ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಜರ್ಮನಿ ನಡುವಿನ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದ (ಎಂಒಯು) ದ ಜಂಟಿ ಆಶಯ ಘೋಷಣೆಗೆ ಸಹಿ ಹಾಕಿರುವುದನ್ನು ಅಂಗೀಕರಿಸಿದೆ. ಈ ಜಂಟಿ ಘೋಷಣೆಯು ಜರ್ಮನಿ ಹಾಗೂ ಭಾರತದ ನಡುವೆ ಸುರಕ್ಷಿತ, ಪರಿಣಾಮಕಾರಿ ಹಾಗೂ ಕ್ಷಮತೆಯ ವಾಯುಸಂಚಾರವನ್ನು ಅಭಿವೃದ್ಧಿಪಡಿಸುವುದನ್ನು ಉತ್ತೇಜಿಸಲು ದಾರಿ ಮಾಡಿಕೊಡಲಿದೆ.
ಜಂಟಿ ಆಶಯ ಘೋಷಣೆ ರೂಪದಲ್ಲಿರುವ ಈ ಎಂಒಯು, ನಾಗರಿಕ ವಿಮಾನಯಾನ ಕುರಿತ ಜರ್ಮನಿ ಮತ್ತು ಭಾರತದ ನಡುವಿನ ಸಂಬಂಧದಲ್ಲಿ ಪ್ರಮುಖ ಮೈಲುಗಲ್ಲು ಆಗಲಿದ್ದು, ಎರಡೂ ದೇಶಗಳ ನಡುವೆ ವ್ಯಾಪಾರ, ಹೂಡಿಕೆ, ಪ್ರವಾಸ ಮತ್ತು ಸಾಂಸ್ಕøತಿಕ ವಿನಿಮಯವನ್ನು ಇನ್ನಷ್ಟು ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿದೆ.
ಎರಡೂ ದೇಶಗಳು ಜಂಟಿ ಆಶಯ ಘೋಷಣೆ ರೂಪದಲ್ಲಿರುವ ಎಂಒಯುಗೆ ಸಹಿ ಹಾಕುವ ಮೂಲಕ ಪರಸ್ಪರ ಸಂಬಂಧವನ್ನು ಇನ್ನಷ್ಟು ದೃಢಪಡಿಸಿಕೊಳ್ಳಲು ಹಾಗೂ ಬಲಪಡಿಸಿಕೊಳ್ಳಲು ಉದ್ದೇಶಿಸಿದ್ದು, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಜ್ಞಾನ, ಅನುಭವದ ವಿನಿಮಯ ಹಾಗೂ ಸಹಕಾರವನ್ನು ಪ್ರೋತ್ಸಾಹಿಸಲು ನಿರ್ಧರಿಸಿವೆ. ಜಂಟಿ ಆಶಯ ಘೋಷಣೆಯ ಪ್ರಮುಖ ಉದ್ದೇಶವೆಂದರೆ, ಕೆಳಕಂಡ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಉತ್ತೇಜಿಸುವುದಾಗಿದೆ:
1. ವೈಮಾನಿಕ ಸುರಕ್ಷೆ ಹಾಗೂ ವಾಯು ಸಂಚಾರದ ನಿರ್ವಹಣೆ: ಸೆಮಿನಾರ್ಗಳು, ಚರ್ಚಾಗೋಷ್ಠಿ, ಭೇಟಿಗಳು ಹಾಗೂ ಇನ್ನಿತರ ಸೂಕ್ತ ಎನ್ನಿಸುವ ಆಲೋಚನೆಗಳ ಮೂಲಕ ವೈಮಾನಿಕ ಸುರಕ್ಷೆ ಹಾಗೂ ವಾಯು ಸಂಚಾರದ ನಿರ್ವಹಣೆ ಕುರಿತ ಮಾಹಿತಿ ಹಾಗೂ ಉತ್ತಮ ಆಚರಣೆಗಳ ಕುರಿತು ಮಾಹಿತಿ ಹಂಚಿಕೊಳ್ಳುವುದು.
2. ಹೆಲಿಪೋರ್ಟ್ ಹಾಗೂ ಹೆಲಿಕಾಪ್ಟರ್ ತುರ್ತು ವೈದ್ಯ ಸೇವೆಗಳು(ಹೆಚ್ಇಎಂಎಸ್): ಹೆಲಿಪೋರ್ಟ್ ಹಾಗೂ ಹೆಲಿಕಾಪ್ಟರ್ ತುರ್ತು ವೈದ್ಯ ಸೇವೆಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಉತ್ತಮ ಆಚರಣೆಗಳನ್ನು ಹಂಚಿಕೊಳ್ಳುವುದು.
3. ನಿಯಂತ್ರಣ ಮತ್ತು ಕಾರ್ಯನೀತಿ: ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಐಸಿಎಓದಲ್ಲಿ ಸಹಯೋಗವನ್ನು ಮುಂದುವರಿಸುವುದು
4. ಕಾರ್ಪೊರೇಟ್ ಹಾಗೂ ವ್ಯಾಪಾರ ವಾಯುಯಾನದ ಅಭಿವೃದ್ಧಿ: ವ್ಯಾಪಾರ ಹಾಗೂ ವಾಣಿಜ್ಯಿಕವಲ್ಲದ ಸೌಕರ್ಯಗಳ ಕುರಿತು ಮಾಹಿತಿ ಹಂಚಿಕೆ
5. ಪರಿಸರ:
ಎ) ಸುಸ್ಥಿರ ಹಾಗೂ ಪರಿಸರಸ್ನೇಹಿ ಏರೋಡ್ರೋಮ್ಗಳ ಅಭಿವೃದ್ಧಿ ಹಾಗೂ ಯೋಜಿಸುವಿಕೆಯನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು, ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವುದು
ಬಿ) ವಾಯುಯಾನ ಕ್ಷೇತ್ರದಲ್ಲಿ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಸಿರುಮನೆ ಅನಿಲ(ಜಿಎಚ್ಜಿ) ತುಂಬುವಿಕೆ ಹಾಗೂ ಈ ಮೂಲಕ ಹವಾಮಾನ ಬದಲಾವಣೆ ಸಮಸ್ಯೆಯನ್ನು ನಿಭಾಯಿಸುವ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಸಹಕಾರ
6. ತರಬೇತಿ ಹಾಗೂ ಕೌಶಲ ಅಭಿವೃದ್ಧಿ: ವಾಯುಯಾನದಲ್ಲಿ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ತಾಂತ್ರಿಕ ಮತ್ತು ತಾಂತ್ರಿಕವಲ್ಲದ ಸಹಕಾರ ಮತ್ತು ತರಬೇತಿಗೆ ಸಹಭಾಗಿತ್ವವನ್ನು ಶೋಧಿಸುವುದು