ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಯುನೈಟೆಡ್ ಕಿಂಗ್‌ಡಮ್ ಪ್ರಧಾನಮಂತ್ರಿ ಘನತೆವೆತ್ತ ಸರ್ ಕೀರ್ ಸ್ಟಾರ್ಮರ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಕಳೆದ ವರ್ಷ ಪ್ರಧಾನ ಮಂತ್ರಿಗಳ ಪರಸ್ಪರ ಭೇಟಿಯ ನಂತರ ಭಾರತ-ಯುಕೆ ಸಂಬಂಧಗಳಲ್ಲಿ ಆಗಿರುವ ಸದೃಢ ವೇಗವನ್ನು ಇಬ್ಬರೂ ನಾಯಕರು ಪರಿಶೀಲಿಸಿದರು ಮತ್ತು ವ್ಯಾಪಾರ ಹಾಗೂ ಆರ್ಥಿಕ ಬೆಳವಣಿಗೆ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಕ್ರಿಯೆ ಮತ್ತು ಹಸಿರು ಇಂಧನ, ತಂತ್ರಜ್ಞಾನ ಮತ್ತು ನಾವೀನ್ಯತೆ ಹಾಗೂ ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿಷನ್ 2035 ರ ಎಲ್ಲಾ ವಲಯಗಳಲ್ಲಿನ ಪ್ರಗತಿಯನ್ನು ಸ್ವಾಗತಿಸಿದರು. ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಆದಷ್ಟು ಶೀಘ್ರ ಜಾರಿಗೊಳಿಸಲು ಎದುರುನೋಡುತ್ತಿರುವುದಾಗಿ ಉಭಯ ನಾಯಕರು ಹೇಳಿದರು. ಅವರು ಸದೃಢವಾದ ಶಿಕ್ಷಣ ಪಾಲುದಾರಿಕೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು, ಲಿವರ್‌ಪೂಲ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಅನ್ನು ಸ್ಥಾಪಿಸುವುದು ಮತ್ತು ಯಾರ್ಕ್ ವಿಶ್ವವಿದ್ಯಾಲಯ ಮತ್ತು ಬ್ರಿಸ್ಟಲ್ ವಿಶ್ವವಿದ್ಯಾಲಯಗಳು ಮುಂಬೈನಲ್ಲಿರುವ ತಮ್ಮ ಕ್ಯಾಂಪಸ್‌ಗಳನ್ನು ಆರಂಭಿಸುವ ಕುರಿತು ಆಗಿರುವ ಇತ್ತೀಚಿನ ಪ್ರಗತಿಯನ್ನು ಅವರು ಉಲ್ಲೇಖಿಸಿದರು.
ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುಕೆಯ ಬಲವಾದ ಪ್ರಾತಿನಿಧ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸ್ಟಾರ್ಮರ್ ಅವರಿಗೆ ಧನ್ಯವಾದ ಸಲ್ಲಿಸಿದರು ಮತ್ತು ಇತ್ತೀಚೆಗೆ ಭಾರತ-ಯುಕೆ ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಣಿ (ಕ್ರಿಟಿಕಲ್ ಮಿನರಲ್ಸ್ ಗ್ಲೋಬಲ್ ಸಪ್ಲೈ ಚೈನ್) ವೀಕ್ಷಣಾಲಯವನ್ನು ಆರಂಭಿಸುವುದು ಸೇರಿದಂತೆ ತಂತ್ರಜ್ಞಾನ ಭದ್ರತಾ ಉಪಕ್ರಮದ ಅಡಿಯಲ್ಲಿ ಸ್ಥಿರವಾದ ಪ್ರಗತಿಯನ್ನು ಸ್ವಾಗತಿಸಿದರು.
ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಸೇರಿದಂತೆ ಪರಸ್ಪರ ಕಾಳಜಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ವಿಚಾರ ವಿನಿಮಯ ಮಾಡಿಕೊಂಡರು. ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.
*****
PM @narendramodi met with PM @Keir_Starmer in Evian. The leaders reviewed the strong momentum in India-UK relations, including the opportunities created by the recently concluded trade agreement. They discussed expanding cooperation in skill development, sports, AI, innovation… pic.twitter.com/QlTYFgpZfe
— PMO India (@PMOIndia) June 16, 2026
Had a wonderful meeting with PM Keir Starmer in Evian. The last year has been outstanding as far as India-UK relations are concerned. The trade deal has opened many avenues of economic cooperation. Today’s talks focused on how to add even more momentum to India-UK ties.… pic.twitter.com/dAazvLxBiX
— Narendra Modi (@narendramodi) June 16, 2026
We discussed ways to work closely in areas like innovation, AI, skill development, sports and more. We also discussed how to increase investment linkages for the benefit of the people of our nations.
— Narendra Modi (@narendramodi) June 16, 2026