Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಂತಕತೆ ಎನಿಸಿದ್ದ ಹಾಕಿ ಆಟಗಾರ ಮೊಹಮದ್ ಶಾಹಿದ್ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಕಿ ದಂತಕಥೆ ಎನಿಸಿದ್ದ ಆಟಗಾರ ಮೊಹಮದ್ ಶಾಹಿದ್ ಅವರ ದುರಾದೃಷ್ಟಕರ ಮತ್ತು ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಅಪಾರ ಉತ್ಸಾಹ ಮತ್ತು ಚಟುವಟಿಕೆಯಿಂದ ಆಡುತ್ತಿದ್ದ ಮೊಹಮದ್ ಶಾಹಿದ್ ಅವರ ದುರಾದೃಷ್ಟಕರ ಮತ್ತು ಅಕಾಲಿಕ ಅಗಲಿಕೆಯಿಂದ ಭಾರತ ಪ್ರತಿಭಾವಂತ ಕ್ರೀಡಾಪಟುವನ್ನು ಕಳೆದುಕೊಂಡಿದೆ.

ನಾವು ಮೊಹಮದ್ ಶಾಹಿದ್ ಅವರನ್ನು ಉಳಿಸಿಕೊಳ್ಳಲು ಶಕ್ತಿಮೀರಿ ಶ್ರಮಿಸಿದೆವು, ಆದರೆ ನಮ್ಮ ಪ್ರಾರ್ಥನೆ ಹಾಗೂ ನೆರವು ಅವರನ್ನು ಉಳಿಸಿಕೊಳ್ಳಲು ಶಕ್ತವಾಗಲಿಲ್ಲ. ಅವರಿಗೆ ಗೌರವ ನಮನಗಳು. ಅವರ ಆತ್ಮಕ್ಕೆ ಶಾಂತಿ ದೊರಕಲಿ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.