ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರ ಶಿಕ್ಷಣ ಮತ್ತು ಸೇವೆಗಳ ನಿಯಂತ್ರಣ ಮತ್ತು ಗುಣಮಟ್ಟಕ್ಕಾಗಿ ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿ ಮಸೂದೆ, 2018ಕ್ಕೆ ತನ್ನ ಅನುಮೋದನೆ ನೀಡಿದೆ. ಈ ಮಸೂದೆಯುಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಗೆ ಗುಣಮಟ್ಟ ನಿಗದಿ ಮತ್ತು ಅನುಕೂಲ ಕಲ್ಪಿಸುವುದಕ್ಕೆ ಮಹತ್ವದ ಪಾತ್ರ ವಹಿಸುವ ಭಾರತೀಯ ಅಲೈಡ್ ಮತ್ತು ಆರೋಗ್ಯ ಆರೈಕೆ ಮಂಡಳಿ ಮತ್ತು ಅದಕ್ಕೆ ಅನುಗುಣವಾಗಿ ರಾಜ್ಯ ಅಲೈಡ್ ಮತ್ತು ಆರೋಗ್ಯ ಸೇವೆ ಮಂಡಳಿಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ.
ವಿವರಗಳು:
i. ಕೇಂದ್ರೀಯ ಮತ್ತು ಅದಕ್ಕೆ ಅನುಗುಣವಾಗಿ ರಾಜ್ಯಗಳಲ್ಲಿ ಅಲೈಡ್ ಮತ್ತು ಆರೋಗ್ಯ ಆರೈಕೆ ಮಂಡಳಿಗಳ; ಅಲೈಡ್ ಮತ್ತು ಆರೋಗ್ಯ ಆರೈಕೆ ವಾಹಿನಿಯಲ್ಲಿ 15 ಪ್ರಮುಖ ವೃತ್ತಿಪರ ಪ್ರವರ್ಗಗಳು ಸೇರಿದಂತೆ 53 ವೃತ್ತಿ ಸ್ಥಾಪನೆ.
ii. ಈ ಮಸೂದೆಯು ಕೇಂದ್ರೀಯ ಮತ್ತು ರಾಜ್ಯ ಮಂಡಳಿಗಳ ರಚನೆ, ಸಂವಿಧಾನ, ಸಂಯೋಜನೆಗೆ ಅವಕಾಶ ಕೊಡುತ್ತದೆ,ಉದಾಹರಣೆಗೆ ನೀತಿ ಮತ್ತು ಗುಣಮಟ್ಟ ರೂಪಿಸುವುದು, ವೃತ್ತಿಪರ ನಡೆಯ ನಿಯಂತ್ರಣ, ಸಕ್ರಿಯ ರಿಜಿಸ್ಟರ್ ಗಳ ರಚನೆ ಮತ್ತು ನಿರ್ವಹಣೆ, ಪರೀಕ್ಷೆಗಳಿಗೆ ಒಳ ಬರಲು ಮತ್ತು ಹೊರ ಹೋಗಲು ಏಕ ಪ್ರವೇಶಕ್ಕೆ ಅವಕಾಶ ಇತ್ಯಾದಿ.
iii. ಕೇಂದ್ರೀಯ ಮಂಡಳಿಯು 47 ಸದಸ್ಯರನ್ನು ಒಳಗೊಂಡಿರುತ್ತದೆ, ಇದರಲ್ಲಿ 14 ಸದಸ್ಯರು ವೈವಿಧ್ಯಮಯ ಮತ್ತು ಸಂಬಂಧಿತ ಕಾರ್ಯ ಮತ್ತು ಕಾರ್ಯಗಳನ್ನು ಪ್ರತಿನಿಧಿಸುವ ಪದನಿಮಿತ್ತ ಅಧಿಕಾರಿಯಾಗುತ್ತಾರೆ ಮತ್ತು ಉಳಿದ 33 ಪದನಿಮಿತ್ತರಲ್ಲದ ಸದಸ್ಯರು, ಮುಖ್ಯವಾಗಿ 15 ವೃತ್ತಿ ಪ್ರವರ್ಗಗಳನ್ನು ಪ್ರತಿನಿಧಿಸುವವರಾಗಿರುತ್ತಾರೆ.
iv. ರಾಜ್ಯ ಮಂಡಳಿಗಳು ಕೇಂದ್ರೀಯ ಮಂಡಳಿಯನ್ನು ಪ್ರತಿಬಿಂಬಿಸುವಂತೆ ರೂಪಿಸಲಾಗಿದೆ, ಇದರಲ್ಲಿ 7 ಪದನಿಮಿತ್ತ ಮತ್ತು 21 ಪದನಿಮಿತ್ತರಲ್ಲದ ಸದಸ್ಯರಿದ್ದು, ಅಧ್ಯಕ್ಷರನ್ನು ಪದನಿಮಿತ್ತರಲ್ಲದ ಸದಸ್ಯರಲ್ಲಿ ಆಯ್ಕೆ ಮಾಡಲಾಗುತ್ತದೆ.
v. ಕೇಂದ್ರೀಯ ಮತ್ತು ರಾಜ್ಯ ಮಂಡಳಿಗಳ ಅಡಿಯಲ್ಲಿ ವೃತ್ತಿಪರ ಸಲಹಾ ಕಾಯಗಳು ಸಮಸ್ಯೆಗಳನ್ನು ಸ್ವತಂತ್ರವಾಗಿ ಪರಾಮರ್ಶಿಸಿ, ನಿರ್ದಿಷ್ಟ ಗುರುತಿಸಲಾದ ಪ್ರವರ್ಗಕ್ಕೆ ಸಂಬಂಧಿಸಿದಂತೆ ತನ್ನ ಶಿಫಾರಸುಗಳನ್ನು ಒದಗಿಸುತ್ತದೆ.
vi. ಈ ಮಸೂದೆ ವೃತ್ತಿಗೆ ಸೇರಿದ ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಮೇಲೆ ಸವಾರಿ ಮಾಡಬಲ್ಲ ಒಂದು ಪರಿಣಾಮವನ್ನು ಹೊಂದಿರುತ್ತದೆ.
vii. ರಾಜ್ಯ ಮಂಡಳಿಗಳು ಅಲೈಡ್ ಮತ್ತು ಆರೋಗ್ಯ ಆರೈಕೆ ಸಂಸ್ಥೆಗಳ ಮಾನ್ಯತೆಯನ್ನು ನಿರ್ವಹಿಸುತ್ತವೆ.
viii. ದುರಾಚಾರಗಳನ್ನು ತಡೆಯಲು ಈ ಮಸೂದೆಯಲ್ಲಿ ಅಪರಾಧ ಮತ್ತು ದಂಡದ ಅಂಶವನ್ನೂ ಸೇರಿಸಲಾಗಿದೆ.
ix. ಈ ಮಸೂದೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿಯಮ ರೂಪಿಸಲು ಅಧಿಕಾರ ನೀಡುತ್ತದೆ.
x. ಪರಿಶಿಷ್ಟಗಳನ್ನು ತಿದ್ದುಪಡಿ ಮಾಡಲು ಅಥವಾ ಸೇರಿಸಲು ಹಾಗೂ ನಿಯಮಗಳನ್ನು ರೂಪಿಸಲು ಮಂಡಳಿಗೆ ನಿರ್ದೇಶನ ನೀಡುವ ಅಧಿಕಾರನ್ನು ಕೇಂದ್ರ ಸರ್ಕಾರ ಹೊಂದಿರುತ್ತದೆ.
ಗುರಿಗಳು:
· ಕಾಯಿದೆ ಆದ ಆರು ತಿಂಗಳುಗಳ ಒಳಗಾಗಿ ಮಧ್ಯಂತರ ಮಂಡಳಿಯನ್ನು ರಚಿಸಲಾಗುವುದು, ಕೇಂದ್ರೀಯ ಮಂಡಳಿ ಸ್ಥಾಪಿಸುವವರೆಗೂ ಎರಡು ವರ್ಷಗಳ ಕಾಲ ಇದು ಅಧಿಕಾರ ಹೊಂದಿರುತ್ತದೆ.
· ವಿವಿಧ ಮೂಲಗಳಿಂದ ನಿಧಿ ಸ್ವೀಕರಿಸುವ ಅವಕಾಶದೊಂದಿಗೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಮಂಡಳಿಗಳನ್ನು ಸಾಂಸ್ಥಿಕ ಕಾಯದಂತೆ ಸ್ಥಾಪಿಸಬೇಕು.
· ಅಗತ್ಯಕ್ಕೆ ತಕ್ಕಂತೆ ಮಂಡಳಿಗಳಿಗೆ ಕೇಂದ್ರ ಮತ್ತು ರಾಜ್ಯಗಳಿಂದ ಅನುದಾನ ನೀಡಿಕೆ ಮೂಲಕ ಬೆಂಬಲ ನೀಡಲಾಗುವುದು. ಆದಾಗ್ಯೂ, ರಾಜ್ಯ ಸರ್ಕಾರ ತನ್ನ ಅಸಹಾಯಕತೆ ವ್ಯಕ್ತಪಡಿಸಿದಲ್ಲಿ, ಕೇಂದ್ರ ಸರ್ಕಾರವು ರಾಜ್ಯ ಮಂಡಳಿಗಳಿಗೆ ಆರಂಭಿಕ ವರ್ಷಗಳಲ್ಲಿ ಸ್ವಲ್ಪ ಅನುದಾನ ಬಿಡುಗಡೆ ಮಾಡುತ್ತದೆ.
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ:
i. ಮಂಡಳಿ ಸ್ಥಾಪನೆಯಾದ ದಿನಾಂಕದಿಂದ ಮೊದಲ ಕೆಲವು ವರ್ಷಗಳಲ್ಲಿ ಹಾಲಿ ಇರುವ ಎಲ್ಲ ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರನ್ನು ಮುನ್ನಲೆಗೆ ತರುವುದು.
ii. ಅಲೈಡ್ ಮತ್ತು ಆರೋಗ್ಯ ಆರೈಕೆ ಕಾರ್ಯಪಡೆಯಲ್ಲಿ ವೃತ್ತಿಪರತೆಯನ್ನು ತರುವ ಮೂಲಕ ಆರೋಗ್ಯ ಆರೈಕೆಯಲ್ಲಿ ಅರ್ಹ, ಹೆಚ್ಚು ನುರಿತ ಮತ್ತು ಸಮರ್ಥ ಉದ್ಯೋಗ ಸೃಷ್ಟಿ ಅವಕಾಶ ಒದಗಿಸುವುದು.
iii. ಆಯುಷ್ಮಾನ್ ಭಾರತದ ಮುನ್ನೋಟದ ನೆಲೆಯಲ್ಲಿ ಬಹು ಶಾಖೆಯ ಆರೈಕೆ, ಅತ್ಯುನ್ನತ ಗುಣಮಟ್ಟದೊಂದಿಗೆ “ವೈದ್ಯರ ನೇತೃತ್ವದ’’ ಮಾದರಿಯಿಂದ “ಆರೈಕೆ ಲಭ್ಯತೆ ಮತ್ತು ತಂಡ ಆಧಾರಿತ’’ ಮಾದರಿಯತ್ತ ಸಾಗುವುದು.
iv. 2030 ರ ವೇಳೆಗೆ 15 ದಶಲಕ್ಷವಾಗುತ್ತದೆ ಎಂದು ಡಬ್ಲ್ಯುಎಚ್.ಓ.ಜಾಗತಿಕ ಕಾರ್ಯಪಡೆ, 2030 ವರದಿಯ ಹಿನ್ನೆಲೆಯಲ್ಲಿ ಆರೋಗ್ಯ ಆರೈಕೆಯ ಕಾರ್ಯಪಡೆಯ (ಕೊರತೆ) ಜಾಗತಿಕ ಬೇಡಿಕೆಯನ್ನು ಪೂರೈಸಲು ಅವಕಾಶ ನೀಡುವುದು.
ಒಳಗೊಂಡ ವೆಚ್ಚ:
ಮೊದಲ ನಾಲ್ಕು ವರ್ಷಗಳಿಗೆ ತಗಲುವ ಒಟ್ಟು ವೆಚ್ಚ 95 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಒಟ್ಟು ಆಯವ್ಯಯದ ಸುಮಾರು ಐದನೇ ನಾಲ್ಕುಭಾಗ (ಅಂದರೆ 75 ಕೋಟಿ ರೂಪಾಯಿ)ವನ್ನು ರಾಜ್ಯಗಳಿಗೆ ತೆಗೆದಿರಿಸಲಾಗಿದೆ, ಉಳಿದ ನಿಧಿಯು ಕೇಂದ್ರೀಯ ಮಂಡಳಿಯ ನಾಲ್ಕು ವರ್ಷಗಳ ಕಾರ್ಯಚರಣೆಗೆ ಮತ್ತು ಕೇಂದ್ರ ಮತ್ತು ರಾಜ್ಯ ರಿಜಿಸ್ಟರ್ ಗಳನ್ನು ಸ್ಥಾಪಿಸಲು ಬೆಂಬಲ ನೀಡಲಿದೆ.
ಫಲಾನುಭವಿಗಳ ಸಂಖ್ಯೆ:
ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರ ಮಸೂದೆ 2018, ನೇರವಾಗಿ ಸುಮಾರು 8-9 ಲಕ್ಷ ಹಾಲಿ ದೇಶದಲ್ಲಿ ಇರುವ ಅಲೈಡ್ ಮತ್ತು ಆರೋಗ್ಯ ಆರೈಕೆ ಸಂಬಂಧಿತ ವೃತ್ತಿಪರರಿಗೆ ಮತ್ತು ವಾರ್ಷಿಕವಾಗಿ ಕಾರ್ಯಪಡೆಗೆ ಸೇರ್ಪಡೆಯಾಗುವ ಪದವಿ ಪಡೆಯುವ ಇತರ ವೃತ್ತಿಪರರಿಗೆ ಮತ್ತು ಆರೋಗ್ಯ ವ್ಯವಸ್ಥೆಗೆ ಕೊಡುಗೆ ನೀಡುವವರಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಈ ಮಸೂದೆಯನ್ನು ಆರೋಗ್ಯ ಆರೈಕೆ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಬಲಪಡಿಸುವಂತೆ ನಿರ್ದೇಶಿಸಲಾಗಿರುವುದರಿಂದ, ಇಡೀ ದೇಶದ ಜನಸಂಖ್ಯೆ ಮತ್ತು ಆರೋಗ್ಯ ವಲಯವು ಈ ಮಸೂದೆಯಿಂದ ಪ್ರಯೋಜನ ಪಡೆಯುತ್ತದೆ ಎಂದು ಹೇಳಬಹುದಾಗಿದೆ.
ಹಿನ್ನೆಲೆ:
i. ಪ್ರಸಕ್ತ ಸ್ಥಿತಿಯ ಆರೋಗ್ಯ ಆರೈಕೆ ವ್ಯವಸ್ಥೆಯಲ್ಲಿ, ಹಲವು ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರು ಇದ್ದಾರೆ, ಅವರು ಇನ್ನೂ ಗುರುತಿಸದೆ, ನಿಯಂತ್ರಿಸದೆ ಮತ್ತು ಹೆಚ್ಚು ಬಳಕೆ ಮಾಡಿಕೊಳ್ಳದೆ ಉಳಿದಿದ್ದಾರೆ. ನಮ್ಮ ವ್ಯವಸ್ಥೆಯು ಸೀಮಿತ ಪ್ರವರ್ಗದ ವೃತ್ತಿಪರರು ಅಂದರೆ ವೈದ್ಯರು, ಶುಶ್ರೂಷಕರು ಮತ್ತು ಮುಂಪಡೆಯ ಕಾರ್ಯಕರ್ತರು (ಅಂದರೆ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಅಥವಾ ಆಶಾಗಳು, ಆಕ್ಸಿಲರಿ ನರ್ಸ್ ಮಿಡ್ ವೈಫ್ ಅಥವಾ ಎ.ಎನ್.ಎಂ.ಗಳು)ಗಳನ್ನು ಬಲಪಡಿಸುವ ನಿಟ್ಟಿನ ಪ್ರಯತ್ನಗಳಿಗೆ ಹೆಚ್ಚು ಗಮನ ನೀಡಿದೆ. ಆದಾಗ್ಯೂ, ಹಲವಾರು ಇತರರನ್ನು ಕೆಲವು ವರ್ಷಗಳಿಂದ ಗುರುತಿಸಲಾಗುತ್ತಿದೆ, ಅವರ ಸಾಮರ್ಥ್ಯವನ್ನು ಗ್ರಾಮೀಣ ಮತ್ತು ತಲುಪಲು ಕಷ್ಟವಾದ ಪ್ರದೇಶಗಳಲ್ಲಿ ಗುಣಮಟ್ಟ ಚಾಲಿತ ಸೇವೆಗಳ ಲಭ್ಯತೆ ಮತ್ತು ಹೆಚ್ಚಿಸಲು ಹಾಗೂ ಸುಧಾರಣೆಗೆ ಬಳಸಿಕೊಳ್ಳಬಹುದಾಗಿದೆ.
ii. ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರು (ಎ ಮತ್ತು ಎಚ್ಪಿಗಳು) ಆರೋಗ್ಯದ ಮಾನವ ಸಂಪನ್ಮೂಲ ಜಾಲದ ಪ್ರಮುಖ ಅಂಶಗಳಾಗಿದ್ದಾರೆ, ಮತ್ತು ನುರಿತ ಮತ್ತು ಸಮರ್ಥ ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರು (ಎ ಮತ್ತು ಎಚ್ಪಿಗಳು) ಆರೈಕೆಯ ವೆಚ್ಚ ತಗ್ಗಿಸಬಲ್ಲವರಾಗಿದ್ದಾರೆ ಮತ್ತು ಆರೋಗ್ಯ ಆರೈಕೆ ಸೇವೆ ಚಾಲಿತ ಗುಣಮಟ್ಟದ ಸೇವೆಯ ಲಭ್ಯ ಮತ್ತು ಸುಧಾರಣೆ ಮಾಡಬಲ್ಲವರಾಗಿದ್ದಾರೆ.
iii. ಜಾಗತಿಕವಾಗಿ, ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಪರರು ಸಾಮಾನ್ಯವಾಗಿ ಆರಂಭದಲ್ಲಿ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳ ಸ್ನಾತಕ ಪದವಿ ಕಾರ್ಯಗಳಿಗೆ ಹಾಜರಾಗುತ್ತಾರೆ ಮತ್ತು ನಂತರ ತಮ್ಮ ತಮ್ಮ ಶಾಖೆಗಳಲ್ಲಿ ಪಿಎಚ್.ಡಿ. ಮಟ್ಟದವರೆಗಿನ ವಿದ್ಯಾರ್ಹತೆಯನ್ನೂ ಪಡೆಯುತ್ತಾರೆ. ಆದಾಗ್ಯೂ, ಅಂಥ ಕೋರ್ಸ್ ನೀಡುತ್ತಿರುವ ಬಹುತೇಕ ಭಾರತೀಯ ಸಂಸ್ಥೆಗಳು ಗುಣಮಟ್ಟೀಕರಣದ ಕೊರತೆ ಎದುರಿಸುತ್ತಿವೆ.
iv. ವಿಶ್ವಾದ್ಯಂತದ ಬಹುತೇಕ ರಾಷ್ಟ್ರಗಳು, ಶಾಸನಾತ್ಮಕ ಪರವಾನಗಿ ಅಥವಾ ನಿಯಂತ್ರಣ ಕಾಯಗಳನ್ನು ಹೊಂದಿದ್ದು, ಅವು ಅಂಥ ವೃತ್ತಿಪರರ ಅದರಲ್ಲೂ ನೇರವಾಗಿ ರೋಗಿಗಳ ಆರೈಕೆಯಲ್ಲಿ ನಿರತರಾದ (ಅಂದರೆ ಫಿಸಿಯೋಥೆರಪಿಸ್ಟ್, ನ್ಯೂಟ್ರೀಷನಿಸ್ಟ್ ಇತ್ಯಾದಿ)ವರ ಅಥವಾ ಯಾರ ವೃತ್ತಿಯ ಪರಿಣಾಮ ನೇರವಾಗಿ ರೋಗಿಗಳ ಆರೈಕೆ ಆಗಿರುತ್ತದೆಯೋ (ಅಂದರೆ ಪ್ರಯೋಗಾಲಯಗಳ ತಂತ್ರಜ್ಞರು,ಡಾಸ್ಮಿಟ್ರಿಸ್ಟ್ಸ್ ಇತ್ಯಾದಿ) ಅವರ ವಿದ್ಯಾರ್ಹತೆಯನ್ನು ಪ್ರಮಾಣೀಕರಿಸುವ ಮತ್ತು ಪರವಾನಗಿ ನೀಡುವ ಅಧಿಕಾರವನ್ನು ಹೊಂದಿರುತ್ತವೆ.
v. ಭಾರತೀಯ ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ಹಲವು ದಶಕಗಳಿಂದಲೂ ಅಂತಹ ವೃತ್ತಿಪರರು ಇದ್ಯಾಗ್ಯೂ ಸಹ, ಅಲೈಡ್ ಮತ್ತು ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ಒಂದು ಗಮನಾರ್ಹ ಕಂದಕವಿದೆ, ಇದಕ್ಕೆ ಸಮಗ್ರ ನಿಯಂತ್ರಣ ಚೌಕಟ್ಟಿನ ಕೊರತೆ ಮತ್ತು ಎ ಮತ್ತು ಎಚ್ಪಿಗಳ ತರಬೇತಿ, ಶಿಕ್ಷಣದಲ್ಲಿ ಮಾನದಂಡಗಳ ಅನುಪಸ್ಥಿತಿ ಕಾರಣವಾಗಿದೆ.
vi. ಈ ಮಸೂದೆಯು ಒಂದು ದೃಢವಾದ ನಿಯಂತ್ರಕ ಚೌಕಟ್ಟನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ ಮತ್ತುಅದು ಅಲೈಡ್ ಮತ್ತು ಆರೋಗ್ಯ ಆರೈಕೆ ವೃತ್ತಿಯ ಪ್ರಮಾಣಿತ-ಸಂಯೋಜಕ ಮತ್ತು ನಿಯಂತ್ರಕ ಪಾತ್ರವನ್ನು ನಿರ್ವಹಿಸುತ್ತದೆ.
*****