ಪಿಎಂಇಂಡಿಯಾ
ಸುಗಮವಾಗಿ ವಾಣಿಜ್ಯ ನಡೆಸುವ ಸರ್ಕಾರದ ಉಪಕ್ರಮದ ಸಾಲಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್ (ಐಸಿಬಿ) ನಂತರ ಯಶಸ್ವಿ ಬಿಡ್ಡರ್ ಗಳಿಗೆ ಹೈಡ್ರೋ ಕಾರ್ಬನ್ ಶೋಧನೆ ಮತ್ತು ಪರವಾನಗಿ ನೀತಿ (ಹೆಲ್ಪ್) ಅಡಿಯಲ್ಲಿ ಯಶಸ್ವಿ ಬಿಡ್ದುದಾರರಿಗೆ ನಿಕ್ಷೇಪಗಳು / ಗುತ್ತಿಗೆ ಪ್ರದೇಶಗಳ ಹಂಚಿಕೆ ಅನುಮೋದಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ಹಣಕಾಸು ಸಚಿವರಿಗೆ ಅಧಿಕಾರ ನೀಡಲುತನ್ನ ಅನುಮೋದನೆ ನೀಡಿದೆ. ಹೆಲ್ಪ್ ಅಡಿಯಲ್ಲಿ, ನಿಕ್ಷೇಪಗಳನ್ನು ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ. ಹೀಗಾಗಿ, ಈ ಅಧಿಕಾರ ನೀಡುವಿಕೆ ನಿರ್ಧಾರ, ನಿಕ್ಷೇಪ ಹಂಚಿಕೆಯ ಕುರಿತು ಕೈಗೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ ಮತ್ತು ಸುಗಮ ವಾಣಿಜ್ಯ ಉಪಕ್ರಮಕ್ಕೆ ಚೈತನ್ಯ ನೀಡುತ್ತದೆ.
ಪರಿಣಾಮಗಳು:
ಹೆಲ್ಪ್ ನೀತಿ ಅಡಿಯಲ್ಲಿ ಇ.ಸಿ.ಎಸ್. ಬಿಡ್ ಮೌಲ್ಯೀಕರಣ ಮಾನದಂಡ (ಬಿ.ಇ.ಸಿ.) ಗಳನ್ನು ಪರಿಗಣಿಸಿ, ಮತ್ತು ಸಿಸಿಇಎಗೆ ನಿಕ್ಷೇಪ ಹಂಚಿಕೆ ಕುರಿತಂತೆ ಶಿಫಾರಸು ಮಾಡಲು ಬಿಡ್ಡರ್ ಗಳೊಂದಿಗೆ ಅಗತ್ಯವೆನಿಸಿದ ಸಂದರ್ಭದಲ್ಲಿ ಮಾತುಕತೆ ನಡೆಸಲಿದೆ. ಸಿಸಿಇಎ ನಿಕ್ಷೇಪಗಳ ಹಂಚಿಕೆಯನ್ನು ಅನುಮೋದಿಸುತ್ತದೆ. ಅಂತರ ಸಚಿವಾಲಯದ ಸಮಾಲೋಚನೆ (ಐಎಂಸಿ) ಸೇರಿದಂತೆ ಇಡೀ ಪ್ರಕ್ರಿಯೆ ತುಸು ದೀರ್ಘ ಮತ್ತು ಸಮಯ ತೆಗೆದುಕೊಳ್ಳುವುದಾಗಿದೆ. ಸರ್ಕಾರದ ಸುಗಮ ವಾಣಿಜ್ಯ ಉಪಕ್ರಮಕ್ಕೆ ಪೂರಕವಾಗಿ, ನಿಕ್ಷೇಪ ಹಂಚಿಕೆಯ/ಗುತ್ತಿಗೆ ಪ್ರದೇಶ ನೀಡಿಕೆಯ ಕಾಲಾವಧಿಯನ್ನು ಕಡಿಮೆ ಮಾಡುವುದು ಅಪೇಕ್ಷಣೀಯವಾಗಿದೆ. ಹೊಸ ಹೈಡ್ರೋಕಾರ್ಬನ್ ಶೋಧನೆ ಮತ್ತು ಪರವಾನಗಿ ನೀತಿಯ ಅಡಿಯಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ನಿರಂತರವಾಗಿದ್ದು, ವರ್ಷದಲ್ಲಿ ಎರಡು ಬಾರಿ ನಿಕ್ಷೇಪ ನೀಡಲಾಗುತ್ತದೆ.
ಹಿನ್ನೆಲೆ:
ಭಾರತ ಸರ್ಕಾರ ಹೈಡ್ರೋಕಾರ್ಬನ್ ಶೋಧನೆ ಮತ್ತು ಪರವಾನಗಿ ನೀತಿ (ಹೆಲ್ಪ್) ವಲಯದಲ್ಲಿನ ಶೋಧನೆ ಮತ್ತು ಉತ್ಪಾದನೆ (ಇ ಮತ್ತು ಪಿ)ಗಾಗಿ 2016ರಲ್ಲಿ ಹೊಸ ನೀತಿ ವ್ಯವಸ್ಥೆ ಜಾರಿಗೊಳಿಸಿದೆ, ಇದು ಹಳೆಯ ನೀತಿಯ ಆಡಳತಕ್ಕೆ ತ್ವರಿತ ಬದಲಾವಣೆ ತರುತ್ತದೆ. ಹೊಸ ನೀತಿ ಆಡಳಿತದ ಪ್ರಧಾನ ಅಂಶಗಳು, ಆದಾಯ ಹಂಚಿಕೆ ಒಪ್ಪಂದ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಹೈಡ್ರೋ ಕಾರ್ಬನ್ ಸಂಪನ್ಮೂಲ ಶೋಧನೆ ಮತ್ತು ಉತ್ಪಾದನೆಗೆ ಒಂದೇ ಪರವಾನಗಿ, ಮಾರುಕಟ್ಟೆ ಮತ್ತು ದರ ಸ್ವಾತಂತ್ರ್ಯ ಇತ್ಯಾದಿ..ಆಗಿವೆ. ಹೆಲ್ಪ್ ಅಡಿಯಲ್ಲಿ ಮುಕ್ತ ಎಕರೆವಾರು ಪರವಾನಗಿ ನೀತಿ (ಓಎಎಲ್.ಪಿ.) ಪ್ರಮುಖ ನಾವಿನ್ಯಪೂರ್ಣ ಅಂಶವಾಗಿದ್ದು, ಅದರಲ್ಲಿ ಹೂಡಿಕೆದಾರರು ತಮ್ಮ ಸ್ವಂತ ಹಿತಕ್ಕೆ ಅನುಗುಣವಾಗಿ ನಿಕ್ಷೇಪವನ್ನು ಗುರುತಿಸಬಹುದಾಗಿದೆ ಮತ್ತು ಹಿತದ ಅಭಿಮತ (ಇಓಎಲ್)ವನ್ನು ವರ್ಷವಿಡೀ ಸಲ್ಲಿಸಬಹುದಾಗಿದೆ. ಯಾವ ಪ್ರದೇಶಕ್ಕೆ ಇಂಗಿತ ವ್ಯಕ್ತಪಡಿಸಲಾಗಿದೆಯೋ ಅದಕ್ಕೆ ಬಿಡ್ಡಿಂಗ್ ಅನ್ನು ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ.
ಜುಲೈ 1, 2017 ರಂದು ಪ್ರಾರಂಭವಾಗಿ 15 ನೇ ನವೆಂಬರ್, 2017 ರಂದು ಮುಕ್ತಾಯಗೊಂಡ ಓಎಎಲ್ಪಿಯಪ್ರಥಮ ಇಓಎಲ್ ಚಕ್ರದಲ್ಲಿ ಸರ್ಕಾರಕ್ಕೆ ಅಗಾಧ ಸ್ಪಂದನ ದೊರೆಯಿತು. ಪ್ರಥಮ ಬಿಡ್ ಸುತ್ತಿನಲ್ಲಿ 11 ರಾಜ್ಯಗಳಲ್ಲಿ ಹರಡಿರುವ 59282 ಚದರ ಕಿಲೋ ಮೀಟರ್ ಪ್ರದೇಶದ 55 ನಿಕ್ಷೇಪಗಳನ್ನು ಬಿಡ್ಡಿಂಗ್ ನಲ್ಲಿ ಅಹ್ವಾನಿಸಲಾಗಿತ್ತು. ಬಿಡ್ಡಿಂಗ್ ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಸಮರ್ಪಿತ ಇ ಬಿಡ್ಡಿಂಗ್ ಪೋರ್ಟಲ್ ಮೂಲಕ ನಿರ್ವಹಿಸಲಾಯಿತು.