Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಾಷ್ಕೆಂಟ್ ನಲ್ಲಿ ಎಸ್.ಸಿ.ಓ. ಸಭೆಯ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಿ

ತಾಷ್ಕೆಂಟ್ ನಲ್ಲಿ ಎಸ್.ಸಿ.ಓ. ಸಭೆಯ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಿ

ತಾಷ್ಕೆಂಟ್ ನಲ್ಲಿ ಎಸ್.ಸಿ.ಓ. ಸಭೆಯ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾಷ್ಕೆಂಟ್ ನಲ್ಲಿಂದು ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಮಾಡಿದರು. ಎಸ್.ಸಿ.ಓ.ದಲ್ಲಿ ಭಾರತದ ಪ್ರವೇಶವನ್ನು ಅಧ್ಯಕ್ಷ ಕ್ಸಿ ಅವರು ಸ್ವಾಗತಿಸಿದರು ಮತ್ತು ಇದು ಎಸ್.ಸಿ.ಓ.ವನ್ನು ಬಲಪಡಿಸಲಿದೆ ಎಂದು ಹೇಳಿದರು. ಎಸ್.ಸಿ.ಓ.ದಲ್ಲಿ ಭಾರತದ ಸದಸ್ಯತ್ವಕ್ಕಾಗಿ ಚೀನಾದ ಬೆಂಬಲಕ್ಕೆ ಪ್ರಧಾನಮಂತ್ರಿ ಮೋದಿ ಅವರು ಕ್ಸಿ ಅವರಿಗೆ ಧನ್ಯವಾದ ಅರ್ಪಿಸಿದರು. ಬಳಿಕ ಪ್ರಧಾನಮಂತ್ರಿ ಮೋದಿ ಅವರು, ಎನ್.ಎಸ್.ಜಿ.ಯಲ್ಲಿ ಭಾರತದ ಸದಸ್ಯತ್ವದ ಬಗ್ಗೆ ಚರ್ಚಿಸಲಿರುವ ಸಿಯೋಲ್ ಎನ್.ಎಸ್.ಜಿ. ಸರ್ವ ಸದಸ್ಯರ ಸಭೆಯ ಬಗ್ಗೆಯೂ ಮಾತನಾಡಿದರು. ಭಾರತದ ಅರ್ಜಿಯ ಕುರಿತಂತೆ ನ್ಯಾಯಸಮ್ಮತ ಮತ್ತು ಉದ್ದೇಶಯುಕ್ತವಾದ ನಿರ್ಧರಣೆ ಮಾಡುವಂತೆ ಚೀನಾಕ್ಕೆ ಮನವಿ ಮಾಡಿದರು ಮತ್ತು ಅರ್ಹತೆಗನುಗುಣವಾಗಿ ಅದರ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಕೋರಿದರು. ಸಿಯೋಲ್ ನಲ್ಲಿ ಹೊರಹೊಮ್ಮಿರುವ ಒಮ್ಮತಕ್ಕೆ ಚೀನಾ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.

.***

AKT/SH