ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕಾಗಿ ರಾಷ್ಟ್ರೀಯ ಜವಳಿ ನಿಗಮ ನಿಯಮಿತ(ಎನ್.ಟಿ.ಸಿ.ಎಲ್.)ದ ಇಂದು -6 ಮಿಲ್ ನ 12 ಎಕರೆ ಭೂಮಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ನಿಯಮ ಮತ್ತು ನಿಬಂಧನೆಗಳಿಗೆ ಸಂಪುಟ ತನ್ನ ಒಪ್ಪಿಗೆ ನೀಡಿದೆ.
ಹಿನ್ನೆಲೆ:
ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚೈತನ್ಯಭೂಮಿಯು ಮುಂಬೈನಲ್ಲಿ ರಾಷ್ಟ್ರೀಯ ಜವಳಿ ನಿಗಮ ನಿಯಮಿತ (ಎನ್.ಟಿ.ಸಿ.ಎಲ್.)ನ ಇಂದು-6 ಮಿಲ್ ಸಮೀಪದಲ್ಲೇ ಇದೆ; ಇದು ಲಕ್ಷಾಂತರ ಭಾರತೀಯರಿಗೆ ಯಾತ್ರಾಸ್ಥಳವಾಗಿದೆ.
ರೋಗಗ್ರಸ್ಥ ಜವಳಿ ಉದ್ಯಮಗಳ (ರಾಷ್ಟ್ರೀಕರಣ) ತಿದ್ದುಪಡಿ ಕಾಯಿದೆ 1995ರ ಸೆಕ್ಷನ್ 11ರ ಅಡಿಯಲ್ಲಿ ಅಗತ್ಯವಾದ ಪರಿಹಾರವನ್ನು ಪಾವತಿಸುವ ಮೂಲಕ ಮತ್ತು ಭಾರತ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಮತ್ತು ರಾಷ್ಟ್ರೀಯ ಜವಳಿ ನಿಗಮ ನಿಯಮಿತದೊಂದಿಗೆ ತ್ರಿಪಕ್ಷೀಯ ತಿಳಿವಳಿಕೆ ಒಪ್ಪಂದವನ್ನು ಸ್ಥಿರೀಕರಿಸುವ ಮೂಲಕ ರಾಷ್ಟ್ರೀಯ ಜವಳಿ ನಿಗಮ ನಿಯಮಿತ (ಎನ್.ಟಿ.ಸಿ.ಎಲ್.)ದ ಇಂದು -6 ಮಿಲ್ ನ 12 ಎಕರೆ ಭೂಮಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕಾಗಿ ವರ್ಗಾವಣೆ ಮಾಡಲು ಈಗಾಗಲೇ ಕೇಂದ್ರ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.
AD/VBA/SH