ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಚುನಾವಣಾ ಆಯೋಗದ ದಾಸ್ತಾನು ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ.
ಎ) 2016-17 ರ ಅವಧಿಯಲ್ಲಿ ಮೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಮೆ. ಎಲೆಕ್ಟ್ರಾನಿಕ್ಸ್ ಕಾರಪೊರೇಷನ್ ಆಫ್ ಇಂಡಿಯಾ ಲಿ., ನಿಂದ ಅನುಕ್ರಮವಾಗಿ ಪ್ರತಿ ಯುನಿಟ್ ಗೆ 770007 ರೂ. ಮತ್ತು 93007 ರೂ. ತಾತ್ಕಾಲಿಕ ವೆಚ್ಚದಲ್ಲಿ 550000 ಬ್ಯಾಲೆಟ್ ಯುನಿಟ್ ಗಳು (ಬಿಯುಗಳು) ಮತ್ತು 545000 ಕಂಟ್ರೋಲ್ ಯುನಿಟ್ ಗಳ (ಸಿ.ಯು.ಗಳು), ಮತ್ತು
ಬಿ) ಭವಿಷ್ಯದಲ್ಲಿ ಒಟ್ಟಾರೆ ದಾಸ್ತಾನು ವೆಚ್ಚವನ್ನು ಕಡಿಮೆ ಮಾಡುವ ಸಂಬಂಧ ಪ್ರತಿ ಯುನಿಟ್ ನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಿಗಾಗಿ 25 ಕೋಟಿ ರೂಪಾಯಿ ಮಂಜೂರು. ತರುವಾಯ 2017-18 ಮತ್ತು 2018-19ರ ಸಾಲಿನ ಬಿಯುಗಳು ಮತ್ತು ಸಿಯುಗಳ ದಾಸ್ತಾನು ಯೋಜನೆ ರೂಪಿಸಲು ನಿರ್ಧಾರ. ಅದೇ ರೀತಿ 2016-2017, 2017-18 ಮತ್ತು 2018-19ರ ಸಾಲಿನಲ್ಲಿ ಮತದಾರರ ಪರಿಶೀಲನಾ ಪೇಪರ್ ಅಡಿಟ್ ಟ್ರೇಲ್ ಯುನಿಟ್ (ವಿವಿಪಿಎಟಿ) ಗಳ ದಾಸ್ತಾನಿಗೂ ಯೋಜನೆ ಪರಿಗಣನೆಗೂ ನಿರ್ಧಾರ.
ಇದು 2000-2005ರ ಅವಧಿಯಲ್ಲಿ ಉತ್ಪಾದಿಸಲಾದ ಹಳೆಯ ವಿದ್ಯುನ್ಮಾನ ಮತಯಂತ್ರಗಳನ್ನು ಹೊರಗಿಡಲು ಅವಕಾಶ ನೀಡುತ್ತದೆ ಮತ್ತು ಚುನಾವಣಾ ಆಯೋಗಕ್ಕೆ 2019ರಲ್ಲಿ ನಡೆಯಬೇಕಿರುವ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗಾಗಿ ಮತ್ತೆ ಹೊಸ ದಾಸ್ತಾನು ಸಂಗ್ರಹಣೆಗೆ ಅವಕಾಶ ಕಲ್ಪಿಸುತ್ತದೆ.
ಹಿನ್ನೆಲೆ:
ವಿದ್ಯುನ್ಮಾನ ಮತ ಯಂತ್ರಗಳ (ಇ.ವಿ.ಎಂ.ಗಳು) ಪ್ರಾಥಮಿಕ ಪ್ರಾಯೋಗಿಕ ಬಳಕೆ ಬಳಿಕ, 2004ರ ಲೋಕಸಭಾ ಚುನಾವಣೆಯಿಂದ ದೇಶಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದ ಆಣತಿಯಂತೆ ಎರಡು ಸಾರ್ವಜನಿಕ ವಲಯದ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು (ಬಿ.ಇ.ಎಲ್.) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇ.ಸಿ.ಐ.ಎಲ್.) ಹೈದ್ರಾಬಾದ್ 1989ರಲ್ಲಿ ಇ.ವಿ.ಎಂ.ಗಳನ್ನು ಅಭಿವೃದ್ಧಿಪಡಿಸಿದವು. ಒಂದು ಇ.ವಿ.ಎಂ. ಸಾಮಾನ್ಯವಾಗಿ ಒಂದು ಬ್ಯಾಲೆಟ್ ಯುನಿಟ್ (ಬಿಯು) ಮತ್ತು ಕಂಟ್ರೋಲ್ ಯುನಿಟ್ (ಸಿಯು) ಒಳಗೊಂಡಿರುತ್ತದೆ. ಆದರೆ, ಯಾವಾಗ ಅಭ್ಯರ್ಥಿಗಳ ಸಂಖ್ಯೆ 16ಕ್ಕಿಂತ ಹೆಚ್ಚಿರುತ್ತದೋ ಮತ್ತೊಂದು ಬಿಯುವನ್ನು ಸಿಯುಗೆ ಸೇರಿಸಲಾಗುತ್ತದೆ. ಗರಿಷ್ಠ 4 ಬಿಯುಗಳನ್ನು ಸಿಯುಗೆ ಸೇರಿಸಬಹುದಾಗಿದೆ.