ಪಿಎಂಇಂಡಿಯಾ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ” ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ ವಿಧ್ಯುಕ್ತ ಯೋಜನೆ” (ಎಫ್ಎಂಇ) ಎಂಬ 10,000 ಕೋಟಿ ರೂ.ಗಳ ಹೊಸ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗೆ ಅನುಮೋದನೆ ನೀಡಿದೆ. ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸುತ್ತವೆ.
ಯೋಜನೆಯ ವಿವರಗಳು:
ಉದ್ದೇಶಗಳು:
· ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ಹಣಕಾಸು ಲಭ್ಯತೆಯ ಹೆಚ್ಚಳ.
· ಗುರಿ ಉದ್ಯಮಗಳ ಆದಾಯದಲ್ಲಿ ಹೆಚ್ಚಳ.
· ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳಿಗೆ ಹೆಚ್ಚಿನ ಒತ್ತು.
· ಬೆಂಬಲ ವ್ಯವಸ್ಥೆಗಳ ಸಾಮರ್ಥ್ಯಗಳನ್ನು ಬಲಪಡಿಸುವುದು.
· ಅಸಂಘಟಿತ ವಲಯದಿಂದ ಔಪಚಾರಿಕ ವಲಯಕ್ಕೆ ಪರಿವರ್ತನೆ.
· ಮಹಿಳಾ ಉದ್ಯಮಿಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೇಲೆ ವಿಶೇಷ ಗಮನ.
· ತ್ಯಾಜ್ಯದಿಂದ ಸಂಪತ್ತಿನ ಸೃಷ್ಟಿ ಚಟುವಟಿಕೆಗಳಿಗೆ ಪ್ರೋತ್ಸಾಹ.
· ಬುಡಕಟ್ಟು ಜಿಲ್ಲೆಗಳಲ್ಲಿ ಕಿರು ಅರಣ್ಯ ಉತ್ಪನ್ನಗಳ ಮೇಲೆ ಗಮನ.
ಪ್ರಮುಖ ಅಂಶಗಳು:
· ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆ. ವೆಚ್ಚವನ್ನು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಗಳು 60:40 ಅನುಪಾತದಲ್ಲಿ ಕ್ಕೆ ಹಂಚಿಕೊಳ್ಳತ್ತವೆ.
· 2,00,000 ಕಿರು ಉದ್ಯಮಗಳಿಗೆ ಸಾಲಾಧಾರಿತ ಸಹಾಯಧನದೊಂದಿಗೆ ನೆರವು.
· 2020-21 ರಿಂದ 2024-25ರವರೆಗಿನ 5 ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.
· ಕ್ಲಸ್ಟರ್ ವಿಧಾನ.
· ಬಹು ಬೇಗ ಹಾಳಾಗುವ ವಸ್ತುಗಳ ಮೇಲೆ ಹೆಚ್ಚು ಗಮನ.
ವೈಯಕ್ತಿಕ ಕಿರು ಘಟಕಗಳಿಗೆ ಬೆಂಬಲ:
· ಅತಿ ಸಣ್ಣ ಘಟಕವು ಗರಿಷ್ಠ 10 ಲಕ್ಷ ರೂ.ಗಳ ಅರ್ಹ ಯೋಜನಾ ವೆಚ್ಚದ ಮೇಲೆ ಶೇ.35 ರಷ್ಟು ಸಾಲಾಧಾರಿತ ಸಬ್ಸಿಡಿ ಪಡೆಯುತ್ತದೆ.
· ಫಲಾನುಭವಿಗಳ ಕೊಡುಗೆ ಕನಿಷ್ಠ ಶೇ.10 ರಷ್ಟಿರುತ್ತದೆ, ಉಳಿದದ್ದು ಸಾಲ.
· ಡಿಪಿಆರ್ ಮತ್ತು ತಾಂತ್ರಿಕ ಉನ್ನತೀಕರಣಕ್ಕಾಗಿ ಕೌಶಲ್ಯ ತರಬೇತಿ.
ಎಫ್ಪಿಒಗಳು / ಸ್ವಸಹಾಯ ಸಂಘಗಳು / ಸಹಕಾರಿ ಸಂಸ್ಥೆಗಳಿಗೆ ನೆರವು:
· ಮೂಲ ಬಂಡವಾಳ ಮತ್ತು ಸಣ್ಣ ಸಾಧನಗಳ ಖರೀದಿಗೆ ಸದಸ್ಯರಿಗೆ ಸಾಲ ನೀಡಲು ಸ್ವಸಹಾಯ ಸಂಘಗಳಿಗೆ ಬೀಜ ಬಂಡವಾಳ.
· ಸಾಮಾನ್ಯ ಮೂಲಸೌಕರ್ಯ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಗೆ ಅನುದಾನ.
· ಕೌಶಲ್ಯ ತರಬೇತಿ ಬೆಂಬಲ.
· ಸಾಲಾಧಾರಿತ ಬಂಡವಾಳ ಸಹಾಯಧನ.
ಅನುಷ್ಠಾನ ಅವಧಿ:
· ಅಖಿಲ ಭಾರತ ಆಧಾರದ ಮೇಲೆ ಈ ಯೋಜನೆಯನ್ನು ರೂಪಿಸಲಾಗುವುದು.
· 2,00,000 ಘಟಕಗಳಿಗೆ ಸಾಲಾಧಾರಿತ ಸಬ್ಸಿಡಿ ನೀಡಲಾಗುವುದು.
· ಮೂಲ ಬಂಡವಾಳ ಮತ್ತು ಸಣ್ಣ ಸಾಧನಗಳಿಗಾಗಿ ಸದಸ್ಯರಿಗೆ ಸಾಲ ನೀಡಲು ಸ್ವಸಹಾಯ ಸಂಘಗಳಿಗೆ (ಪ್ರತಿ ಸ್ವಸಹಾಯ ಗುಂಪಿಗೆ 4 ಲಕ್ಷ ರೂ.) ಬೀಜ ಬಂಡವಾಳವನ್ನು ನೀಡಲಾಗುವುದು.
· ಸಾಮಾನ್ಯ ಮೂಲಸೌಕರ್ಯ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ಗಾಗಿ ಎಫ್ಪಿಒಗಳಿಗೆ ಅನುದಾನ ನೀಡಲಾಗುವುದು.
ಆಡಳಿತಾತ್ಮಕ ಮತ್ತು ಅನುಷ್ಠಾನದ ಕಾರ್ಯವಿಧಾನಗಳು
· ಆಹಾರ ಸಂಸ್ಕರಣಾ ಸಚಿವರ ಅಧ್ಯಕ್ಷತೆಯಲ್ಲಿ ಅಂತರ-ಸಚಿವಾಲಯ ಉನ್ನತ ಸಮಿತಿಯು (ಐಎಂಇಸಿ) ಈ ಯೋಜನೆಯನ್ನು ಕೇಂದ್ರದಲ್ಲಿ ಮೇಲ್ವಿಚಾರಣೆ ಮಾಡುತ್ತದೆ.
· ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿರುವ ರಾಜ್ಯ / ಕೇಂದ್ರಾಡಳಿತ ಪ್ರದೇಶ ಮಟ್ಟದ ಸಮಿತಿಯು (ಎಸ್ಎಲ್ಸಿ) ಕಿರು ಘಟಕಗಳ ವಿಸ್ತರಣೆ ಮತ್ತು ಸ್ವಸಹಾಯ ಸಂಘಗಳು / ಎಫ್ಪಿಒಗಳು / ಸಹಕಾರಿ ಸಂಸ್ಥೆಗಳಿಂದ ಹೊಸ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಶಿಫಾರಸು ಮಾಡುತ್ತದೆ.
· ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ಚಟುವಟಿಕೆಗಳನ್ನು ಒಳಗೊಂಡ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುತ್ತವೆ, ಇದನ್ನು ಕೇಂದ್ರ ಸರ್ಕಾರ ಅನುಮೋದಿಸುತ್ತದೆ.
· ಯೋಜನೆಯಲ್ಲಿ ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ಮತ್ತು ಮಧ್ಯಕಾಲೀನ ಪರಿಶೀಲನೆ ಕಾರ್ಯವಿಧಾನವನ್ನು ಅಳವಡಿಸಲಾಗುವುದು.
ರಾಜ್ಯ / ಕೇಂದ್ರಾಡಳಿತ ಪ್ರದೇಶ ನೋಡಲ್ ಇಲಾಖೆ ಮತ್ತು ಸಂಸ್ಥೆ
· ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರವು ನೋಡಲ್ ಇಲಾಖೆ ಮತ್ತು ಏಜೆನ್ಸಿಯನ್ನು ಸೂಚಿಸುತ್ತದೆ.
· ರಾಜ್ಯ / ಕೇಂದ್ರಾಡಳಿತ ಪ್ರದೇಶ ಮಟ್ಟದ ನವೀಕರಣ ಯೋಜನೆ, ಕ್ಲಸ್ಟರ್ ಅಭಿವೃದ್ಧಿ ಯೋಜನೆ, ಜಿಲ್ಲೆ/ಪ್ರಾದೇಶಿಕ ಮಟ್ಟದಲ್ಲಿ ಸಂಪನ್ಮೂಲ ಗುಂಪುಗಳನ್ನು ತೊಡಗಿಸಿಕೊಳ್ಳುವುದು, ಘಟಕಗಳು ಮತ್ತು ಗುಂಪುಗಳಿಗೆ ಬೆಂಬಲವನ್ನು ಒದಗಿಸುವುದು ಇತ್ಯಾದಿ ಮೇಲ್ವಿಚಾರಣೆ ಮಾಡುವುದು ಸೇರಿದಂತೆ ರಾಜ್ಯ / ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ / ಕೇಂದ್ರಾಡಳಿತ ಪ್ರದೇಶ ನೋಡಲ್ ಏಜೆನ್ಸಿ (ಎಸ್ಎನ್ಎ) ಜವಾಬ್ದಾರವಾಗಿರುತ್ತದೆ.
ರಾಷ್ಟ್ರೀಯ ಪೋರ್ಟಲ್ ಮತ್ತು ಎಂಐಎಸ್
· ರಾಷ್ಟ್ರೀಯ ಮಟ್ಟದ ಪೋರ್ಟಲ್ ಅನ್ನು ಸ್ಥಾಪಿಸಲಾಗುವುದು, ಇದರಲ್ಲಿ ಅರ್ಜಿದಾರರು / ವೈಯಕ್ತಿಕ ಉದ್ಯಮಗಳು ಯೋಜನೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು.
· ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ರಾಷ್ಟ್ರೀಯ ಪೋರ್ಟಲ್ನಲ್ಲಿ ಕೈಗೊಳ್ಳಲಾಗುವುದು.
ಸಂಯೋಜಿತ ಚೌಕಟ್ಟು
· ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ಅಸ್ತಿತ್ವದಲ್ಲಿರುವ ಯೋಜನೆಗಳ ಬೆಂಬಲವನ್ನು ಯೋಜನೆಯಡಿ ಪಡೆಯಬಹುದು.
· ಇತರ ಮೂಲಗಳಿಂದ ಬೆಂಬಲ ಲಭ್ಯವಿಲ್ಲದಿರುವ ಕಡೆ ವಿಶೇಷವಾಗಿ ಬಂಡವಾಳ ಹೂಡಿಕೆ, ಹ್ಯಾಂಡ್ ಹೋಲ್ಡಿಂಗ್ ಬೆಂಬಲ, ತರಬೇತಿ ಮತ್ತು ಸಾಮಾನ್ಯ ಮೂಲಸೌಕರ್ಯಗಳಿಗೆ ಯೋಜನೆಯು ಅಂತರವನ್ನು ಅಳಿಸಲು ಪ್ರಯತ್ನಿಸುತ್ತದೆ.
ಪರಿಣಾಮ ಮತ್ತು ಉದ್ಯೋಗ ಸೃಷ್ಟಿ
· ಸುಮಾರು ಎಂಟು ಲಕ್ಷ ಕಿರು ಉದ್ಯಮಗಳು ಮಾಹಿತಿಯ ಲಭ್ಯತೆ, ಉತ್ತಮ ಮಾನ್ಯತೆ ಮತ್ತು ಔಪಚಾರಿಕೀಕರಣದ ಮೂಲಕ ಪ್ರಯೋಜನ ಪಡೆಯುತ್ತವೆ.
· ಸಾಲಾಧಾರಿತ ಸಹಾಯಧನದ ಬೆಂಬಲವನ್ನು ವಿಸ್ತರಣೆ ಮತ್ತು ಉನ್ನತೀಕರಣಕ್ಕಾಗಿ 2,00,000 ಕಿರು ಉದ್ಯಮಗಳಿಗೆ ವಿಸ್ತರಿಸಲಾಗುವುದು.
· ಇದು ವಿಧ್ಯುಕ್ತಗೊಳಿಸಲು, ಬೆಳೆಯಲು ಮತ್ತು ಸ್ಪರ್ಧಾತ್ಮಕವಾಗಲು ಅವರಿಗೆ ಅನುವು ಮಾಡಿಕೊಡುತ್ತದೆ.
· ಈ ಯೋಜನೆಯು ಒಂಬತ್ತು ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.
· ಯೋಜನೆಯು ಅಸ್ತಿತ್ವದಲ್ಲಿರುವ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು, ಮಹಿಳಾ ಉದ್ಯಮಿಗಳು ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳ ಉದ್ಯಮಿಗಳಿಗೆ ಸಾಲ ಲಭ್ಯತೆಯನ್ನು ಹೆಚ್ಚಿಸುತ್ತದೆ.
· ಸಂಘಟಿತ ಮಾರುಕಟ್ಟೆಗಳೊಂದಿಗೆ ಉತ್ತಮ ಸಂಯೋಜನೆ.
· ವಿಂಗಡಣೆ, ಶ್ರೇಣಿ, ಸಂಸ್ಕರಣೆ, ಪ್ಯಾಕೇಜಿಂಗ್, ಸಂಗ್ರಹಣೆ ಮುಂತಾದ ಸಾಮಾನ್ಯ ಸೇವೆಗಳಿಗೆ ಹೆಚ್ಚಿನ ಅವಕಾಶ.
ಹಿನ್ನೆಲೆ:
· ಸುಮಾರು 25 ಲಕ್ಷ ನೋಂದಾಯಿಸದ ಆಹಾರ ಸಂಸ್ಕರಣಾ ಉದ್ಯಮಗಳಿವೆ, ಅವು ಈ ವಲಯಕ್ಕೆಶೇ.98 ರಷ್ಟು ಕೊಡುಗೆ ನೀಡುತ್ತಿವೆ ಮತ್ತು ಇವು ಅಸಂಘಟಿತ ಮತ್ತು ಅನೌಪಚಾರಿಕವಾಗಿವೆ. ಈ ಘಟಕಗಳಲ್ಲಿ ಸುಮಾರು ಶೇ.66 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು ಅವುಗಳಲ್ಲಿ ಶೇ.80 ರಷ್ಟು ಕುಟುಂಬ ಆಧಾರಿತ ಉದ್ಯಮಗಳಾಗಿವೆ.
· ಈ ವಲಯವು ಸಾಲವನ್ನು ಪಡೆಯಲು ಅಸಮರ್ಥತೆ, ದುಬಾರಿ ಸಾಂಸ್ಥಿಕ ಸಾಲ, ಆಧುನಿಕ ತಂತ್ರಜ್ಞಾನದ ಲಭ್ಯತೆಯ ಕೊರತೆ, ಆಹಾರ ಪೂರೈಕೆ ಸರಪಳಿಯೊಂದಿಗೆ ಸೇರಿಕೊಳ್ಳಲು ಅಸಮರ್ಥತೆ ಮತ್ತು ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ಅನುಸರಣೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ.
· ಈ ವಲಯವನ್ನು ಬಲಪಡಿಸುವುದರಿಂದ ಪೋಲಾಗುವುದನನ್ನು ತಗ್ಗಿಸಲು, ಕೃಷಿಯೇತರ ಉದ್ಯೋಗಾವಕಾಶಗಳು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಉದ್ದೇಶವನ್ನು ಸಾಧಿಸುವಲ್ಲಿ ನೆರವಾಗುತ್ತದೆ.
Important decision of the Cabinet that will contribute to a vibrant food processing sector. It will also strengthen the efforts towards Atmanirbhar Bharat. https://t.co/HwPnPqYtiK
— Narendra Modi (@narendramodi) May 20, 2020