ಪಿಎಂಇಂಡಿಯಾ

ಇನ್ನು ಎರಡು ಮೂರು ದಿನಗಳ ಬಳಿಕ ನಾವು ಪವಿತ್ರ ರಕ್ಷಾ ಬಂಧನ ಹಬ್ಬ ಆಚರಿಸಲಿದ್ದೇವೆ. ನೀವೆಲ್ಲಾ ನನ್ನ ಸಹೋದರಿಯರು ನನಗಾಗಿ ಇಲ್ಲಿಗೆ ಬಹಳ ಆಕರ್ಷಕ ರಾಖಿಯೊಂದಿಗೆ ಬಂದಿದ್ದೀರಿ; ನಾನು ನಿಮಗೆ ಆಭಾರಿಯಾಗಿದ್ದೇನೆ. ನನ್ನ ಮೇಲೆ ಆಶೀರ್ವಾದದ ಹೂಮಳೆ ಸುರಿಸಿದ ಎಲ್ಲಾ ತಾಯಂದಿರಿಗೆ ಮತ್ತು ನನ್ನ ದೇಶದ ಎಲ್ಲಾ ಸಹೋದರಿಯರಿಗೆ ನನ್ನ ಹೃದಯ ತುಂಬಿದ ಕೃತಜ್ಞತೆಗಳು. ಅವರ ಆಶೀರ್ವಾದ ನನ್ನನ್ನು ಕಾಪಾಡಿಕೊಂಡು ಬಂದಿದೆ.
ರಕ್ಷಾಬಂಧನ ಹಬ್ಬ ಸನಿಹದಲ್ಲಿ ಇರುವಾಗ ಮತ್ತು ಗುಜರಾತಿನ 1 ಲಕ್ಷ ಕುಟುಂಬಗಳು ಸಹೋದರಿಯರ ಹೆಸರಿನಲ್ಲಿ ನೊಂದಾಯಿಸಲ್ಪಟ್ಟ ಅವರ ಮನೆಗಳನ್ನು ಪಡೆಯುತ್ತಿದ್ದಾರೆ. ರಕ್ಷಾಬಂಧನದ ಸಂದರ್ಭದಲ್ಲಿ ಇದು ದೊಡ್ಡ ಉಡುಗೊರೆ ಎಂದು ನಾನು ಭಾವಿಸುತ್ತೇನೆ.
ಮನೆ ಇಲ್ಲದಿದ್ದರೆ ಅನುಭವಿಸುವ ನೋವು ನನಗೆ ಗೊತ್ತಿದೆ. ಇಡೀ ಜೀವನವೇ ಕೊಳೆಗೇರಿಯಲ್ಲಿ ವಾಸಿಸುವುದರಲ್ಲಿ ಕಳೆದುಹೋಗುತ್ತದೆ. ಭವಿಷ್ಯ ಕರಾಳವಾಗಿರುತ್ತದೆ. ಪ್ರತೀ ಮುಂಜಾನೆ ಹೊಸ ಭರವಸೆಯೊಂದಿಗೆ ಎದ್ದವರು ದಿನದ ಅಂತ್ಯದಲ್ಲಿ ಅದು ಕರಗಿ ಹೋಗುವುದನ್ನು ಅನುಭವಿಸುತ್ತಾರೆ.
ಇದೆಲ್ಲದರ ಮಧ್ಯೆ ಒಬ್ಬರಿಗೆ ಅವರ ಹೆಸರಿನಲ್ಲಿ ಮನೆಯೊಂದು ನೊಂದಾಯಿಸಲ್ಪಟ್ಟಿದ್ದರೆ, ಅವರು ಕನಸು ಕಾಣತೊಡಗುತ್ತಾರೆ. ಆಗ ಇಡೀಯ ಕುಟುಂಬವೇ , ಅತ್ಯಂತ ಕಿರಿಯ ಸದಸ್ಯನಿಂದ ಹಿಡಿದು ಹಿರಿಯ ಸದಸ್ಯನವರೆಗೆ ಪ್ರತಿಯೊಬ್ಬರೂ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕಠಿಣ ದುಡಿಮೆ ಮಾಡತೊಡಗುತ್ತಾರೆ ಮತ್ತು ಅವರ ಜೀವನದಲ್ಲಿ ಪರಿವರ್ತನೆ ಕಾಣಸಿಗುತ್ತದೆ. <br><br>
ತಾಯಂದಿರಿಗೆ, ಸಹೋದರಿಯರಿಗೆ ಮತ್ತು 1 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಸಹೋದರನಾಗಿ ರಕ್ಷಾಬಂಧನಕ್ಕೆ ಮೊದಲು ಮನೆಗಳನ್ನು ಕೊಡುಗೆಯಾಗಿ ನೀಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.
ರಕ್ಷಾಬಂಧನದ ಪವಿತ್ರ ಸಂದರ್ಭದಲ್ಲಿ ತಾಯಂದಿರಿಗೆ ಮತ್ತು ಸಹೋದರಿಯರಿಗೆ ಕೊಡುಗೆಯಾಗಿ ನೀಡುವಂತಹ 600 ಕೋ.ರೂ.ಗಳ ಇನ್ನೊಂದು ಯೋಜನೆ ಇದೆ.ನೀರಿನ ಕೊರತೆಯ ಸಮಸ್ಯೆ ಹೆಚ್ಚಾಗಿ ಕಾಡುವುದು ಕುಟುಂಬವೊಂದರ ತಾಯಂದಿರು ಮತ್ತು ಸಹೋದರಿಯರಿಗೆ. ಇಂದು ಕೂಡಾ ನೀರಿನ ವ್ಯವಸ್ಥೆಯ ಹೊಣೆ ತಾಯಂದಿರದ್ದು ಮತ್ತು ಸಹೋದರಿಯರದ್ದು. ಸ್ವಚ್ಚ ಕುಡಿಯುವ ನೀರು ದೊರೆಯದಿದ್ದರೆ ಆ ಮನೆ ರೋಗಗಳ ತಾಣವಾಗುತ್ತದೆ. ಸ್ವಚ್ಚ ಕುಡಿಯುವ ನೀರು ಆ ಕುಟುಂಬವನ್ನು ರೋಗಗಳ ಹಿಡಿತದಿಂದ ಪಾರು ಮಾಡುತ್ತದೆ.
ನಾನು ನನ್ನ ಜೀವನದ ಸಾಕಷ್ಟು ಭಾಗವನ್ನು ಬುಡಕಟ್ಟು ಪ್ರದೇಶಗಳಲ್ಲಿ ಕಳೆದಿದ್ದೇನೆ. ನಾನು ಧರ್ಮಾಪುರ ಸಿದಾಂಬಡಿಯಲ್ಲಿ ನೆಲೆಸಿದ್ದಾಗ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಈ ವಲಯ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿತ್ತು, ಆದಾಗ್ಯೂ ದೀಪಾವಳಿಯ ಎರಡು ತಿಂಗಳ ಬಳಿಕ
ನೀರಿನ ಕೊರತೆ ಬಾಧಿಸುತ್ತಿತ್ತು. ನನಗೆ ಸ್ಪಷ್ಟವಾಗಿ ನೆನಪಿದೆ, ಆಗ ಇಡೀಯ ಧರ್ಮಾಪುರ, ಸೀದಾಂಬುರ್ , ಉಮರ್ ಗಾಂ ನಿಂದ ಹಿಡಿದು ಅಂಬಾಜಿವರೆಗೆ ಭಾರೀ ಮಳೆ ಬೀಳುತ್ತಿದ್ದರೂ ಆ ನೀರು ಹರಿದು ಸಮುದ್ರ ಸೇರುತ್ತಿತ್ತು. ಇದರ ಪರಿಣಾಮವಾಗಿ ಆ ಪ್ರದೇಶಗಳು ಬರ ಪೀಡಿತವಾಗಿರುತ್ತಿದ್ದವು.
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ,ಗುಜರಾತಿನ ಪೂರ್ವ ಬುಡಕಟ್ಟು ಪ್ರದೇಶಗಳಾದ ಉಮರ್ಗಾಂ ಮತ್ತು ಅಂಬಾಜಿ ನಡುವಿನ ಪ್ರತೀ ಗ್ರಾಮದಲ್ಲೂ ಮತ್ತು ಪ್ರತೀ ಮನೆಯಲ್ಲೂ ನಳ್ಳಿ ನೀರಿನ ವ್ಯವಸ್ಥೆ ಒದಗಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ.
ನೀವು ಈಗಷ್ಟೇ ನೋಡಿದ ಚಲನ ಚಿತ್ರದಲ್ಲಿ
10 ಯೋಜನೆಗಳನ್ನು ಪ್ರಸ್ತಾಪಿಸಿದೆ. ಇಂದು ಅವುಗಳಲ್ಲಿ 10ನೇಯ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಈ ಚಲನಚಿತ್ರವನ್ನು ನೋಡಿದ ಜನರು ನೀರು ಕಟ್ಟಡದ 200 ನೇ ಮಹಡಿವರೆಗೆ ತಲುಪುವುದನ್ನು ನೋಡಿ ಆಶ್ಚರ್ಯ ಚಕಿತರಾಗಿರಬಹುದು. ನದಿಯನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ದು ,ಅಲ್ಲಿಂದ ಕೆಳಗಿನ ಪ್ರದೇಶಗಳಲ್ಲಿರುವ ಜನರಿಗೆ ನೀರನ್ನು ವಿತರಿಸಲಾಗುತ್ತದೆ. ಇದು ತಂತ್ರಜ್ಞಾನದ ಪವಾಡ.
ನಮ್ಮ ದೇಶದಲ್ಲಿ ಗಿರ್
ಅರಣ್ಯ ದುರ್ಗಮ ಪ್ರದೇಶದ
ಏಕೈಕ ಮತದಾರನಿಗಾಗಿ ಮತಗಟ್ಟೆ
ಇದ್ದು, ಇದು ವಿಶ್ವದಲ್ಲಿಯೇ ಭಾರತೀಯ ಚುನಾವಣೆಯ ಮತ್ತು ಮತದಾನದ ಅತ್ಯಂತ ಜನಪ್ರಿಯ ಸಂಗತಿ .ಇದು ಪ್ರಮುಖ ಸುದ್ದಿ.
ಈ ಹೊಸ ಬೆಳವಣಿಗೆ ಒಂದು ಅದ್ಭುತ
ಆಗಲಿದೆ ಎಂದು ನಾನು ನಂಬುತ್ತೇನೆ!.
200-300 ಮನೆಗಳಿರುವ ಗ್ರಾಮಕ್ಕೆ ನೀರು ಪೂರೈಸಲು ಸೂಕ್ಷ್ಮ ಚಿಂತನೆಯ ಸರಕಾರ
200 ನೇ ಮಹಡಿಯಷ್ಟು ಎತ್ತರಕ್ಕೆ ನೀರನ್ನು ಕೊಂಡೊಯ್ಯುತ್ತದೆ. ನಮ್ಮ ದೇಶದ ಪ್ರತೀ ನಾಗರಿಕನ ವಿಷಯದಲ್ಲೂ ನಮ್ಮ ಅರ್ಪಣಾ ಭಾವಕ್ಕೆ ಇದು ಜೀವಂತ ಉದಾಹರಣೆ.
ಈ ಮೊದಲೂ ಬುಡಕಟ್ಟು
ಜನಾಂಗದ ಮುಖ್ಯಮಂತ್ರಿಗಳನ್ನು ಹೊಂದಿದ್ದ ಸರಕಾರಗಳಿದ್ದವು. ನಾನು ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಬುಡಕಟ್ಟು ಮುಖ್ಯಮಂತ್ರಿ ಇದ್ದರು. ನಾನು ಮುಖ್ಯಮಂತ್ರಿಯಾದ ಬಳಿಕ ಈ ಗ್ರಾಮಗಳಿಗೆ ಭೇಟಿ ನೀಡಿದಾಗ , ಅಲ್ಲಿ ನೀರಿನ ಟ್ಯಾಂಕುಗಳಿವೆ, ಆದರೆ ಒಂದು ತೊಟ್ಟು ಕೂಡಾ ನೀರಿಲ್ಲದಿರುವುದು ನನ್ನ ಗಮನಕ್ಕೆ ಬಂದಿತು. ಆ ಗ್ರಾಮಗಳಿಗೆ ನೀರು ಒದಗಿಸಿಕೊಡುವ ಅವಕಾಶ ನನಗೆ ಸುದೈವವಶಾತ್ ಒದಗಿ ಬಂದಿತು.
ಹಾದಿಯಲ್ಲಿ ಹಾದು ಹೋಗುವವರಿಗಾಗಿ ಯಾರಾದರೂ ಒಂದೆರಡು
ಮಡಿಕೆಗಳಲ್ಲಿ ನೀರಿಟ್ಟರೆ ಹಲವಾರು ವರ್ಷ ಜನರು ಆ ಕುಟುಂಬದತ್ತ ಗೌರವ ಮತ್ತು ಹೆಮ್ಮೆಯಿಂದ ನೋಡುತ್ತಾರೆ.
ಇಂದು ಕೂಡಾ ಗುಜರಾತ್ ಮತ್ತು ರಾಜಸ್ಥಾನದ ಗ್ರಾಮಗಳಲ್ಲಿ ನೀರು ಒದಗಿಸಿದ್ದಕ್ಕಾಗಿ ಲಖಾ ಬಾಲಧರ ಅವರ ಕಥೆಗಳನ್ನು ಜನರು ಹೇಳುತ್ತಿರುತ್ತಾರೆ. ಯಾಕೆ ?. ಯಾಕೆಂದರೆ ಅವರು ಜನರಿಗೆ ನೀರು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಿದರು ಎಂಬುದಕ್ಕಾಗಿ. ಗುಜರಾತ್ ಸರಕಾರ ನಳ್ಳಿಗಳ ಮೂಲಕ ನೀರು ಒದಗಿಸುವ ಆಂದೋಲನ ಕೈಗೆತ್ತಿಕೊಳ್ಳುವುದನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ.
ನಾವು ಕೆಲವು ನಿರ್ಣಾಯಕ ಪ್ರಶ್ನೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಭವಿಷ್ಯದಲ್ಲಿ ಗುಜರಾತ್ ಹೇಗಿರಬೇಕು?. ಬಡವರ ಜೀವನ ಹೇಗಿರಬೇಕು? ನಮ್ಮ ಕನಸುಗಳೇನು ಮತ್ತು ಆ ಕನಸುಗಳನ್ನು ನನಸು ಮಾಡಲು ನಾವು ಕೈಗೊಳ್ಳುವ ಕ್ರಮಗಳೇನು?
ನೀವು ನೋಡಿರಬಹುದು , ಬರೇ ಅರ್ಧ ಗಂಟೆಯಿಂದ 45 ನಿಮಿಷಗಳ ಒಳಗೆ ನನಗೆ ಇಡೀ ಗುಜರಾತನ್ನು ಸುತ್ತುವ ಅವಕಾಶ ದೊರೆಯಿತು. ನಾನು ಪ್ರತೀ ಜಿಲ್ಲೆಗಳಿಗೆ ಭೇಟಿ ನೀಡಿ ತಾಯಂದಿರು ಮತ್ತು ಸಹೋದರಿಯರ ಜೊತೆ ಮಾತನಾಡಿದ್ದೇನೆ. ಅವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ನಾನು ಕೇಳಿಸಿಕೊಳ್ಳುತ್ತಿರುವಾಗ ನನ್ನ ಕಣ್ಣುಗಳು ಅವರ ಮನೆಯ ಮೇಲಿದ್ದವು. ನಾನು ಅವರ ಮನೆಗಳನ್ನು ಪರೀಕ್ಷಿಸುತ್ತಿದ್ದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಇಷ್ಟೊಂದು ಚೆಂದದ ಮನೆಗಳ ನಿರ್ಮಾಣ ಹೇಗಾಯಿತು ಎಂಬ ಬಗ್ಗೆ ನಿಮಗೆ ಅಚ್ಚರಿಯಾಗಿರಬಹುದಲ್ಲವೇ ? . ಇದು ಸಾಧ್ಯವಾಗಿರುವುದು ಮಧ್ಯವರ್ತಿಗಳ ಹಾವಳಿ ನಿವಾರಣೆಯಾಗಿರುವುದರಿಂದ ಮತ್ತು ಹಣಕಾಸಿನಲ್ಲಿ ಕಡಿತ ಮಾಡದೇ ಇರುವುದರಿಂದ.
ದಿಲ್ಲಿಯಲ್ಲಿ ಕೇಂದ್ರ ಸರಕಾರ ಮಂಜೂರು ಮಾಡುವ ಪ್ರತಿಯೊಂದು ರೂಪಾಯಿಯ ಇಡೀ ನೂರು ಪೈಸೆ ಕೂಡಾ ಬಡವರ ಮನೆಗಳಿಗೆ ತಲುಪುತ್ತಿರುವುದರಿಂದ ಇದು ಸಾಧ್ಯವಾಗಿದೆ. ಈ ಸರಕಾರಕ್ಕೆ ಮಾಧ್ಯಮಗಳ, ಪತ್ರಿಕೆಗಳ, ಸಾರ್ವಜನಿಕರ ಎದುರು ಓರ್ವ ತಾಯಿಯನ್ನು ಅವರು ಲಂಚ ಕೊಡಬೇಕಾಯಿತೇ , ಇಲ್ಲವೇ ಎಂದು ಕೇಳುವ ಧೈರ್ಯ ಇದೆ. ಅವರು ಯಾರಾದರೂ ಮಧ್ಯವರ್ತಿಗಳಿಗೆ ಏನಾದರೂ ಕೊಡಬೇಕಾಯಿತೇ ? ಎಂದು ಕೇಳುವ ಧೈರ್ಯ ಇದೆ.
ನಾವು ನಮಗಾಗಿ
ಸಕಾರಾತ್ಮಕ ಚಿತ್ರಣ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದೇವೆ. ತಾಯಂದಿರು ಮತ್ತು ಸಹೋದರಿಯರು “ಇಲ್ಲ , ನಾವು ಯಾರಿಗೂ ಒಂದು ರೂಪಾಯಿಯನ್ನು ಕೊಡುವ ಪ್ರಸಂಗ ಬರಲಿಲ್ಲ . ನಾವು ಯೋಜನೆಯಡಿ ನಮ್ಮ ಹಕ್ಕನ್ನು ಪಡೆದುಕೊಂಡಿದ್ದೇವೆ” ಎಂಬುದನ್ನು ಆತ್ಮವಿಶ್ವಾಸ ಮತ್ತು ಸಮಾಧಾನದಿಂದ ಹೇಳುತ್ತಿರುವುದು ನನಗೆ ಸಂತೋಷ ತಂದಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ನೀವು ನೋಡುವಾಗ , ಸರಕಾರದಿಂದ ನಿರ್ಮಿಸಲಾಗುವ ಮನೆಗಳು ಇಷ್ಟೊಂದು ಉತ್ತಮವಾಗಿರುತ್ತವೆಯೇ! , ಎಂಬ ಭಾವನೆ ನಿಮ್ಮಲ್ಲಿ ಮೂಡಬಹುದು. ಸರಕಾರ ಈ ಮನೆಗಳ ನಿರ್ಮಾಣಕ್ಕೆ ಹಣಕಾಸನ್ನು ಒದಗಿಸಿದೆ ಎಂಬುದು ನಿಜ. ಆದರೆ ಇದೇ ವೇಳೆಗೆ ಇವುಗಳನ್ನು ನಿರ್ಮಾಣ ಮಾಡಿದ್ದು ಆಯಾ ಕುಟುಂಬಗಳ ಕಠಿಣ ಪರಿಶ್ರಮ. ಅವರು ಮನೆಯ ವಿನ್ಯಾಸವನ್ನು ಮಾಡಿದರು ಮತ್ತು ನಿರ್ಮಾಣ ಮಾಡಲು ಅವಶ್ಯವಾದ ವಸ್ತುಗಳ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡರು.
ನಾವು ನಿರ್ಮಾಣ ಕಾಮಗಾರಿಯನ್ನು ಸರಕಾರಿ ಗುತ್ತಿಗೆದಾರರಿಗೆ
ವಹಿಸಲಿಲ್ಲ.
ಬದಲು ನಾವು ಕಾಮಗಾರಿಯನ್ನು ಆ ಕುಟುಂಬಕ್ಕೇ ವಹಿಸುತ್ತೇವೆ. ಆ ಕುಟುಂಬ ತನ್ನದೇ ಮನೆಯನ್ನು ಕಟ್ಟಿಕೊಂಡಾಗ , ಅವರ ಸಂತೋಷ ವಿವರಣೆಗೆ ನಿಲುಕದ್ದು, ಮತ್ತು ಗುಜರಾತಿನ ಪ್ರತೀ ಗ್ರಾಮದ ಪ್ರತೀ ಕುಟುಂಬವೂ ಸುಂದರವಾದ ಮನೆಗಳನ್ನು ಕಟ್ಟಿಕೊಂಡಿದೆ.
ಬಡವರನ್ನು ಸಶಕ್ತೀಕರಣಗೊಳಿಸುವ ಮೂಲಕ ನಾವು ಬಡತನ ನಿರ್ಮೂಲನೆ ಮಾಡುವ ಯೋಜನೆಯನ್ನು ಅನುಷ್ಟಾನಿಸಿದ್ದೇವೆ. ಅಲ್ಲಿ ಬ್ಯಾಂಕುಗಳಿದ್ದವು, ಆದರೆ ಅವುಗಳಲ್ಲಿ ಬಡವರಿಗೆ ಪ್ರವೇಶ ಇರಲಿಲ್ಲ. ಪ್ರಧಾನ ಮಂತ್ರಿ ಜನ್ ಧನ ಯೋಜನೆ ಮೂಲಕ ನಾವು ಬ್ಯಾಂಕುಗಳನ್ನು ಬಡವರ ಮನೆ ಬಾಗಿಲಿಗೆ ತಂದೆವು.
ಬರೇ ಶ್ರೀಮಂತರು ಮಾತ್ರವೇ ಮನೆಗಳಿಗೆ ವಿದ್ಯುತ್ ಹೊಂದಿದ್ದ ಕಾಲವಿತ್ತು. ಬಡವರು ತಮ್ಮ ಮನೆಗಳು ಎಂದಾದರೂ ಕತ್ತಲೆಯಿಂದ ಮುಕ್ತವಾದಾವೇ ಎಂದು ಯೋಚಿಸುತ್ತಿದ್ದರು. ಇಂದು ಉಜಾಲಾ ಯೋಜನೆಯ ಮೂಲಕ ಮತ್ತು ಸೌಭಾಗ್ಯ ಯೋಜನೆಯ ಮೂಲಕ ನಾವು ಪ್ರತೀ ಮನೆಗಳಿಗೆ ವಿದ್ಯುತ್ ಒದಗಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಮುಂದಿನ 1-1.5 ವರ್ಷಗಳಲ್ಲಿ , ಭಾರತದಲ್ಲಿ ವಿದ್ಯುತ್ ಸಂಪರ್ಕರಹಿತವಾದ ಯಾವುದೇ ಮನೆ ಇರುವುದಿಲ್ಲ.
ಮನೆಗಳಲ್ಲಿ ಶೌಚಾಲಯ, ವಿದ್ಯುತ್, ಕುಡಿಯುವ ನೀರು ಮತ್ತು ಅಡುಗೆ ಅನಿಲ ಭರವಸೆಯೊಂದಿಗೆ ಅವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಡಿ ಇಟ್ಟಿದ್ದೇವೆ.
ಸಹೋದರ ಮತ್ತು ಸಹೋದರಿಯರೇ,
ನೀವು, ಗುಜರಾತಿನ ಜನತೆ ನನ್ನನ್ನು ಪೋಷಿಸಿದ್ದೀರಿ. ಮತ್ತು ನನ್ನನ್ನು ಬೆಳೆಸಿದ್ದೀರಿ. ಗುಜರಾತ್ ನನಗೆ ಬಹಳಷ್ಟನ್ನು ಕಲಿಸಿದೆ. ನಾನು ನಿಮ್ಮಿಂದ ಏನನ್ನು ಕಲಿತಿದ್ದೇನೋ, ಅದರಿಂದ ನಾನು ಕಾಲಮಿತಿಯೊಳಗೆ ಕನಸುಗಳನ್ನು ಈಡೇರಿಸಲು ನಾನು ಪ್ರಯತ್ನ ಪಡುತ್ತಿದ್ದೇನೆ. 2022ರ ವೇಳೆಗೆ ಭಾರತ ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುತ್ತಿರುವಾಗ ದೇಶದ ಪ್ರತಿಯೊಂದು ಕುಟುಂಬವೂ ಮನೆಯನ್ನು ಹೊಂದಿರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.
ರಾಜಕಾರಣಿಗಳ ಅದ್ದೂರಿ ಮನೆಗಳನ್ನು ಸುದ್ದಿಯಲ್ಲಿ ತೋರಿಸುತ್ತಿದ್ದ ಕಾಲವೊಂದಿತ್ತು. ; ಆದರೆ ಈಗ ಮಾಧ್ಯಮಗಳು ಬಡವರ ಅದ್ದೂರಿ ಮನೆಗಳ ಬಗ್ಗೆ ಮಾತನಾಡುತ್ತಿವೆ.
ಇಂತಹ ಸಂಧರ್ಭದಲ್ಲಿ ವಲ್ಸಾಡ್ ಗೆ ಬಂದು ವೀಡಿಯೋ ಕಾನ್ಫರೆನ್ಸ್ ನಡೆಸಿ ಅವರ ಗೃಹ ಪ್ರವೇಶದ ಉತ್ಸಾಹ ಮತ್ತು ಸಂತೋಷದಲ್ಲಿ ಪಾಲ್ಗೊಳ್ಳುವಂತಹ ಪ್ರಧಾನ ಮಂತ್ರಿ ಇಲ್ಲಿದ್ದಾರೆ.
ಸಹೋದರರೇ ಮತ್ತು ಸಹೋದರಿಯರೇ,
ಕಳೆದ ವಾರ ನಮ್ಮೆಲರಿಗೂ ನೋವಿನ ಅನುಭವ ನೀಡಿದ ಸಮಯ. ಅಟಲ್ ಬಿಹಾರಿ ವಾಜಪೇಯಿ ಜೀ ನಿಧನರಾದರು, ಆದರೆ ಅವರ ಹೆಸರಿನಲ್ಲಿ ಜಾರಿಗೆ ತರಲಾದ ಯೋಜನೆ ಅಂದರೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಗ್ರಾಮಗಳನ್ನು ಉತ್ತಮ ರಸ್ತೆಗಳೊಂದಿಗೆ ಬೆಸೆಯುವ ಯೋಜನೆ. ನಿಗದಿತ ಅವಧಿಯಲ್ಲಿ ಈ ಕೆಲಸ ಪೂರ್ಣಗೊಳಿಸಲು ತ್ವರಿತಗತಿಯಿಂದ ಕಾರ್ಯನುಷ್ಟಾನ ಮಾಡಲಾಗುತ್ತಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ , ಅಮೂಲಾಗ್ರ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಿಮಗೆ ಗೊತ್ತಿರಬಹುದು, ಯಾವುದೋ ದೂರದ ಹಳ್ಳಿಯಲ್ಲಿ ನೆಲೆಸಿರುವ ಹೆಣ್ಣು ಮಕ್ಕಳಿಗೆ ಕೌಶಲ್ಯ ವೃದ್ಧಿಯ ಬಳಿಕ ಕೆಲಸಗಳು ದೊರೆಯುತ್ತಿವೆ. ಅದಕ್ಕೆ ಸಾಕ್ಷಾಧಾರಗಳನ್ನು ಒದಗಿಸುವ ಅವಕಾಶ ನನಗೆ ಲಭಿಸಿದೆ. .
ದೇಶದ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಬಹುದಾಗಿದೆ, ಸಾಮಾನ್ಯ ಜನತೆಯ ಕನಸುಗಳನ್ನು ಈಡೇರಿಸಬಹುದಾಗಿದೆ. ಮತ್ತು ನಾವು ಅವುಗಳನ್ನು ಈಡೇರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
ವಲ್ಸಾಡಿನ ನನ್ನ ಸಹೋದರರೇ ಮತ್ತು ಸಹೋದರಿಯರೇ,
ಕೆಲದಿನಗಳ ಹಿಂದೆ ನಾನು ಈ ಸ್ಥಳಕ್ಕೆ ಭೇಟಿ ಕೊಡಬೇಕಾಗಿತ್ತು. ಆದರೆ ಅದನ್ನು ಮಳೆಯ ಕಾರಣದಿಂದಾಗಿ ರದ್ದು ಮಾಡಬೇಕಾಯಿತು. ಈಚಿನ ದಿನಗಳಲ್ಲಿ ಮಳೆ ಬರುವಾಗ ಅದು ಭಾರೀ ಪ್ರಮಾಣದಲ್ಲಿ ಸುರಿಯುತ್ತದೆ. ಮಳೆ ಬಾರದೇ ಇರುವಾಗ ಅಲ್ಲಿ ವಾರಗಟ್ಟವೆ ಶುಷ್ಕ, ಒಣ ವಾತಾವರಣ ಏರ್ಪಡುತ್ತದೆ. ಗುಜರಾತಿನ ಕೆಲವು ಪ್ರದೇಶಗಳು ಮಳೆ ನೀರಿನಿಂದಾಗಿ ಪ್ರವಾಹ ಪೀಡಿತವಾಗಿದ್ದರೆ, ಇತರ ಕೆಲವು ಪ್ರದೇಶಗಳಲ್ಲಿ ಮಳೆಯೇ ಇಲ್ಲ.!. ಆದಾಗ್ಯೂ ಗುಜರಾತಿನ ಕೆಲವು ಭಾಗಳಿಗಾದರೂ ವರುಣನ ಆಶೀರ್ವಾದ ಆಗಿದೆ. ಬರಲಿರುವ ವರ್ಷ ಉತ್ತಮವಾಗಿರಲಿದೆ!. ಇದರಿಂದ ಕೃಷಿಗೆ ಹೆಚ್ಚು ಲಾಭವಾಗುತ್ತದೆ ಎಂಬುದಾಗಿ ನಾನು ಭಾವಿಸುತ್ತೇನೆ.
ವಲ್ಸಾಡ್ ನ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ,
ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ತಾಳ್ಮೆಯಿಂದ ಇಷ್ಟು ಧೀರ್ಘ ಕಾಲ ಕುಳಿತಿದ್ದಕ್ಕೆ ತಮಗೆ ಧನ್ಯವಾದಗಳು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಸಲ್ಲಿಸದೇ ಇರಲಾರೆ.
ಎಲ್ಲಾ ತಾಯಂದಿರಿಗೆ ಮತ್ತು ಸಹೋದರಿಯರಿಗೆ ರಕ್ಷಾ ಬಂಧನದ ಸಂಧರ್ಭದಲ್ಲಿ ನನ್ನ ಶುಭಾಶಯಗಳು.
ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.
*****
I got an opportunity to talk to women across the state today who got their homes under PM Awas Yojana.
— PMO India (@PMOIndia) August 23, 2018
The wonderful homes under PM Awas Yojana are being made possible because there are no middlemen: PM
It is my dream, it is our endeavour to ensure that every Indian has his own house by 2022.
— PMO India (@PMOIndia) August 23, 2018
Till now, we only heard about politicians getting their own homes.
Now, we are hearing about the poor getting their own homes: PM
Today, over a lakh women from Gujarat got Raksha Bandhan gifts- their own homes!
— Narendra Modi (@narendramodi) August 23, 2018
At the programme in Valsad, I witnessed the handing over of these houses and gave certificates as well as employment letters to beneficiaries of various schemes. https://t.co/ghlDKct2rC pic.twitter.com/hMHgjzO87H
In Valsad, laid the foundation stone for the Astole Water Supply Scheme. This scheme will have an extremely positive impact on the lives of the people in the region. By ensuring clean drinking water, it will save several lives from diseases. pic.twitter.com/fLP2UxDccS
— Narendra Modi (@narendramodi) August 23, 2018