Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ಗುವಾಹಟಿಯಲ್ಲಿ ಕುಮಾರ ಭಾಸ್ಕರ್ ವರ್ಮಾ ಸೇತುವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

ಅಸ್ಸಾಂನ ಗುವಾಹಟಿಯಲ್ಲಿ ಕುಮಾರ ಭಾಸ್ಕರ್ ವರ್ಮಾ ಸೇತುವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕುಮಾರ ಭಾಸ್ಕರ್ ವರ್ಮಾ ಸೇತು(ಸೇತುವೆ)ವನ್ನು ಉದ್ಘಾಟಿಸಿದರು. ಈ ಸೇತುವೆಯು ಗುವಾಹಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. “ಸಂಪರ್ಕ, ಸೌಕರ್ಯ ಮತ್ತು ವಾಣಿಜ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಾಗುತ್ತದೆ. ಜತೆಗೆ ಇದು ಭಕ್ತರಿಗೆ ಕಾಮಾಕ್ಯ ದೇವಾಲಯಕ್ಕೆ ಹೆಚ್ಚು ಸುಲಭವಾಗಿ ಹೋಗಲು ಅನುವು ಮಾಡಿಕೊಡುತ್ತದೆ”, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

“ಬ್ರಹ್ಮಪುತ್ರಕ್ಕೆ ಅಡ್ಡಲಾಗಿ ಕುಮಾರ ಭಾಸ್ಕರ್ ವರ್ಮಾ ಸೇತು ಗುವಾಹಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ. ಸಂಪರ್ಕ, ಸೌಕರ್ಯ ಮತ್ತು ವಾಣಿಜ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಾಗುವುದು. ಇದು ಭಕ್ತರಿಗೆ ಕಾಮಾಕ್ಯ ದೇವಾಲಯಕ್ಕೆ ಹೆಚ್ಚು ಸುಲಭವಾಗಿ ಹೋಗಲು ಅನುವು ಮಾಡಿಕೊಡುತ್ತದೆ.” 

 

*****