Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೊಸದಿಲ್ಲಿಯಲ್ಲಿ ಫಿಜಿ ಹೈ ಕಮಿಷನ್‍ಗೆ ನೀಡಿದ ಭೂಮಿಗೆ ವಾಣಿಜ್ಯಿಕ ದರ ವಿಧಿಸುವುದರಿಂದ ವಿನಾಯಿತಿ ನೀಡಲು ಸಂಪುಟ ಸಮ್ಮತಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಫಿಜಿ ಹೈ ಕಮಿಷನರೇಟ್‍ಗೆ ಹೊಸ ದಿಲ್ಲಿಯ ಚಾಣಕ್ಯಪುರಿಯ ರಾಯಭಾರಿಗಳಿರುವ ಪ್ರದೇಶದಲ್ಲಿ ನೀಡಲಾದ 2,800 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್ ಸಂಖ್ಯೆ 31-ಬಿಗೆ ವಾಣಿಜ್ಯಿಕ ದರ ವಿಧಿಸುವುದರಿಂದ ವಿನಾಯಿತಿ ನೀಡಲು ಹಾಗೂ ಫಿಜಿಯು ಸುವಾದಲ್ಲಿ ಭಾರತೀಯ ಹೈ ಕಮಿಷನ್‍ಗೆ ನೀಡಿರುವ ಭೂಮಿಗೆ ವಿಧಿಸಲಾದ ಶರತ್ತು ಹಾಗೂ ಗಡುವನ್ನು ಇಲ್ಲಿಯೂ ನೀಡಲು ಸಮ್ಮತಿಸಲಾಗಿದೆ.

ಹಿನ್ನೆಲೆ:

ಆಗಸ್ಟ್ 2015ರಲ್ಲಿ ಫಿಜಿ ಸರ್ಕಾರವು ಸುವಾದಲ್ಲಿ ಭಾರತೀಯ ಹೈ ಕಮಿಷನ್‍ನ ಕಟ್ಟಡವನ್ನು ನಿರ್ಮಿಸಲು 6,695 ಚದರ ಮೀಟರ್ ಭೂಮಿಯನ್ನು 99 ವರ್ಷಗಳ ಕಾಲ ವಾರ್ಷಿಕ ನೂರು ಎಫ್‍ಜೆ ಡಾಲರ್‍ನಂತೆ ಭೋಗ್ಯಕ್ಕೆ ನೀಡಲು ಮತ್ತು ಈ ಮೊತ್ತವನ್ನು ಐದು ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡಲು ಹಾಗೂ ಪ್ರತಿಯಾಗಿ ಭೂಮಿ ಕೊಡುವಂತೆ ಪ್ರಸ್ತಾವಿಸಿತ್ತು. ಫಿಜಿಯೊಂದಿಗಿನ ದ್ವಿಪಕ್ಷೀಯ ಸಂಬಂಧದ ಹಿನ್ನೆಲೆಯಲ್ಲಿ ಫಿಜಿ ಹೈ ಕಮಿಷನ್‍ಗೆ ವಾಣಿಜ್ಯ ದರದಿಂದ ವಿನಾಯಿತಿ ನೀಡಿ, ಭೂಮಿಗೆ ಪ್ರತಿಯಾಗಿ ಭೂಮಿ ನೀಡಲು ನಿರ್ಧರಿಸಲಾಗಿದೆ.