ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018, ಜೂನ್ 29ರಂದು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ – ಏಮ್ಸ್ ಗೆ ಭೇಟಿ ನೀಡಲಿದ್ದಾರೆ.
ಅವರು ಏಮ್ಸ್ ಆವರಣದಲ್ಲಿ ನಿರ್ಮಾಣವಾಗಲಿರುವ ವಯೋವೃದ್ಧರ ರಾಷ್ಟ್ರೀಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕೇಂದ್ರದಲ್ಲಿ ವಯಸ್ಸಾದ ಜನಸಂಖ್ಯೆಗೆ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ರಕ್ಷಣೆ ಸೇವೆಗಳನ್ನು ನೀಡಲಾಗುವುದು. ಇದರಲ್ಲಿ 200 ಸಾಮಾನ್ಯ ವಾರ್ಡ್ ನ ಹಾಸಿಗೆಗಳಿರಲಿವೆ.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸಾಫ್ದಾರ್ ಜುಂಗ್ ಆಸ್ಪತ್ರೆಯ 555 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಅನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಿ ಅವರು ಸಾಫ್ದಾರ್ ಜುಂಗ್ ಆಸ್ಪತ್ರೆಯ 500 ಹಾಸಿಗೆಗಳ ಹೊಸ ತುರ್ತು – ಎಮರ್ಜನ್ಸಿ ಬ್ಲಾಕ್ ಅನ್ನು, ಏಮ್ಸ್ ನಲ್ಲಿನ 300 ಹಾಸಿಗೆಗಳ ಪವರ್ ಗ್ರಿಡ್ ವಿಶ್ರಮ್ ಸದನ ಮತ್ತು ಏಮ್ಸ್ ನ ಅನ್ಸಾರಿ ನಗರ ಮತ್ತು ಟ್ರಾಮಾ ಕೇಂದ್ರದ ನಡುವೆ ವಾಹನಗಳು ಚಲಿಸುವಂತಹ ಸುರಂಗ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
Tomorrow PM @narendramodi will visit AIIMS, where he will lay the Foundation Stone of the National Centre for Aging. This will provide the older population with multi-speciality healthcare. It will have 200 general ward beds.
— PMO India (@PMOIndia) June 28, 2018
He will also inaugurate the 555-bed Super Speciality Block in Safdarjung Hospital. He will dedicate the 500-bed New Emergency Block in Safdarjung Hospital, 300-bed PowerGrid Vishram Sadan in AIIMS and the Connection Motorable Tunnel between AIIMS, Ansari Nagar and Trauma Centre.
— PMO India (@PMOIndia) June 28, 2018