Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ.)ದ ಕನಿಷ್ಠ ವಯಸ್ಸಿನ ವಿಧ್ಯುಕ್ತ ಸಭೆ 1973 (ನಂ.138) ಮತ್ತು ಅತಿ ಕೆಟ್ಟ ಸ್ವರೂಪದ ಬಾಲ ಕಾರ್ಮಿಕರ ವಿಧ್ಯುಕ್ತ ಸಭೆ, 1999 (ನಂ.182) ರ ಸ್ಥಿರೀಕರಣಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ.)ದ ಎರಡು ಮೂಲಭೂತ ಕನ್ವೆನ್ಷನ್ ಅಂದರೆ, ಕನಿಷ್ಠ ವಯಸ್ಸಿನ ಕನ್ವೆನ್ಷನ್ 1973 (ನಂ.138) ಮತ್ತು ಅತ್ಯಂತ ಶೋಚನೀಯ ಸ್ವರೂಪದ ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ಅದರ ನಿರ್ಮೂಲನೆಗೆ ತತ್ ಕ್ಷಣದ ಕ್ರಮದ ಕಾಳಜಿ ಹೊಂದಿರುವ ಅತಿ ಕೆಟ್ಟ ಸ್ವರೂಪದ ಬಾಲ ಕಾರ್ಮಿಕರ ಕನ್ವೆನ್ಷನ್, 1999 (ನಂ.182) ರ ಸ್ಥಿರೀಕರಣಕ್ಕೆ ತನ್ನ ಅನುಮೋದನೆ ನೀಡಿದೆ.

ಭಾರತವು, 1919ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ.)ದ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ. ಪ್ರಸ್ತುತ ಐ.ಎಲ್.ಓ.ನಲ್ಲಿ 187 ಸದಸ್ಯ ರಾಷ್ಟ್ರಗಳಿವೆ. ಐ.ಎಲ್.ಓ.ದಲ್ಲಿ ಪ್ರಮುಖ ರೀತಿಯ ಕ್ರಮಗಳು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕನ್ವೆನ್ಷನ್, ಶಿಫಾರಸು ಮತ್ತು ಶಿಷ್ಟಾಚಾರದ ರೂಪದಲ್ಲಿ ನಿಗದಿಪಡಿಸಿವೆ. ಭಾರತವು ಈವರೆಗೆ 45 ಕನ್ವೆನ್ಷನ್ ಗಳಿಗೆ ಸ್ಥಿರೀಕರಣ ನೀಡಿದ್ದು ಈ ಪೈಕಿ 42 ಜಾರಿಯಲ್ಲಿವೆ. ಈ ಪೈಕಿ 4 ಮೂಲಭೂತ ಅಥವಾ ಪ್ರಮುಖ ಕನ್ವೆನ್ಷನ್ ಗಳಾಗಿವೆ.

ಹಿನ್ನೆಲೆ:

ಸರ್ಕಾರವು ಬಾಲ ಕಾರ್ಮಿಕ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಯೋಜನೆ ಆಧಾರಿತ ಮತ್ತು ಕಠಿಣ ಶಾಸನಗಳನ್ನು ಒಳಗೊಂಡ ಬಹುಹಂತದ ಕಾರ್ಯತಂತ್ರವನ್ನು ಅಳವಡಿಸಿದೆ. ಆದಾಗ್ಯೂ, ದೇಶದ ಮಕ್ಕಳ ಭವಿಷ್ಯವನ್ನು ಸುರಕ್ಷಿತ ಗೊಳಿಸುವ ಖಾತ್ರಿ ಪಡಿಸಲು, ಯಾವುದೇ ವೃತ್ತಿ ಅಥವಾ ಪ್ರಕ್ರಿಯೆಯಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಅಥವಾ ನೌಕರಿಗೆ ನಿಯೋಜಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸುವ ಬಾಲ ಮತ್ತು ಹರೆಯದ ಕಾರ್ಮಿಕರ (ನಿರ್ಬಂಧ ಮತ್ತು ನಿಯಂತ್ರಣ) ಕಾಯಿದೆ 1986ರ ನಿಬಂಧನೆಗಳನ್ನು ಸೂಕ್ತವಾಗಿ ಜಾರಿಗೊಳಿಸುವ ಖಾತ್ರಿಯೊಂದಿಗೆ ಅದರ ಉಪಕ್ರಮಗಳನ್ನು ಮತ್ತಷ್ಟು ಸದೃಢಗೊಳಿಸುವ ಅಗತ್ಯವಿದೆ.

ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನ ಮಾಡುವ ಸಲುವಾಗಿ ಕೈಗೊಂಡಿರುವ ಇತ್ತೀಚಿನ ಉಪಕ್ರಮಗಳ ಆವೇಗವು ಸಹ 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅತ್ಯಂತ ಮಹತ್ವದ್ದಾಗಿದೆ. ಕನ್ವೆನ್ಷನ್ನ ನಿಬಂಧನಗೆಗಳ ಅನುಸರಣೆಯ ಕಾನೂನಾತ್ಮಕ ಬದ್ಧತೆಯಡಿ ದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಗುರಿ ಸಾಧನೆಯ ನಿಟ್ಟಿನಲ್ಲಿ ಕನ್ವೆನ್ಷನ್ ಸಂಖ್ಯೆ 138 ಮತ್ತು 182ರ ಸ್ಥಿರೀಕರಣವು ಮತ್ತೊಂದು ಮುಂದಡಿಯಾಗಿದೆ. ಪ್ರಸ್ತುತ ಕನ್ವೆನ್ಷನ್ 138ನ್ನು 169 ರಾಷ್ಟ್ರಗಳು ಸ್ಥರೀಕರಿಸಿವ ಮತ್ತು 182 ಕನ್ವೆನ್ಷನ್ ಅನ್ನು 180 ದೇಶಗಳು ಸ್ಥಿರೀಕರಿಸಿವೆ. ಈ ಎರಡು ಮಹತ್ವದ ಕನ್ವೆನ್ಷನ್ ಗಳನ್ನು ಸ್ಥಿರೀಕರಿಸುವ ಮೂಲಕ ಭಾರತವು, ಬಾಲ ಕಾರ್ಮಿಕರ ನೇಮಕಾತಿಗೆ ಕಠಿಣ ನಿಬಂಧ ಹೇರಿರುವ ಮತ್ತು ನಿರ್ಬಂಧಿಸುವ ಶಾಸನ ಅಳವಡಿಸಿಕೊಂಡಿರುವ ಬಹುತೇಕ ರಾಷ್ಟ್ರಗಳ ಸಾಲು ಸೇರಿದೆ.