ಪಿಎಂಇಂಡಿಯಾ
ಗೌರವಾನ್ವಿತರಾದ ಅಧ್ಯಕ್ಷ ಮಾಕ್ರಾನ್ ಅವರೇ, ಗೌರಾನ್ವಿತರಾದ ಅಧ್ಯಕ್ಷರುಗಳೇ ಮತ್ತು ಪ್ರಧಾನ ಮಂತ್ರಿಗಳೇ, ಅತಿಥಿ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ ಶುಭಾಶಯಗಳು, ನಾನು ನಿಮ್ಮೆಲ್ಲರನ್ನೂ ದಿಲ್ಲಿಯಲ್ಲಿ ಈ ಅಂತಾರಾಷ್ಟ್ರೀಯ ಸೌರ ಮಿತ್ರಕೂಟದ ಸ್ಥಾಪನಾ ಸಮ್ಮೇಳನಕ್ಕೆ ಆದರದಿಂದ ಸ್ವಾಗತಿಸುತ್ತೇನೆ.
ಇಂದಿನ ಈ ಚಾರಿತ್ರಿಕ ದಿನಕ್ಕೆ ಬೀಜಾಂಕುರವಾದುದು 2015 ರ ನವೆಂಬರ್ ತಿಂಗಳಲ್ಲಿ ಪ್ಯಾರೀಸಿನಲ್ಲಿ ನಡೆದ 21 ನೇ ಸಮಾವೇಶದಲ್ಲಿ . ಇಂದು ಆ ಬೀಜಗಳ ಹಸಿರು ಚಿಗುರಿದೆ.
ಫ್ರಾನ್ಸ್ ಈ ಕಿರಿಯ ಗಿಡದಲ್ಲಿ ಹೊಸ ಸಾಧ್ಯತೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಬೆಲೆ ಕಟ್ಟಲಾಗದಂತಹ ಪ್ರಮುಖ ಪಾತ್ರವನ್ನು ವಹಿಸಿದೆ. ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಎಂಬ ಈ ಕಿರಿಯ ಗಿಡವನ್ನು ನಿಮ್ಮೆಲ್ಲರ ಸಾಮೂಹಿಕ ಪ್ರಯತ್ನ ಮತ್ತು ಬದ್ಧತೆ ಇಲ್ಲದೇ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ಆದ್ದರಿಂದ ನಾನು ಫ್ರಾನ್ಸ್ ಮತ್ತು ನಿಮೆಲ್ಲರಿಗೆ ಭಾರೀ ಅಭಾರಿಯಾಗಿದ್ದೇನೆ. 121 ಸಾಮರ್ಥ್ಯಶೀಲ ದೇಶಗಳ ಪೈಕಿ 61 ದೇಶಗಳು ಈ ಮೈತಿ ಕೂಟದಲ್ಲಿ ಸೇರಿವೆ. ಅವುಗಳಲ್ಲಿ 32 ಒಪ್ಪಂದದ ಚೌಕಟ್ಟನ್ನು ದೃಢೀಕರಣ ಮಾಡಿವೆ. ಆದಾಗ್ಯೂ ಈ ಮೈತ್ರಿಕೂಟದಲ್ಲಿ ನಮ್ಮೆಲ್ಲ ಪಾಲುದಾರ ದೇಶಗಳ ಜತೆ ಸೂರ್ಯದೇವರು ಅತ್ಯಂತ ದೊಡ್ದ ಮಿತ್ರ. ಸೂರ್ಯ ಹೊರಗಿನ ವಾತಾವರಣಕ್ಕೆ ಬೆಳಕು ಒದಗಿಸುವ ಮೂಲಕ ನಮ್ಮ ನಿರ್ಧಾರಕ್ಕೆ ಬಲ ತುಂಬುತ್ತಿದ್ದಾನೆ.
ಸ್ನೇಹಿತರೇ,
ಸೂರ್ಯ ಈ ವಿಶ್ವದ ಮಿಲಿಯಾಂತರ ಜೀವಿಗಳಿಗೆ ಮಿಲಿಯಾಂತರ ವರ್ಷಗಳಿಂದ ಬೆಳಕು ಮತ್ತು ಬದುಕನ್ನು ಕೊಡುತ್ತಿದ್ದಾನೆ. ಆತ ಭೂಮಿಯಲ್ಲಿ ಜೀವಿಗಳು ಹುಟ್ಟುವುದಕ್ಕೆ ಮೊದಲೇ ಇದ್ದಾನೆ.ಜಪಾನಿನಿಂದ ಪೆರು ,ಗ್ರೀಸ್ ನಿಂದ ರೋಮ್, ಈಜಿಪ್ಟ್ ಅಥವಾ ಇಂಕಾ ಮತ್ತು ಪ್ರಾಚೀನ ಮಾಯಾ ನಾಗರೀಕತೆ ಸೇರಿದಂತೆ ಎಲ್ಲಾ ನಾಗರಿಕತೆಗಳು ಸೂರ್ಯನಿಗೆ ಮಹತ್ವ ಮತ್ತು ಗೌರವ ನೀಡಿವೆ.
ಆದಾಗ್ಯೂ ಭಾರತದ ತತ್ವಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಸೂರ್ಯನಿಗೆ ಕೊಟ್ತ ಕೇಂದ್ರ ಸ್ಥಾನ-ಮಾನ, ಪ್ರಾಧಾನ್ಯ ಅಭೂತಪೂರ್ವವಾದುದು
ಭಾರತದಲ್ಲಿ , ಸೂರ್ಯನನ್ನು ವೇದಗಳು ಸಾವಿರಾರು ವರ್ಷಗಳ ಹಿಂದೆಯೇ ವಿಶ್ವದ ಆತ್ಮ ಎಂದು ಪರಿಗಣಿಸಿದ್ದರು. ಭಾರತದಲ್ಲಿ ಸೂರ್ಯ ಇಡೀಯ ಜೀವನಕ್ಕೆ ಆಧಾರ ಮೂಲ ಎಂದು ಪರಿಗಣಿಸಲಾಗುತ್ತದೆ. ಇಂದು ನಾವು ವಾತಾವರಣ ಬದಲಾವಣೆಯ ಸವಾಲುಗಳನ್ನು ನಿಭಾಯಿಸಲು ಹಾದಿಗಳನ್ನು ಹುಡುಕುತ್ತಿರುವಾಗ ನಾವು ಸಮಗ್ರ ಧೋರಣೆ ಮತ್ತು ಪ್ರಾಚೀನ ತತ್ವಜ್ಞಾನದ ಸಮನ್ವಯವನ್ನು ಮಾಡಬೇಕಾಗುತ್ತದೆ.
ಸ್ನೇಹಿತರೇ
ನಮ್ಮ ಹಸಿರು ಭವಿಷ್ಯ ನಾವೆಲ್ಲರೂ ಒಗ್ಗೂಡಿ ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಮಹಾತ್ಮಾ ಗಾಂಧೀಜಿ ಅವರ ಒಂದು ಮಾತು ನೆನಪಾಯಿತು; “ ನಾವು ಏನು ಮಾಡುತ್ತೇವೆ ಮತ್ತು ನಮಗೆ ಏನನ್ನು ಮಾಡುವ ಸಾಮರ್ಥ್ಯವಿದೆ ಎಂಬುದರ ನಡುವಿನ ವ್ಯತ್ಯಾಸ ವಿಶ್ವದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲು ಸಾಕಾಗುತ್ತದೆ.”
ಇಂದು , ವಿಶ್ವದ ವಿವಿಧೆಡೆಯಿಂದ ಬಂದು ಇಲ್ಲಿ ಹಾಜರಿರುವ ನಾಯಕರು ಸೌರ ಶಕ್ತಿಯು ಮನುಕುಲದ ಇಂಧನ ಆವಶ್ಯಕತೆಯನ್ನು ಸಹ್ಯ ಮಾದರಿಯಲ್ಲಿ ಕ್ರಿಯಾಶೀಲವಾಗಿ ಮತ್ತು ಕೈಗೆಟಕುವ ದರದಲ್ಲಿ ಪರಿಹರಿಸಬಲ್ಲುದು ಎಂಬುದನ್ನು ಪ್ರತಿಬಿಂಬಿಸುವಂತಿದ್ದಾರೆ.
ಸ್ನೇಹಿತರೇ,
ನಾವು ಭಾರತದಲ್ಲಿ ವಿಶ್ವದ ಅತ್ಯಂತ ದೊಡ್ದ ಪುನರ್ ನವೀಕೃತ ಇಂಧನ ವಿಸ್ತರಣೆ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ನಾವು ಪುನರ್ ನವೀಕೃತ ಮೂಲಗಳಿಂದ 175 ಗಿಗಾ ವಾಟ್ ವಿದ್ಯುತ್ ಉತ್ಪಾದಿಸಲಿದ್ದೇವೆ. ಮತ್ತು ಅದರಲ್ಲಿ 100 ಗಿಗಾ ವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿರುವುದು ಸೌರ ಶಕ್ತಿಯಿಂದ
ನಾವು ಈಗಾಗಲೇ 20 ಗಿಗಾ ವಾಟ್ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಸಾಧಿಸಿದ್ದೇವೆ. ಭಾರತದಲ್ಲಿ ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಬದಲಾಗಿ, ಪುನರ್ ನವೀಕೃತ ಮೂಲಗಳಿಂದ ಇನ್ನಷ್ಟು ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲಾಗುತ್ತಿದೆ.
ಭಾರತದಲ್ಲಿ ಅಟಲ್ ಜ್ಯೋತಿ ಯೋಜನೆಯ ಉದ್ದೇಶ ವಿದ್ಯುತ್ ಕೊರತೆ ಇರುವಲ್ಲಿ ಸೌರ ಶಕ್ತಿ ಆಧಾರಿತ ಬೀದಿ ದೀಪಗಳ ಸ್ಥಾಪನೆ ಮಾಡುವುದಾಗಿದೆ. 7 ಮಿಲಿಯನ್ ಶಾಲಾ ಮಕ್ಕಳಿಗೆ ದೀಪಗಳನ್ನು ಸೌರ ಅಧ್ಯಯನ ದೀಪ ಯೋಜನೆಯಡಿ ಒದಗಿಸಲಾಗಿದೆ
ಸೌರ ವಿದ್ಯುತ್ತನ್ನು ಇತರ ತಂತ್ರಜ್ಞಾನಗಳ ಜತೆ ಜೋಡಿಸಿದರೆ ಫಲಿತಾಂಶ ಇದಕ್ಕಿಂತ ಉತ್ತಮವಾಗಿರುತ್ತದೆ. ಉದಾಹರಣೆಗೆ ಸರಕಾರದಿಂದ 28 ಕೋಟಿ ಎಲ್.ಇ.ಡಿ. ಬಲ್ಬುಗಳ ವಿತರಣೆ ಕಳೆದ ಮೂರು ವರ್ಶಗಳಲ್ಲಿ 2 ಬಿಲಿಯನ್ ಡಾಲರ್ ಉಳಿತಾಯ ಮಾಡಿರುವುದೊಂದೇ ಅಲ್ಲ, ಅದು 4 ಗಿಗಾ ವಾಟ್ಸ್ ವಿದ್ಯುತ್ತನ್ನೂ ಉಳಿಸಿದೆ. ಅದಷ್ಟು ಮಾತ್ರವೇ ಅಲ್ಲ. ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಪ್ರಮಾಣವೂ 30 ಮಿಲಿಯನ್ ಟನ್ನಿನಷ್ಟು ಕಡಿಮೆಯಾಗಿದೆ.
ಸ್ನೇಹಿತರೇ
ನಾವು ಭಾರತದಲ್ಲಿ ಮಾತ್ರ ಸೌರ ಕ್ರಾಂತಿಯ ಆಶಯವನ್ನು ಹೊಂದಿರುವುದಲ್ಲ, ಇಡೀಯ ವಿಶ್ವದಲ್ಲಿ ಈ ಕ್ರಾಂತಿ ಆಗಬೇಕು ಎಂಬ ಆಶಯ ನಮ್ಮದು. ಭಾರತದಲ್ಲಿ ತರಬೇತಿ ಪಡೆದ ಸೋಲಾರ್ ಮಾಮಗಳ ಹಾಡುಗಳು, ಭಾಷಣಗಳು ಮತ್ತು ವೀಡಿಯೋಗಳನ್ನು ನೀವು ನೋಡಿರಬಹುದು . ಈಗ ನೀವೆಲ್ಲರೂ ಈ ಸೌರ ಮಾಮಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಅವರ ಕಥೆಯೇ ಬಹಳ ಆಸಕ್ತಿದಾಯಕ.
ಐ.ಎಸ್.ಎ.ಮೂಲನಿಧಿಗೆ ದೇಣಿಗೆ ನೀಡುವುದಲ್ಲದೆ , ಐ.ಎಸ್.ಎ. ಮಂತ್ರಾಲಯ ಸ್ಥಾಪಿಸಲು 62 ಮಿಲಿಯನ್ ಡಾಲರ್ ಮೊತ್ತವನ್ನು ಕೊಡಮಾಡಲಾಗಿದೆ ಎಂಬುದು ನಮಗೆ ಹರ್ಷದ ಸಂಗತಿಯಾಗಿದೆ. ಪ್ರತೀ ವರ್ಷವೂ ನಾವು ಸೌರ ಕ್ಷೇತ್ರದಲ್ಲಿ ಐ.ಎಸ್.ಎ. ಸದಸ್ಯರಿಗೆ 500 ತರಬೇತಿಯ ಅವಧಿಗಳನ್ನು ಒದಗಿಸುತ್ತೇವೆ ಎಂದು ಘೋಷಿಸಲು ನನಗೆ ಸಂತೋಷವಿದೆ.
ನಾವು ಇಡೀಯ ವಿಶ್ವದಲ್ಲಿ ಒಂದೋ 143 ಮಿಲಿಯನ್ ಡಾಲರ್ ಮೊತ್ತದ 13 ಸೌರ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ ಇಲ್ಲವೇ ಅವುಗಳು ಪ್ರಗತಿಯ ಹಂತದಲ್ಲಿವೆ. ಭಾರತವು ಇತರ 15 ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇನ್ನೂ 27 ಯೋಜನೆಗಳನ್ನು ಅನುಷ್ಟಾನಕ್ಕೆ ತರಲು 1.4 ಬಿಲಿಯನ್ ಡಾಲರುಗಳ ನೆರವನ್ನು ನೀಡಲಿದೆ.
ನಾವು ಯೋಜನಾ ತಯಾರಿಕಾ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ. ಇದು ಸಹಭಾಗಿ ದೇಶಗಳಿಗೆ ಬ್ಯಾಂಕ್ ಮೂಲಕ ಪರಿಗ್ರಹಿಸಬಹುದಾದ ಯೋಜನೆಗಳನ್ನು ವಿನ್ಯಾಸಗೊಳಿಸಲು ಸಮಾಲೋಚನಾ ಬೆಂಬಲವನ್ನು ನೀಡುತ್ತದೆ.
ಇಂದು ಭಾರತವು ಸೌರ ತಂತ್ರಜ್ಞಾನ ಕ್ಷೇತ್ರದಲ್ಲಿಯ ಅಂತರವನ್ನು ನಿವಾರಿಸಲು ಸೌರ ತಂತ್ರಜ್ಞಾನ ಮಿಷನ್ ಆರಂಭ ಮಾಡುತ್ತದೆ ಎಂದು ಹೇಳಲು ನನಗೆ ಅತ್ಯಂತ ಸಂತೋಷವೆನಿಸುತ್ತದೆ. ಈ ಮಿಷನ್ ಅಂತಾರಾಷ್ಟ್ರೀಯ ಉದ್ದೇಶ, ಗುರಿಯನ್ನು ಹೊಂದಿದ್ದು, ಅದು ಸೌರ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ನಾಯಕತ್ವವನ್ನು ಒದಗಿಸಲಿದೆ. ಅದು ನಮ್ಮ ಎಲ್ಲಾ ಸರಕಾರಿ, ತಾಂತ್ರಿಕ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಗ್ಗೂಡಿಸಿ ಈ ನಿಟ್ಟಿನಲ್ಲಿ ಕಾರ್ಯವೆಸಗಲಿದೆ.
ಸ್ನೇಹಿತರೇ ,
ಗಾಳಿಯಂತೆ ಧಾರಾಳವಾಗಿ ದೊರಕುವ ಸೌರ ಶಕ್ತಿಯ ಅಭಿವೃದ್ದಿ ಮತ್ತು ಬಳಕೆ ನಮ್ಮ ಸಮೃದ್ದಿಯನ್ನು ಹೆಚ್ಚಿಸುವುದಲ್ಲದೆ, ಭೂಮಿಯ ಮೇಲೆ ಖಚಿತವಾಗಿ ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡಬಲ್ಲುದು.
ಸ್ನೇಹಿತರೇ,
ನಾವು ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟಿರಬೇಕು. ಅವುಗಳೆಂದರೆ: ಒಂದೆಡೆ ವರ್ಷವಿಡೀ ಸೂರ್ಯನ ಬೆಳಕು ಲಭ್ಯ ಇರುವ ಹಲವಾರು ದೇಶಗಳಿವೆ. ಆದರೆ ಸಂಪನ್ಮೂಲ ಮತ್ತು ತಂತ್ರಜ್ಞಾನದ ಕೊರತೆ ಅಡ್ಡಿಯಾಗಿದೆ, ಸೂರ್ಯ ಶಕ್ತಿ ಬಳಕೆಗೆ ಅದೊಂದು ತೊಂದರೆಯಾಗಿ ಪರಿಣಮಿಸಿದೆ.
ಇನ್ನೊಂದೆಡೆ ಕೆಲವು ದ್ವೀಪಗಳು ಮತ್ತು ದೇಶಗಳು ವಾತಾವರಣ ಬದಲಾವಣೆಯ ಪರಿಣಾಮದಿಂದ ಅವುಗಳ ಅಸ್ತಿತ್ವದ ಸವಾಲನ್ನು ಎದುರಿಸುತ್ತಿವೆ. ಮೂರನೇಯದಾಗಿ ಬರೇ ಬೆಳಕಿಗಾಗಿ ಅಲ್ಲ, ಸೌರ ಶಕ್ತಿಯು ಸಾರಿಗೆ, ಸ್ವಚ್ಚ ಅಡುಗೆ, ಕೃಷಿ, ಸೌರ ಪಂಪುಗಳು ಮತ್ತು ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿಯೂ ಅಷ್ಟೇ ಉಪಯುಕ್ತವಾಗಿದೆ.
ತಂತ್ರಜ್ಞಾನದ ಲಭ್ಯತೆ ಮತ್ತು ಅಭಿವೃದ್ದಿ , ಹಣಕಾಸು ಸಂಪನ್ಮೂಲಗಳು, ವೆಚ್ಚದಲ್ಲಿ ಕಡಿತ, ದಾಸ್ತಾನು ತಂತ್ರಜ್ಞಾನದ ಅಭಿವೃದ್ದಿ , ಸಾಮೂಹಿಕ ಉತ್ಪಾದನೆ, ಮತ್ತು ಅನ್ವೇಷಣೆಗೆ ಪೂರಕವಾದ ಸಮಗ್ರ ಪರಿಸರ ವ್ಯವಸ್ಥೆ ಸೌರ ವಿದ್ಯುತ್ ಬಳಕೆಯನ್ನು ಪ್ರೋತ್ಸಾಹಿಸಲು ಅತ್ಯಂತ ಅಗತ್ಯವಾಗಿ ಬೇಕಾಗಿದೆ.
ಸ್ನೇಹಿತರೇ,
ನಾವೆಲ್ಲರೂ ಮುಂದುವರಿಯಬೇಕಾದ ಹಾದಿ ಯಾವುದೆಂದು ಚಿಂತಿಸಬೇಕಾಗಿದೆ. ನನ್ನ ಮನಸ್ಸಿನಲ್ಲಿ ಕಾರ್ಯಾಚರಿಸಬಹುದಾದ 10 ಅಂಶಗಳಿವೆ. ಅವುಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲಕ್ಕಿಂತ ಮೊದಲು ನಾವು ಉತ್ತಮ ಮತ್ತು ಕೈಗೆಟಕುವ ದರದ ಸೌರ ತಂತ್ರಜ್ಞಾನವನ್ನು ಖಾತ್ರಿಪಡಿಸಬೇಕು ಮತ್ತು ಅದು ಎಲ್ಲರಿಗೂ ಸುಲಭದಲ್ಲಿ, ಅನುಕೂಲಕರ ರೀತಿಯಲ್ಲಿ ದೊರೆಯುವಂತಿರಬೇಕು.
ನಮ್ಮ ಇಂಧನ, ಶಕ್ತಿ ಮಿಶ್ರಣದಲ್ಲಿ ಸೌರ ಶಕ್ತಿಯ ಭಾಗವನ್ನು ಹೆಚ್ಚಿಸಬೇಕು. ಹಲವಾರು ಅಗತ್ಯಗಳಿಗೆ ಸೌರ ಪರಿಹಾರ ಒದಗಿಸುವಂತಹ ಅನ್ವೇಷಣೆಯನ್ನು ನಾವು ಪ್ರೋತ್ಸಾಹಿಸಬೇಕು.
ಸೌರ ಯೋಜನೆಗಳಿಗೆ ನಾವು ರಿಯಾಯತಿ ದರದಲ್ಲಿ ಹಣಕಾಸು ಮತ್ತು ಕಡಿಮೆ ವಿಪತ್ತಿನ ವಿಭಾಗದಲ್ಲಿ ಹಣಕಾಸನ್ನು ಒದಗಿಸುವಂತಾಗಬೇಕು.ಇಂತಹ ನಿಯಂತ್ರಕ ಅಂಶಗಳನ್ನು ಮತ್ತು ಗುಣಮಾನಕಗಳನ್ನು ಒದಗಿಸಿದರೆ ಅದರಿಂದ ಸೌರ ಪರಿಹಾರಗಳನ್ನು ಅಭಿವೃದ್ದಿಪಡಿಸುವುದಕ್ಕೆ ಮತ್ತು ಅವುಗಳನ್ನು ಅಳವಡಿಸಿಕೊಳ್ಳುವುದಕ್ಕೆ ವೇಗ ದೊರಕಿದಂತಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬ್ಯಾಂಕುಗಳ ಮೂಲಕ ಅಭಿವೃದ್ದಿಪಡಿಸಬಹುದಾದ ಸೌರ ಯೋಜನೆಗಳನ್ನು ಬೆಂಬಲಿಸಲು ಸಲಹಾ ವ್ಯವಸ್ಥೆಯ ಅಭಿವೃದ್ಧಿ ಅಗತ್ಯವಾಗಿದೆ..
ನಮ್ಮ ಪ್ರಯತ್ನಗಳಲ್ಲಿ ಇನ್ನೂ ಹೆಚ್ಚಿನ ಒಳಗೊಳ್ಳುವಿಕೆ ಮತ್ತು ಪಾಲ್ಗೊಳ್ಳುವಿಕೆಗೆ ಪ್ರಾಮುಖ್ಯತೆ ಕೊಡಬೇಕಾಗಿದೆ. ನಾವು ಸ್ಥಳೀಯ ಅಂಶಗಳು ಮತ್ತು ಪರಿಸ್ಥಿತಿಗಳನ್ನು ಪರಿಗಣಿಸುವಂತಹ ಪ್ರಾವೀಣ್ಯತಾ ಕೇಂದ್ರಗಳ ಜಾಲವನ್ನು ರಚಿಸಬೇಕಾಗಿದೆ. ಎಸ್.ಡಿ.ಜಿ.ಗಳನ್ನು ಸಾಧಿಸುವಲ್ಲಿ ಗರಿಷ್ಟ ಕೊಡುಗೆ ಕೊಡುವಂತೆ ಸೌರ ಶಕ್ತಿ ನೀತಿಯನ್ನು ಸಮಗ್ರ ಅಭಿವೃದ್ದಿಯ ದೃಷ್ಟಿಕೋನದಿಂದ ನೋಡಬೇಕಾಗಿದೆ. ನಾವು ಐ.ಎಸ್.ಎ . ಮಂತ್ರಾಲಯವನ್ನು ಬಲಿಷ್ಟ ಮತ್ತು ವೃತ್ತಿಪರವಾಗಿಸಬೇಕಿದೆ.
ಸ್ನೇಹಿತರೇ,
ನಾವು ಐ.ಎಸ್.ಎ. ಮೂಲಕ ಈ ಎಲ್ಲಾ ಕಾರ್ಯಸಾಧ್ಯವಾದ ಅಂಶಗಳೊಂದಿಗೆ ತ್ವರಿತವಾಗಿ ಅಭಿವೃದ್ಧಿ ಹೊಂದಲು ನಾವು ಸಮರ್ಥರಿದ್ದೇವೆ ಎಂಬುದರ ಬಗ್ಗೆ ನನಗೆ ಭರವಸೆ ಇದೆ.
ಸ್ನೇಹಿತರೇ,
ಇಂದಿನ ಈ ಸಮಯ ನಮ್ಮ ಪ್ರಯಾಣದ ಆರಂಭವಷ್ಟೇ. ನಮ್ಮ ಮಿತ್ರಕೂಟ ಸೂರ್ಯನ ಬೆಳಕಿನೊಂದಿಗೆ ನಮ್ಮ ಜೀವನವನ್ನೂ ಇನ್ನಷ್ಟು ಬೆಳಗಿಸಲಿದೆ. ಇದರಿಂದ “ನಾವೆಲ್ಲ ಸೂರ್ಯನನ್ನು ಇನ್ನಷ್ಟು ಬೆಳಗಿಸೋಣ” ಎಂಬ ಮಾತಿಗೆ ಹೆಚ್ಚು ಅರ್ಥ ಬರುತ್ತದೆ. ಭಾರತದ ತತ್ವಜ್ಞಾನದ ಆತ್ಮವೇ ವಸುದೈವ ಕುಟುಂಬಕಂ, ಅದರ ಅರ್ಥ “ ಇಡೀಯ ವಿಶ್ವವೇ ಒಂದು ಕುಟುಂಬ “ ಎಂಬುದಾಗಿದೆ.
ನಾವು ಇಡೀಯ ವಿಶ್ವದ ಅಭ್ಯುದಯವನ್ನು, ಇಡೀಯ ಮನುಕುಲದ ಒಳಿತನ್ನು ಆಶಿಸಿದರೆ ಆಗ ನಮಗೆ ನಮ್ಮ ಪ್ರಯತ್ನದಲ್ಲಿ ಒಂದು ಕುಟುಂಬದಂತೆ ಒಗ್ಗಟ್ಟನ್ನು, ಸಾಮರಸ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬ ಬಗ್ಗೆ ನನಗೆ ಭರವಸೆ ಇದೆ.
ಸ್ನೇಹಿತರೇ , ಇದೇ ದಾರಿಯ ಮೂಲಕ ನಮ್ಮ ಪ್ರಾಚೀನ ಋಷಿ ಮುನಿಗಳ ಪ್ರಾರ್ಥನೆಯಾದ ತಮಸೋಮಾ ಜ್ಯೋತಿರ್ಗಮಯ- ಇದರ ಅರ್ಥ ’ನಾವು ಕತ್ತಲೆಯಿಂದ ಬೆಳಕಿನತ್ತ ಸಾಗೋಣ” ಎಂಬುದನ್ನು ನಾವು ಅನುಷ್ಟಾನಿಸಬಹುದಾಗಿದೆ.
ನಿಮಗೆಲ್ಲಾ ತುಂಬಾ ತುಂಬಾ ಧನ್ಯವಾದಗಳು
ಧನ್ಯವಾದಗಳೊಂದಿಗೆ
…………………………..
International Solar Alliance का यह नन्हा पौधा आप सभी के सम्मिलित प्रयास और प्रतिबद्धता के बिना रोपा ही नहीं जा सकता था। इसलिए मैं फ्रांस का और आप सबका बहुत आभारी हूँ।
— PMO India (@PMOIndia) March 11, 2018
121 सम्भावित देशों में से 61 Alliance को join कर चुके हैं
32 ने Framework Agreement को ratify भी कर दिया है: PM
भारत में वेदों ने हज़ारो साल पहले से सूर्य को विश्व की आत्मा माना है। भारत में सूर्य को पूरे जीवन का पोषक माना गया है।
— PMO India (@PMOIndia) March 11, 2018
आज जब हम Climate Change जैसी चुनौती से निपटने का रास्ता ढूंढ रहे हैं तो हमे प्राचीन दर्शन के संतुलन और समग्र दृष्टिकोण की ओर देखना होगा: PM
भारत में हमने दुनिया का सबसे बड़ा नवीकरणीय ऊर्जा विस्तार कार्यक्रम शुरू किया है।
— PMO India (@PMOIndia) March 11, 2018
हम 2022 तक renewables से 175 GW बिजली उत्पन्न करेंगे जिसमें से 100 GW बिजली सौर से होगी। हमने इसमे से 20 GW installed solar power का लक्ष्य हासिल कर लिया है: PM
Solar energy के प्रयोग को बढ़ावा देने के लिए technology की उपलब्धता और विकास, आर्थिक संसाधन, कीमतों में कमी, storage technology का विकास, mass manufacturing, और innovation के लिए पूरा eco system ज़रुरी है: PM
— PMO India (@PMOIndia) March 11, 2018
आगे का रास्ता क्या है, यह हम सबको सोचना है।
— PMO India (@PMOIndia) March 11, 2018
मेरे मन में दस action points हैं जो मैं आपसे साझा करना चाहता हूं।
सर्वप्रथम हमें यह सुनिश्चित करना होगा कि बेहतर और सस्ती सोलर Technology सबके लिए सुगम और सुलभ हो।
हमें हमारे energy mix में solar का अनुपात बढ़ाना होगा: PM
हमें innovation को प्रोत्साहित करना होगा ताकि विभिन्न आवश्यकताओं के लिए सौर समाधान प्रदान हो सके।
— PMO India (@PMOIndia) March 11, 2018
हमें solar projects के लिए concessional financing और कम जोखिम का वित्त मुहैया कराना होगा: PM
Regulatory aspects एवं मानकों का विकास करना होगा जो सौर समाधान अपनाने और उनके विकास को गति दें।
— PMO India (@PMOIndia) March 11, 2018
विकासशील देशों में bankable solar projects के लिए consultancy support का विकास करना होगा।
हमारे प्रयासों में अधिक समावेशिता और भागीदारी पर बल दिया जाये: PM
हमें centers of excellence का एक व्यापक network बनाना चाहिए
— PMO India (@PMOIndia) March 11, 2018
हमारी solar energy policy को विकास की समग्रता से देखें, ताकि SDGs की प्राप्ती में इससे ज्यादा से ज्यादा योगदान मिले
हमे ISA Secretariat को मज़बूत और professional बनाना चाहिए: PM
पूरी मानवता की भलाई चाहते हैं तो मुझे विश्वास है कि निजी दायरों से बाहर निकलकर एक परिवार की तरह हम उद्देश्यों और प्रयासों में एकता और एकजुटता ला सकेंगे।
— PMO India (@PMOIndia) March 11, 2018
यह वही रास्ता है जिससे हम प्राचीन मुनियों की प्रार्थना –
'तमसो मा ज्यातिर्गमय' को चरितार्थ कर पायेंगे: PM