ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂತಾರಾಷ್ಟ್ರೀಯ ಭೂಖಂಡಗಳ ವೈಜ್ಞಾನಿಕ ಡ್ರಿಲ್ಲಿಂಗ್ ಕಾರ್ಯಕ್ರಮ (ಐ.ಸಿ.ಡಿ.ಪಿ.) ಒಕ್ಕೂಟದಲ್ಲಿ ಭಾರತದ ಸದಸ್ಯತ್ವಕ್ಕಾಗಿ ಹೆಲ್ಮ್ಹೋಲ್ಟ್ಜ್ ಕೇಂದ್ರ, ಪೋಟ್ಸ್ ಡ್ಯಾಮ್ ಜಿ.ಎಫ್.ಝಡ್. ಜರ್ಮನಿಯ ಭೂ ವಿಜ್ಞಾನಗಳ ಸಂಶೋಧನಾ ಕೇಂದ್ರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಇದು ಸರ್ಕಾರದ ಆರ್ಥಿಕ ನೆರವಿನ, ಜರ್ಮನಿಯ ಬ್ರಂಡೆನ್ಬರ್ಗ್ ರಾಜ್ಯದ ಸಾರ್ವಜನಿಕ ಕಾನೂನು ಪ್ರತಿಷ್ಠಾನವಾಗಿದೆ.
ಐ.ಸಿ.ಡಿ.ಪಿ.ಯೊಂದಿಗೆ ಐದು ವರ್ಷಗಳ ಅವಧಿಗೆ ಸದಸ್ಯತ್ವ ಹೊಂದಲು ಎಂ.ಓ.ಯು.ಗೆ ಅಂಕಿತ ಹಾಕುವ ಮೂಲಕ, ಭಾರತ ಕೊಯ್ನ ಪ್ರದೇಶದಲ್ಲಿ ಆಳವಾದ ಕೊರೆಯುವ ಮತ್ತು ಅದಕ್ಕೆ ಸಂಬಂಧಿಸಿದ ಶೋಧದಲ್ಲಿ ತೊಡಗಿಕೊಳ್ಳಲು ವಿವಿಧ ಅಂಶಗಳ ಅಂತಾರಾಷ್ಟ್ರೀಯ ಪರಿಣತಿಯೊಂದಿಗೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧರಾದ ತಜ್ಞರೊಂದಿಗೆ ವೈಜ್ಞಾನಿಕ ಡ್ರಿಲ್ಲಿಂಗ್ ನಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಲಿದೆ. ಸದಸ್ಯತ್ವದ ಒಪ್ಪಂದದ ಭಾಗವಾಗಿ ಭಾರತವು ಐಸಿಡಿಪಿಯ ಎರಡು ಸಮಿತಿಗಳಲ್ಲಿ – ಕಾರ್ಯಕಾರಿ ಸಮಿತಿ (ಇ.ಸಿ.) ಮತ್ತು ಗೌರ್ನರ್ ಗಳ ಸಭೆ (ಎಓಜಿ).ಯಲ್ಲಿ ಸ್ಥಾನ ಪಡೆಯಲಿದೆ. ಅಲ್ಲದೆ ಐಸಿಡಿಪಿ ತಾಂತ್ರಿಕ/ಕಾರ್ಯನಿರ್ವಹಣಾ ಬೆಂಬಲವನ್ನು ನೀಡಲಿದೆ, ಪ್ರಮುಖ ವೈಜ್ಞಾನಿಕ ಕ್ಷೇತ್ರ, ಮಾದರಿ ಮತ್ತು ದತ್ತಾಂಶ ನಿರ್ವಹಣೆ ಕ್ಷೇತ್ರದಲ್ಲಿನ ಮಾನವಶಕ್ತಿಯ ತರಬೇತಿಗೆ ಸಂಬಂಧಿಸಿದಂತೆ ಸಾಮರ್ಥ್ಯ ವರ್ಧನೆಗೆ ಅವಕಾಶ ಕಲ್ಪಿಸುತ್ತದೆ ಮತ್ತು ಭೂ ವಿಜ್ಞಾನಗಳ ಸಚಿವಾಲಯವು ಕೊಯ್ನಾ ವೈಜ್ಞಾನಿಕ ಡೀಪ್ ಡ್ರಿಲ್ಲಿಂಗ್ ಯೋಜನೆಯನ್ನು ಕೈಗೊಳ್ಳಲು ಶಿಬಿರಗಳಿಗೂ ಬೆಂಬಲ ನೀಡಲಿದೆ.
ಐ.ಸಿ.ಡಿ.ಪಿ.ಯ ಸದಸ್ಯನಾಗಿ, ಭಾರತದಿಂದ ವಿಜ್ಞಾನಿಗಳು/ಎಂಜಿನಿಯರುಗಳು ಎಲ್ಲ ಐಸಿಡಿಪಿ ಸಹ –ಆರ್ಥಿಕ ನೆರವಿನ ಶಿಬಿರಗಳಲ್ಲಿ ಮತ್ತು ಡಿಲ್ಲಿಂಗ್ ಯೋಜನೆಗಳಲ್ಲಿ ಪಾಲ್ಗೊಳ್ಳಲು ಮತ್ತು ತಮ್ಮ ಪ್ರಸ್ತಾಪಗಳನ್ನು ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಇದು ಭೂಕಂಪದ ಹುಟ್ಟು ಹಾಗೂ ಭೂಕಂಪದ ಪ್ರಕ್ರಿಯೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವುದರ ಮೇಲೆ ಹೊಸ ಬೆಳಕು ಚೆಲ್ಲಲಿದೆ.
AKT/VBA/SH/SK