ಪಿಎಂಇಂಡಿಯಾ
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸೈಬರ್ ವಿಷಯಗಳಿಗೆ ಸಂಬಂಧಿಸಿದ ಸಹಕಾರ ಪ್ರಮುಖ ಅಂಶವಾಗಿದೆ. ಎರಡೂ ರಾಷ್ಟ್ರಗಳು ಕಾರ್ಯತಂತ್ರಾತ್ಮಕ ಸೈಬರ್ ಸಂಬಂಧ ಹೊಂದಿದ್ದು, ಇದು ಅವರ ವಿನಿಮಯಿತ ಮೌಲ್ಯಗಳು, ಸಾಮಾನ್ಯ ನೋಟ ಮತ್ತು ಸೈಬರ್ ಪ್ರದೇಶದ ವಿನಿಮಯಿತ ನೀತಿಗಳಲ್ಲಿ ಪ್ರತಿಫಲಿಸಿದೆ. ಎರಡೂ ರಾಷ್ಟ್ರಗಳು ಸೈಬರ್ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಿಸ್ತೃತ ಆಧಾರದ ಸಹಕಾರಕ್ಕಾಗಿ ಹೆಚ್ಚಿನ ಸಾಂಸ್ಥೀಕರಣ ಮಾಡುವ ಮತ್ತು ತಮ್ಮ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವನ್ನು ಗುರುತಿಸಿವೆ ಮತ್ತು ಈ ನಿಟ್ಟಿನಲ್ಲಿ ಈ ಕೆಳಗಿನ ವಿನಿಮಯಿತ ನೀತಿ ಮತ್ತು ಉದ್ದೇಶಿತ ಸಹಕಾರ ಸ್ವರೂಪದ ಆಧಾರದಲ್ಲಿ ಚೌಕಟ್ಟು ಪೂರ್ಣಗೊಳಿಸಲು ಉದ್ದೇಶಿಸಿವೆ.
ಅಮೆರಿಕ ಮತ್ತು ಭಾರತದ ಸೈಬರ್ ಸಂಬಂಧದ ವಿನಿಮಯಿತ ನೀತಿಗಳು ಇವುಗಳನ್ನು ಒಳಗೊಂಡಿವೆ:
· ಮುಕ್ತ, ಸುರಕ್ಷಿತ, ಮತ್ತು ವಿಶ್ವಾಸಾರ್ಹ ಸೈಬರ್ ಪ್ರದೇಶ ಪರಿಸರಕ್ಕಾಗಿ ಬದ್ಧತೆ.
· ನಾವಿನ್ಯತೆ, ಆರ್ಥಿಕ ಪ್ರಗತಿ ಮತ್ತು ವಾಣಿಜ್ಯ ಮತ್ತು ವ್ಯಾಪಾರಕ್ಕೆ ಚಾಲಕಯಂತ್ರವಾಗಿ ಅಂತರ್ಜಾಲವನ್ನು ಉತ್ತೇಜಿಸುವ ಬದ್ಧತೆ.
· ಮುಕ್ತವಾಗಿ ಮಾಹಿತಿಯ ಹರಿವಿನ ಉತ್ತೇಜನದ ಬದ್ಧತೆ
· ಖಾಸಗಿ ವಲಯ ಮತ್ತು ಸರ್ಕಾರದ ಪ್ರಾಧಿಕಾರಗಳ ನಡುವೆ ಮತ್ತು ಅವುಗಳೊಂದಿಗೆ ಸೈಬರ್ ಅಪರಾಧ ಮತ್ತು ಸೈಬರ್ ಭದ್ರತೆ ಕುರಿತಂತೆ ಸಹಕಾರದ ಉತ್ತೇಜನದ ಬದ್ಧತೆ.
· ಸೈಬರ್ ಬೆದರಿಕೆಗಳನ್ನು ಎದುರಿಸಲು ಮತ್ತು ಸೈಬರ್ ಭದ್ರತೆಯನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಸಹಕಾರದ ಮಹತ್ವವನ್ನು ಗುರುತಿಸುವುದು.
· ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಗೌರವಿಸುವ ಬದ್ಧತೆ.
· ಅಂತರ್ಜಾಲ ಹಾಗೂ ಸೈಬರ್ ಪ್ರದೇಶದ ಜವಾಬ್ದಾರಿಯಲ್ಲಿ ದೇಶದ ವರ್ತನೆಯನ್ನು ಸ್ವಯಂ ಸೂತ್ರಗಳ ಪ್ರಚಾರದಲ್ಲಿ ಅವುಗಳ ನಡವಳಿಕೆಗೆ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅದರಲ್ಲೂ ವಿಶ್ವಸಂಸ್ಥೆಯ ಸನ್ನದಿಗೆ ಅನ್ವಯವಾಗುವಂಥ ಚೌಕಟ್ಟಿನ ಮೂಲಕ ಸೈಬರ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಬದ್ಧತೆ.
· ಸರ್ಕಾರ, ನಾಗರಿಕ ಸಮಾಜ ಮತ್ತು ಖಾಸಗಿ ವಲಯ ಒಳಗೊಂಡ ತನ್ನ ಬಾಧ್ಯಸ್ಥರಿಗೆ ಹೊಣೆಗಾರಿಕೆ ಮತ್ತು ಪಾರದರ್ಶಕತೆಯಿಂದ ಕೂಡಿದ ಬಹು ಬಾಧ್ಯಸ್ಥ ಮಾದರಿಯ ಇಂಟರ್ ನೆಟ್ ಆಡಳಿತದ ಬದ್ಧತೆ ಮತ್ತು ಅವರುಗಳ ನಡುವೆ ಸಹಕಾರದ ಬದ್ಧತೆ.
· ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಸೈಬರ್ ಭದ್ರತೆ ವಿಚಾರಗಳಲ್ಲಿ ಸರ್ಕಾರಗಳ ಮಹತ್ವದ ಪಾತ್ರವನ್ನು ಗುರುತಿಸುವುದು.
· ಸೈಬರ್ ಭದ್ರತೆ ಮತ್ತು ಸೈಬರ್ ಸುರಕ್ಷತೆಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಾಮರ್ಥ್ಯ ವರ್ಧನೆಗೆ ವಿನಿಮಯಿತ ಬದ್ಧತೆಯ ಸಹಕಾರದ ಮಹತ್ವವನ್ನು ಗುರುತಿಸುವುದು.
· ಸೈಬರ್ ಅಪರಾಧ ತಡೆಯಲು ಎರಡು ರಾಷ್ಟ್ರಗಳ ನಡುವಿನ ಕಾನೂನು ಜಾರಿ ಪ್ರಾಧಿಕಾರಗಳ ನಡುವೆ ನಿಕಟ ಸಹಕಾರ ಉತ್ತೇಜಿಸುವ ಬದ್ಧತೆ.
· ಆನ್ ಲೈನ್ ನ ಮೂಲಭೂತ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಗೌರವ ಮತ್ತು ರಕ್ಷಣೆಯನ್ನು ಉತ್ತೇಜಿಸಲು ಬದ್ಧತೆ.
· ಮಹತ್ವದ ಮಾಹಿತಿಯ ಮೂಲಸೌಕರ್ಯದ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಬಲಪಡಿಸಲು ಸಹಕರಿಸುವ ಆಶಯ; ಈ ವಿನಿಮಯಿತ ನೀತಿಗಳನ್ನು ಮುಂದುವರಿಸಲು ಎರಡೂ ರಾಷ್ಟ್ರಗಳು ಈ ಸಹಕಾರ ವಲಯಗಳನ್ನು ಸೇರಿಸುವ ಸಾಧ್ಯತೆ ಇದೆ:
· ಸಹಯೋಗ ನೀಡುವುದು, ವಿನಿಮಯ ಮತ್ತು ಜಾರಿಗೆ ಸಂಬಂಧಿಸಿದಂತೆ ಸೈಬರ್ ಭದ್ರತೆಯ ಉತ್ತಮ ಪದ್ಧತಿಗಳನ್ನು ಗುರುತಿಸುವುದು.
· ಕಾಲೋಚಿತ ಅಥವಾ ಸೂಕ್ತ ಸಮಯಕ್ಕೆ ಹತ್ತಿರವಾದ ಆಧಾರದ ಮೇಲೆ, ಹಾಲಿ ಇರುವ ದ್ವಿಪಕ್ಷೀಯ ಒಪ್ಪಂದಗಳೊಂದಿಗೆ ಪ್ರಾಯೋಗಿಕ ಮತ್ತು ನಿರಂತರ, ಮಾಹಿತಿಯ ವಿನಿಮಯ, ದುರುದ್ದೇಶ ಪೂರಿತ ಸೈಬರ್ ಬೆದರಿಕೆ, ದಾಳಿ ಮತ್ತು ಚಟುವಟಿಕೆ ಕುರಿತಂತೆ ಮಾಹಿತಿಯ ವಿನಿಮಯ ಹಾಗೂ ಇಂಥ ಮಾಹಿತಿಯ ವಿನಿಮಯ ಸುಧಾರಿಸಲು ಸೂಕ್ತ ವ್ಯವಸ್ಥೆ ಸ್ಥಾಪಿಸುವುದು.
· ಐ.ಸಿ.ಟಿ. ಮೂಲಸೌಕರ್ಯ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಅದರೊಡನೆ ಸ್ಥಿರವಾಗಿ ಒಳಗೊಂಡ ಮಾಹಿತಿಯ ಸುರಕ್ಷತೆಗೆ ಎದುರಾಗುವ ಸೈಬರ್ ಬೆದರಿಕೆಯನ್ನು ಹತ್ತಿಕ್ಕಲು ಪ್ರಾಯೋಗಿಕ ಸಹಕಾರದ ಜಂಟಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು;
· ಸೈಬರ್ ಭದ್ರತೆಯ – ಸಂಬಂಧಿತ ಕ್ಷೇತ್ರದಲ್ಲಿ ಮಾನ್ಯತೆ ಪ್ರಕ್ರಿಯೆ ಮತ್ತು ಸೈಬರ್ ಭದ್ರತೆ ಉತ್ಪನ ಅಭಿವೃದ್ಧಿ ಒಳಗೊಂಡ ಸಂಶೋಧನೆ ಮತ್ತು ಅಭಿವೃದ್ಧಿ, ಸೈಬರ್ ಭದ್ರತೆ ಗುಣಮಟ್ಟ ಮತ್ತು ಭದ್ರತೆ ಪರೀಕ್ಷೆ ಸಹಕಾರವನ್ನು ಉತ್ತೇಜಿಸುವುದು; ಇದು ಇಂಥ ವಿಷಯಗಳ ಬಗ್ಗೆ ಮುಂದುವರಿದ ಸಮಾಲೋಚನೆಯನ್ನೂ ಒಳಗೊಂಡಿರುತ್ತದೆ.
· ಐಸಿಟಿ ಮೂಲಸೌಕರ್ಯ ಭದ್ರತೆಗೆ ಸ್ವಯಂಪ್ರೇರಿತ ಅಥವಾ ಪರಸ್ಪರ ಆಧಾರದ ಮೇಲೆ ಕೊಡುಗೆ ನೀಡುವಂಥ ಪ್ರಾಯೋಗಿಕ ಕ್ರಮಗಳ ಅನುಷ್ಠಾನ ಮತ್ತು ವಿಸ್ತರಣೆ;
· ಸೈಬರ್ ಅಪರಾಧ ತಡೆಗೆ ತರಬೇತಿ ಶಿಬಿರಗಳು, ಹೆಚ್ಚಿನ ಮಾತುಕತೆ ಮತ್ತು ಪ್ರಕ್ರಿಯೆ ಹಾಗೂ ಪ್ರಕ್ರಿಯೆಗಳು, ಮತ್ತು ಅಗತ್ಯಬಿದ್ದಾಗ ಮಾತುಕತೆಯ ವ್ಯವಸ್ಥೆ ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರದ ಮುಂದುವರಿಕೆಯ ಉತ್ತೇಜನ.
· ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯ ಸುಧಾರಣೆಗಾಗಿ ಆಯಾ ಕಾನೂನುಗಳು ಹಾಗೂ ಅಮೆರಿಕ ಮತ್ತು ಭಾರತದ ನಿಯಮಗಳಿಗನುಸಾರವಾಗಿ ವಿದ್ಯುನ್ಮಾನ ಸಾಕ್ಷಿಗಳಿಗೆ ಸೂಕ್ತವಾಗುವ ರೀತಿಯಲ್ಲಿ ಕರಡುಪ್ರತಿಯನ್ನು ಸಜ್ಜುಗೊಳಿಸುವ ತರಬೇತಿ ಸೇರಿದಂತೆ ಜಂಟಿ ತರಬೇತಿ ಕಾರ್ಯಕ್ರಮ.
· ಸೈಬರ್ ಭದ್ರತೆ, ಸೈಬರ್ ಅಪರಾಧ ತಡೆ ಪ್ರಯತ್ನ, ಡಿಜಿಟಲ್ ವಿಧಿ ವಿಜ್ಞಾನ ಮತ್ತು ಕಾನೂನು ಚೌಕಟ್ಟಿನ ಕ್ಷೇತ್ರಗಳಲ್ಲಿ ಜಂಟಿಯಾಗಿ ಸಾಮರ್ಥ್ಯವರ್ಧನೆಗಾಗಿ ಮತ್ತು ಕೌಶಲ ವರ್ಧನೆ ಕೈಗೊಳ್ಳುವುದು.
· ಸೈಬರ್ ಪ್ರದೇಶದಲ್ಲಿ ರಾಷ್ಟ್ರದ ವರ್ತನೆಗೆ ಅಂತಾರಾಷ್ಟ್ರೀಯ ಕಾನೂನು ಅನ್ವಯಿಸುವಂತೆ ಮತ್ತು ಮುಂದುವರಿದು ರಾಷ್ಟ್ರದ ವರ್ತನೆಯನ್ನು ಸೈಬರ್ ಪ್ರದೇಶಕ್ಕೆ ಹೇಗೆ ಅನ್ವಯಿಸಬೇಕು ಎಂಬ ಬಗ್ಗೆ ಅನ್ವೇಷಣೆಯನ್ನು ಉತ್ತೇಜಿಸುವುದು.
· ಶಾಂತಿಯ ಸಮಯದಲ್ಲಿ ಜವಾಬ್ದಾರಿಯುತ ರಾಷ್ಟ್ರದ ಸ್ವಭಾವದಲ್ಲಿ ಅಂತಾರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಸರ್ಕಾರಿ ತಜ್ಞರ ವಿಶ್ವ ಸಂಸ್ಥೆಯ ಗುಂಪು ಗುರುತಿಸಿರುವ ನಿಯಮಗಳೂ ಸೇರಿದಂತೆ ಸ್ವಯಂಪ್ರೇರಿತ ನಿಯಮಗಳನ್ನು ಉತ್ತೇಜಿಸುವುದು.
· ಸ್ವಯಂ ಪ್ರೇರಿತ ನಿಯಮಗಳಿಗೆ ಬದ್ಧರಾಗಿರುವುದರಲ್ಲಿ..
· ಉದ್ದೇಶಪೂರ್ವಕವಾಗಿ ಪ್ರಮುಖ ಮೂಲಸೌಕರ್ಯಕ್ಕೆ ಹಾನಿ ಮಾಡುವ ಅಥವಾ ಸಾರ್ವಜನಿಕರಿಗೆ ಸೇವೆ ಒದಗಿಸುವ ಪ್ರಮುಖ ಮೂಲಸೌಕರ್ಯ ಬಳಕೆ ಕುಗ್ಗಿಸುವ ಚಟುವಟಿಕೆಯನ್ನು ದೇಶವೊಂದು ನಡೆಸಬಾರದು ಅಥವಾ ತಿಳಿದೂ ಅಂಥ ಆನ್ ಲೈನ್ ಚಟುವಟಿಕೆಗೆ ಬೆಂಬಲ ನೀಡಬಾರದು.
· ಸೈಬರ್ ಪ್ರಕರಣಗಳಿಗೆ ಸ್ಪಂದಿಸುವಂಥ ರಾಷ್ಟ್ರೀಯ ಸಿ.ಎಸ್.ಐ.ಆರ್.ಟಿ.ಗಳ ಚಟುವಟಿಕೆಯನ್ನು ತಡೆಯುವಂಥ ಕಾರ್ಯವನ್ನು ದೇಶವೊಂದು ಗೊತ್ತಿದ್ದೂ ನಡೆಸಬಾರದು ಅಥವಾ ತಿಳಿದೂ ಅಂಥ ಆನ್ ಲೈನ್ ಚಟುವಟಿಕೆಗೆ ಬೆಂಬಲ ನೀಡಬಾರದು.
· ರಾಷ್ಟ್ರವೊಂದು ಸೈಬರ್ ಅಪರಾಧಗಳ ತನಿಖೆ ವಿದ್ಯುನ್ಮಾನ ಸಾಕ್ಷಿ ಸಂಗ್ರಹಿಸುವ ಮತ್ತು ದುರುದ್ದೇಶಪೂರಿತ ಸೈಬರ್ ಚಟುವಟಿಕೆಗೆ ತನ್ನ ಪ್ರದೇಶದಲ್ಲಿ ಅವಕಾಶ ನೀಡದೆ ಮತ್ತು ಇತರ ರಾಷ್ಟ್ರಗಳ ನೆರವು ವಿನಂತಿಗಳನ್ನು, ದೇಶೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಹೊಣೆಯನ್ನು ನಿರಂತರವಾಗಿರುವ ರೀತಿಯಲ್ಲಿ ಸಹಕಾರ ಬೇಕು.
· ಕಂಪನಿಗಳು ಅಥವಾ ವಾಣಿಜ್ಯ ವಲಯಗಳಿಗೆ ಸ್ಪರ್ಧಾತ್ಮಕ ಅನುಕೂಲಗಳನ್ನು ಒದಗಿಸುವ ಉದ್ದೇಶದಿಂದ ವಾಣಿಜ್ಯ ರಹಸ್ಯ ಅಥವಾ ಇತರ ಗೌಪ್ಯ ವಾಣಿಜ್ಯ ಮಾಹಿತಿ ಸೇರಿದಂತೆ ಭೌದ್ಧಿಕ ಆಸ್ತಿಯ ಐ.ಸಿ.ಟಿ. ಶಕ್ತ ಕಳ್ಳತನಕ್ಕೆ ರಾಷ್ಟ್ರವೊಂದು ಕೈಹಾಕಬಾರದು ಅಥವಾ ತಿಳಿದೂ ಅದಕ್ಕೆ ಬೆಂಬಲ ನೀಡಬಾರದು.
· ಟೆಲಿಕಾಂ ಭದ್ರತೆ ಸಂಬಂಧಿತ ವಿಚಾರಗಳಲ್ಲಿ ಅಂದರೆ ಕಾಯಗಳ ಮಾನ್ಯತೆ ಸೇರಿದಂತೆ ಟೆಲಿಕಾಂ ಸಾಧನ ಭದ್ರತೆ ಗುಣಮಟ್ಟ ಮತ್ತು ಪರೀಕ್ಷೆಯಲ್ಲಿ ಪರಸ್ಪರ ಸಹಕಾರ.
· ಅಂತಾರಾಷ್ಟ್ರೀಯ ಸೈಬರ್ ಸ್ಥಿರತೆ ಮತ್ತು ಸೈಬರ್ ಚಟುವಟಿಕೆ ಅಸ್ಥಿರಗೊಳಿಸುವ ಸಾಮಾನ್ಯ ಮತ್ತು ವಿನಿಮಯಿತ ತಿಳಿವಳಿಕೆಯ ಅಭಿವೃದ್ಧಿ.
· ಐಸಿಟಿ ಉತ್ಪನ್ನಗಳ ಭದ್ರತೆ ಮತ್ತು ಸೇವೆಯಲ್ಲಿ ಬಳಕೆದಾರರ ವಿಶ್ವಾಸ ಹೆಚ್ಚಿಸಲು ಸರಬರಾಜು ಸರಪಣಿಯ ವಿಶ್ವಾಸಾರ್ಹತೆಯನ್ನು ಉತ್ತೇಜಿಸಲು ಚರ್ಚೆ ಮತ್ತು ಕಾರ್ಯತಂತ್ರಗಳ ವಿನಿಮಯ.
· ಪ್ರಕರಣ ಪ್ರತಿಕ್ರಿಯೆಯ ಉತ್ತಮ ಪದ್ಧತಿಗಳನ್ನು ನಿರಂತರವಾಗಿ ಉತ್ತೇಜಿಸಲು ಮಾತುಕತೆ.
· ಸೈಬರ್ ಭದ್ರತಾ ಸನ್ನಿವೇಶಗಳಲ್ಲಿ ಮುಂದುವರಿದ ನಿರ್ದಿಷ್ಟ ಸಹಕಾರಕ್ಕಾಗಿ ಜಂಟಿ – ಅವಕಾಶ ನೀಡುವುದು.
· ಇಂಟರ್ನೆಟ್ ಆಡಳಿತದಲ್ಲಿ ಬಹು ಬಾಧ್ಯಸ್ಥ ಮಾದರಿಗೆ ಬೆಂಬಲ ನೀಡುವುದು.
· ಇಂಟರ್ನೆಟ್ ಆಡಳಿತ ವೇದಿಕೆಗಳಲ್ಲಿ ಐಸಿಎಎನ್ಎನ್, ಐಜಿಎಫ್ ಮತ್ತು ಇತರ ಸ್ಥಳಗಳಲ್ಲಿ ಮಾತುಕತೆ ಮತ್ತು ಕಾರ್ಯಕ್ರಮಪಟ್ಟಿ ಮುಂದುವರಿಸುವುದು. ಮತ್ತು ಈ ವೇದಿಕೆಯಲ್ಲಿ ಎರಡೂ ದೇಶಗಳ ನಡುವಿನ ಎಲ್ಲ ಬಾಧ್ಯಸ್ಥರ ಪಾಲ್ಗೊಳ್ಳುವಿಕೆಯೊಂದಿಗೆ ಸಕ್ರಿಯ ಬೆಂಬಲ ನೀಡುವುದು.
· ಬಹುರಾಷ್ಟ್ರೀಯ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಸಹಕಾರವನ್ನು ಪರಿಣಾಮಕಾರಿಯಾಗಿ ಸುಧಾರಣೆ ಮಾಡಲು ಮಾತುಕತೆ ಏರ್ಪಡಿಸುವುದು ಮತ್ತು ಕ್ರಮ ಕೈಗೊಳ್ಳುವುದು.
· ಭಾರತದಲ್ಲಿ ಪ್ರಮುಖ ಇಂಟರ್ನೆಟ್ ಮೂಲಸೌಕರ್ಯ ಬಲಪಡಿಸುವುದು.
· ದ್ವಿಪಕ್ಷೀಯ ಉನ್ನತ ತಂತ್ರಜ್ಞಾನ ಸಹಕಾರ ಗುಂಪು ಮುಂತಾದ ಕಾರ್ಯವಿಧಾನಗಳ ಮೂಲಕ ಸೇರಿದಂತೆ. ಎರಡೂ ದೇಶಗಳು ನಿಯಂತ್ರಿಸಬಹುದಾದ ಉಭಯ ಬಳಕೆ ತಂತ್ರಜ್ಞಾನಗಳು ಸೇರಿದಂತೆ ತಂತ್ರಜ್ಞಾನ ಲಭ್ಯತೆ ನೀತಿಯ ವಿನಿಮಯಿತ ತಿಳಿವಳಿಕೆಯ ಖಾತ್ರಿಗಾಗಿ ಶ್ರಮಿಸುವುದು.
ಭಾರತ ಮತ್ತು ಅಮೆರಿಕಾ ಸೈಬರ್ ಬಾಂಧವ್ಯದ ಪೂರ್ಣ ಚೌಕಟ್ಟಿಗೆ 60 ದಿನಗಳ ಒಳಗಾಗಿ ಅಂಕಿತ ಹಾಕುವ ಸಾಧ್ಯತೆ ಇದೆ.