ಪಿಎಂಇಂಡಿಯಾ
ಸೆಶೆಲ್ಸ್ ಅಧ್ಯಕ್ಷ ಘನತೆವೆತ್ತ ಡಾ. ಪ್ಯಾಟ್ರಿಕ್ ಹರ್ಮಿನಿ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೆಶೆಲ್ಸ್ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಸೆಶೆಲ್ಸ್ ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತ ಮತ್ತು ಸೆಶೆಲ್ಸ್ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾಕತಾಳೀಯವಾಗಿದೆ. ಈ ವಿಶೇಷ ಸಂದರ್ಭಗಳ ಸ್ಮರಣಾರ್ಥ, ಸೆಶೆಲ್ಸ್ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ರಾಷ್ಟ್ರೀಯ ಪರೇಡ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತುಕಡಿಗಳು ಭಾಗವಹಿಸಿದ್ದವು.
ಭಾರತೀಯ ತುಕಡಿಯು ಅಸ್ಸಾಂ ರೈಫಲ್ಸ್, ಭಾರತೀಯ ನೌಕಾಪಡೆ ಮತ್ತು ಭಾರತೀಯ ನೌಕಾಪಡೆಯ ಮಾರ್ಚಿಂಗ್ ಬ್ಯಾಂಡ್ ನ ಸಿಬ್ಬಂದಿಯನ್ನು ಒಳಗೊಂಡಿತ್ತು. ಇದು ಉಭಯ ದೇಶಗಳ ನಡುವಿನ ದೀರ್ಘಕಾಲದ ರಕ್ಷಣಾ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಆಚರಣೆಯ ಭಾಗವಾಗಿ ಮತ್ತು ಸ್ಥಾಪಿತ ಸಂಪ್ರದಾಯಕ್ಕೆ ಅನುಗುಣವಾಗಿ, ಭಾರತೀಯ ನೌಕಾಪಡೆಯ ಹಡಗುಗಳಾದ ತರ್ಕಾಶ್ ಮತ್ತು ಇಕ್ಷಕ್ ವಿಕ್ಟೋರಿಯಾ ಬಂದರಿನಲ್ಲಿ ಲಂಗರು ಹಾಕಿದವು.
ಆಚರಣೆಯಲ್ಲಿ ಪ್ರಧಾನಮಂತ್ರಿ ಅವರ ಭಾಗವಹಿಸುವಿಕೆಯು ಉಭಯ ದೇಶಗಳ ನಡುವಿನ ಆಳವಾದ ಪಾಲುದಾರಿಕೆ ಮತ್ತು ದೀರ್ಘಕಾಲದ ಸ್ನೇಹವನ್ನು ಬಿಂಬಿಸಿತು.
*****
Honoured to participate in the National Day celebrations of Seychelles, marking the Golden Jubilee of the nation’s Independence. The occasion was a fitting tribute to the remarkable journey of the Seychellois people over the past fifty years.
— Narendra Modi (@narendramodi) June 29, 2026
India is proud to stand alongside… pic.twitter.com/DIN4hUdKlq
Some more pictures from the Seychelles National Day celebrations. I thank President Dr. Patrick Herminie, the Government and people of Seychelles for inviting me to be a part of this special occasion.@StateHouseSey pic.twitter.com/FK1Hl22DB3
— Narendra Modi (@narendramodi) June 29, 2026
In en loner pour partisip dan selebrasyon lafet nasyonal Sesel, marke par Zibile Lor Lendepandans son nasyon.
— Narendra Modi (@narendramodi) June 29, 2026
Sa lokazyon i en bon dedikas a traze remarkab ki pep Seselwa in fer pandan sa 50 an.
Lenn i fyer pour debout akote Sesel koman en zanmi ek partener ki in kapab fer… pic.twitter.com/oDbonBFLaG
Vwar serten ekstre selebrasyon Lazournen Nasyonal Sesel.
— Narendra Modi (@narendramodi) June 29, 2026
Mon remersye Prezidan Dokter Patrick Herminie, gouvernman ek pep Seselwa pour envit mwan e permet mwan form parti sa lokazyon spesyal.@StateHouseSey pic.twitter.com/s6X5Q163Df
Contingents from the Assam Regiment and the Indian Navy took part in the National Day celebrations of Seychelles yesterday. It was yet another reflection of the enduring friendship between India and Seychelles. pic.twitter.com/FTJDDxucSz
— Narendra Modi (@narendramodi) June 29, 2026