Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಂಪ್ರದಾಯಿಕ ವೈದ್ಯ ಪದ್ಧತಿಗಳು ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿ ಭಾರತ ಮತ್ತು ತಾಂಜೇನಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ತಾಂಜೇನಿಯಾ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳು ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಭಾರತೀಯ ಸಾಂಪ್ರದಾಯಿಕ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯ ಪ್ರೋತ್ಸಾಹ ಮತ್ತು ಪ್ರಸಾರಕ್ಕೆ ಎರಡು ರಾಷ್ಟ್ರಗಳ ನಡುವೆ ವಿನ್ಯಾಸಿತ ಚೌಕಟ್ಟಿನ ಸಹಕಾರ ಒದಗಿಸುತ್ತದೆ.

ಇದರಿಂದ ಯಾವುದೇ ಹೆಚ್ಚುವರಿ ಆರ್ಥಿಕ ಪರಿಣಾಮ ಇರುವುದಿಲ್ಲ. ಸಂಶೋಧನೆ, ತರಬೇತಿ ಕೋರ್ಸ್ ಗಳು/ಸಭೆಗಳನ್ನು ನಡೆಸಲು ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಹಾಲಿ ಹಂಚಿಕೆ ಮಾಡಲಾಗಿರುವ ಆಯವ್ಯಯ ಮತ್ತು ಪ್ರಸಕ್ತ ಆಯುಷ್ ಮಂತ್ರಾಲಯದ ಯೋಜಿತ ಯೋಜನೆಗಳಿಂದ ಭರಿಸಲಾಗುತ್ತದೆ.

ಹಿನ್ನೆಲೆ:

ಭಾರತವು ಔಷಧ ಸಸ್ಯಗಳನ್ನೂ ಒಳಗೊಂಡಂತೆ ಅಭಿವೃದ್ಧಿಹೊಂದಿದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಿಂದ ಹರಸಲ್ಪಟ್ಟಿದೆ. ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಸಾಂಪ್ರದಾಯಿಕ ವೈದ್ಯ ಪದ್ಧತಿಯು ತಾಂಜೇನಿಯಾ ಜನರ ಬದುಕಿಗೆ ಪ್ರಮುಖ ಸಾಧನವಾಗಿದೆ ಮತ್ತು ಸಾಂಪ್ರದಾಯಿಕ ಔಷಧಗಳನ್ನು ಪ್ರಥಮ ಚಿಕಿತ್ಸೆ ಅಥವಾ ಆಧುನಿಕ ಆರೋಗ್ಯ ಸೌಲಭ್ಯಕ್ಕೆ ರೋಗಿಗೆ ಶಿಫಾರಸು ಮಾಡುವ ಮುನ್ನ ತಾತ್ಕಾಲಿಕ ಕ್ರಮವಾಗಿ ಬಳಸಲಾಗುತ್ತಿದೆ.

ತಾಂಜೇನಿಯಾ ಒಂದು ಪ್ರಮುಖ ಪೂರ್ವ ಆಫ್ರಿಕಾ ರಾಷ್ಟ್ರವಾಗಿದ್ದು ಭಾರತದೊಂದಿಗೆ ಐತಿಹಾಸಿಕ ಬಾಂಧವ್ಯ ಹೊಂದಿದೆ ಮತ್ತು ಇಲ್ಲಿ ಗಣನೀಯ ಪ್ರಮಾಣದ 70 ಸಾವಿರಕ್ಕೂ ಹೆಚ್ಚು ಭಾರತೀಯರ ಜನಸಂಖ್ಯೆಯ ಸಮುದಾಯವೇ ಇದೆ. ತಾಂಜೇನಿಯಾ ಮತ್ತು ಭಾರತ ಸಾಂಪ್ರದಾಯಿಕವಾಗಿ ಆತ್ಮೀಯ, ಸ್ನೇಹ ಮತ್ತು ಸಹಕಾರದ ಬಾಂಧವ್ಯ ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ ಎರಡೂ ರಾಷ್ಟ್ರಗಳ ಬಾಂಧವ್ಯ ಆರೋಗ್ಯ ಮತ್ತು ವೈದ್ಯ ಕ್ಷೇತ್ರದಲ್ಲಿನ ಸಹಕಾರ ಸೇರಿದಂತೆ ಆತ್ಮೀಯ ನಂಟಿಗೆ ಅತ್ಯುನ್ನತ ರಾಜಕೀಯ ಮಟ್ಟದ ಸಹಕಾರವನ್ನು ಗುರುತಿಸಿವೆ.

ಆಯುಷ್ ಸಚಿವಾಲಯ ಭಾರತೀಯ ವೈದ್ಯ ಪದ್ಧತಿಗಳನ್ನು ಜಾಗತಿಕವಾಗಿ ಪ್ರಸಾರ ಮಾಡುವ ತನ್ನ ಕಾರ್ಯಕ್ರಮದ ಅಂಗವಾಗಿ ಚೀಣಾ, ಮಲೇಷಿಯಾ, ಹಂಗರಿ, ಬಾಂಗ್ಲಾದೇಶ, ನೇಪಾಳ ಇತ್ಯಾದಿ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

***

AKT/NT/VK