ಪಿಎಂಇಂಡಿಯಾ
ಲೇಖಕಿ ಹಾಗೂ ಭಾರತದ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಮಹಾಶ್ವೇತಾ ದೇವಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
“ಮಹಾಶ್ವೇತಾದೇವಿ ಅವರು, ತಮ್ಮ ಲೇಖನಿಯ ಶಕ್ತಿಯಿಂದ ಸುಂದರವಾಗಿ ಬರೆಯುತ್ತಿದ್ದರು, ಅಂತೆಯೇ ಸಹಾನುಭೂತಿ, ಸಮಾನತೆ ಮತ್ತು ನ್ಯಾಯದ ಧ್ವನಿಯಾಗಿದ್ದರು, ಅವರ ಅಗಲಿಕೆ ನಮಗೆ ಅತೀವ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪ್ರಧಾನಿ ಹೇಳಿದ್ದಾರೆ.
Mahashweta Devi wonderfully illustrated the might of the pen. A voice of compassion, equality & justice, she leaves us deeply saddened. RIP.
— Narendra Modi (@narendramodi) July 28, 2016