್ತು ಮಾಹಿತಿಯ ವಿನಿಮಯಕ್ಕಾಗಿ ಭಾರತ ಮತ್ತು ಬ್ರೂನೈ ದರುಸಲಂ ನಡುವಿನ ಒಪ್ಪಂದದ ಅಂಕಿತ  ಮತ್ತು ಸ್ಥಿರೀಕರಣಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರೂನೈ ದರುಸಲಾಂ ನಡುವೆತೆರಿಗೆ ಸಂಗ್ರಹಣಗೆ ಸಂಬಂಧಿಸಿದಂತೆ ನೆರವು ಹಾಗೂ ಮಾಹಿತಿಯ ವಿನಿಮಯ ಕುರಿತ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಒಪ್ಪಿಗೆ ನೀಡಿದೆ.

ವಿವರಗಳು:

  1.             ಈ ಒಪ್ಪಂದವು ಭಾರತ ಮತ್ತು ಬ್ರೂನೈ ದರುಸಲಾಂನ ಸೂಕ್ತ ಪ್ರಾಧಿಕಾರಗಳಿಗೆ ಮಾಹಿತಿ ವಿನಿಮಯ ತೆರಿಗೆಗಳ ವ್ಯಾಪ್ತಿಗೆ ಸಂಬಂಧಿಸಿದ ಎರಡು ದೇಶಗಳ ಪ್ರಾದೇಶಿಕ ಕಾನೂನುಗಳ ಆಡಳಿತ ಮತ್ತು ಜಾರಿಗೊಳಿಸುವಿಕೆಗೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಮಾಹಿತಿಯ ವಿನಿಮಯದ ಮೂಲಕ ನೆರವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
  2.             ಒಪ್ಪಂದದ ಅಡಿಯಲ್ಲಿ ಸ್ವೀಕರಿಸಲಾದ ಮಾಹಿತಿಯನ್ನು ಗೌಪ್ಯವಾಗಿ ಪರಿಗಣಿಸಲಾಗುವುದು ಮತ್ತು ಇದನ್ನು ನಿರ್ಧರಣೆ, ಸಂಗ್ರಹಣೆ, ಜಾರಿ, ಕಾನೂನು ಅಥವಾಒಪ್ಪಂದದ ಅಡಿಯಲ್ಲಿ ಬರುವ ತೆರಿಗೆಗಳಿಗೆ ಸಂಬಂಧಿಸಿದಂತೆ ಮೇಲ್ಮನವಿಗಳ ನಿರ್ಣಯಕ್ಕಾಗಿ (ನ್ಯಾಯಾಲಯ ಅಥವಾ ಆಡಳಿತಾತ್ಮಕ ಕಾಯಗಳು ಸೇರಿದಂತೆ) ವ್ಯಕ್ತಿಗಳು ಅಥವಾ ಪ್ರಾಧಿಕಾರಗಳಿಗೆ ಮಾತ್ರವೇ ಬಹಿರಂಗಪಡಿಸಲಾಗುತ್ತದೆ. ಮಾಹಿತಿ ಕಳುಹಿಸಿದ ರಾಷ್ಟ್ರದ ಲಿಖಿತ ಪೂರ್ವಾನುಮತಿಯೊಂದಿಗೆ ಇತರ ಯಾವುದೇ ವ್ಯಕ್ತಿಗಳಿಗೆ ಅಥವಾ ಕಾಯಗಳಿಗೆ ಅಥವಾ ಪ್ರಾಧಿಕಾರಗಳಿಗೆ ಅಥವಾ ಅಧಿಕಾರ ವ್ಯಾಪ್ತಿಗಳಿಗೆ ಬಹಿರಂಗಪಡಿಸಬಹುದಾಗಿದೆ.
  3.             ಈ ಒಪ್ಪಂದವು, ಭಾರತ ಮತ್ತು ಬ್ರೂನೈ ನಡುವೆ ಪ್ರಕರಣಗಳ ವರ್ಗಗಳಿಗೆ ಸಂಬಂಧಿಸಿದಂತೆ ಮಾಹಿತಿಯ ಸ್ವಯಂ ವಿನಿಮಯಕ್ಕೆ ಅವಕಾಶ ಒದಗಿಸುತ್ತದೆ.

  iii.            ಈ ಒಪ್ಪಂದವು ಎರಡೂ ದೇಶಗಳ ನಡುವೆ ತೆರಿಗೆ ಆದಾಯ ಕ್ಲೇಮುಗಳ ಸಂಗ್ರಹಣೆಗೆ ನೆರವು ನೀಡಲಿದೆ.

  1.             ಈ ಒಪ್ಪಂದವು ಯಾವುದೇ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಅಥವಾ ಒಪ್ಪಂದದ ಅಡಿಯಲ್ಲಿ ಒಪ್ಪಿತ ಪ್ರಕ್ರಿಯೆಗಳಿಗಾಗಿ ಪರಸ್ಪರ ಒಪ್ಪಂದದ ಪ್ರಕ್ರಿಯೆ ಒದಗಿಸುತ್ತದೆ.
  2.             ಈ ಒಪ್ಪಂದವು ಎರಡೂ ರಾಷ್ಟ್ರಗಳ ಸಂಬಂಧಿತ ಕಾಯಿದೆಗಳ ಅಗತ್ಯ ಪ್ರಕ್ರಿಯೆಗಳ ಕುರಿತ ಅಧಿಸೂಚನೆ ಪೂರ್ಣಗೊಂಡ ದಿನಾಂಕದಿಂದ ಜಾರಿಗೆ ಬರುತ್ತದೆ.

ಈ ಒಪ್ಪಂದವು ತೆರಿಗೆ ಉದ್ದೇಶಗಳಿಗಾಗಿ ಭಾರತ ಮತ್ತು ಬ್ರೂನೈಗಳ ನಡುವಿನ ಮಾಹಿತಿಯ ವಿನಿಮಯದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಇದು ತೆರಿಗೆ ತಪ್ಪಿಸುವಿಕೆ ಮತ್ತು ತೆರಿಗೆ ತಪ್ಪಿಸಿಕೊಳ್ಳುವಿಕೆಯನ್ನು ನಿಗ್ರಹಿಸುತ್ತದೆ. ಇದು ಎರಡೂ ರಾಷ್ಟ್ರಗಳ ನಡುವೆ ತೆರಿಗೆ ಆದಾಯದ ಸಂಗ್ರಹದ ಸಂಗ್ರಹದಲ್ಲಿ ನೆರವು ನೀಡುತ್ತದೆ.

ಈಒಪ್ಪಂದದಿಂದಾಗಿ ಯಾವುದೇ ಹಣಕಾಸಿನ ಪರಿಣಾಮಗಳಿರುವುದಿಲ್ಲ. ಒಪ್ಪಂದದ ವಿಧಿ 9 ಪ್ರಕಾರ 500 ಅಮೆರಿಕನ್ ಡಾಲರ್ ಮೀರಿದ ಅಸಾಮಾನ್ಯ ವೆಚ್ಚಗಳ ಸಂದರ್ಭದಲ್ಲಿ, ಅದನ್ನು ಭಾರತ ಸರಕಾರ ಭರಿಸುತ್ತದೆ. ಅಂತಹ ಇತರ ತೆರಿಗೆ ಮಾಹಿತಿ ವಿನಿಮಯ ಒಪ್ಪಂದಗಳಲ್ಲಿ ಭಾರತವು ಇದೇ ರೀತಿಯ ನಿಬಂಧನೆಗಳನ್ನು ಹೊಂದಿದೆ.

ಹಿನ್ನೆಲೆ:

ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 90ರ ಅಡಿಯಲ್ಲಿ ವಿದೇಶದೊಂದಿಗೆ ಅಥವಾ ನಿರ್ದಿಷ್ಟ ಪ್ರಾಂತ್ಯದೊಂದಿಗೆ ಆದಾಯ ತೆರಿಗೆ ತಪ್ಪಿಸುವುದು ಅಥವಾ ವಂಚನೆ ತಡೆಗಾಗಿ ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ಮಾಹಿತಿಯ ವಿನಿಮಯಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡುತ್ತದೆ. ಬ್ರೂನೈನೊಂದಿಗೆ ತೆರಿಗೆಗೆ ಸಂಬಂಧಿಸಿದಂತೆ ಮಾಹಿತಿಯ ವಿನಿಮಯ ಒಪ್ಪಂದಕ್ಕಾಗಿ ಮಾತುಕತೆಗಳು 2017ರ ಜನವರಿ 10 ಮತ್ತು 11ರಂದು ನಡೆದಿತ್ತು. ಇದಕ್ಕೆ ಅನುಗುಣವಾಗಿ, ಭಾರತ ಸರ್ಕಾರ ಮತ್ತು ಬ್ರೂನೈ ದರಾಸಲಮ್ ಗಳು ಒಪ್ಪಂದದ ಪಠ್ಯಕ್ಕೆ ಒಪ್ಪಿಗೆ ನೀಡಿದ್ದವು.

*****