Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಹಮದಾಬಾದ್ನ.ಲ್ಲಿ ಭಾರತದ ಮೊದಲ ಉನ್ನತ ವೇಗದ ರೈಲ್ವೇ ಯೋಜನೆಯ ಶಂಕುಸ್ಥಾಪನೆ ಸಂದರ್ಭ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಅಹಮದಾಬಾದ್ನ.ಲ್ಲಿ ಭಾರತದ ಮೊದಲ ಉನ್ನತ ವೇಗದ ರೈಲ್ವೇ ಯೋಜನೆಯ ಶಂಕುಸ್ಥಾಪನೆ  ಸಂದರ್ಭ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಅಹಮದಾಬಾದ್ನ.ಲ್ಲಿ ಭಾರತದ ಮೊದಲ ಉನ್ನತ ವೇಗದ ರೈಲ್ವೇ ಯೋಜನೆಯ ಶಂಕುಸ್ಥಾಪನೆ  ಸಂದರ್ಭ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಅಹಮದಾಬಾದ್ನ.ಲ್ಲಿ ಭಾರತದ ಮೊದಲ ಉನ್ನತ ವೇಗದ ರೈಲ್ವೇ ಯೋಜನೆಯ ಶಂಕುಸ್ಥಾಪನೆ  ಸಂದರ್ಭ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ


ಈ ಐತಿಹಾಸಿಕ ಸಂದರ್ಭದಲ್ಲಿ ಇಲ್ಲಿ ಹಾಜರಿರುವ ಜಪಾನ್ನನ ಎಲ್ಲ ಗಣ್ಯರೇ ಮತ್ತು ಇತರೆ ಎಲ್ಲ ಗಣ್ಯರೇ,

ನನ್ನ ಹತ್ತಿರದ ಸ್ನೇಹಿತರಾದ ಆಬೆ ಸಾನ್ ಅವರನ್ನು ಮತ್ತೊಮ್ಮೆ ಹೃದಯಪೂರ್ವಕವಾಗಿ ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಗುಜರಾತ್ನಮ ಭೂಮಿಗೆ ಸ್ವಾಗತಿಸುತ್ತೇನೆ.

ನಿಮ್ಮೆಲ್ಲರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಜಾಗತಿಕ ನಾಯಕರು, ಜಪಾನ್ನನ ಪ್ರಧಾನಮಂತ್ರಿ, ಭಾರತದ ಅತ್ಯುತ್ತಮ ಸ್ನೇಹಿತ, ನನ್ನ ಅತ್ಯುತ್ತಮ ಸ್ನೇಹಿತನಿಗೆ ನೀಡಿರುವ ಗೌರವಕ್ಕಾಗಿ ಅಲ್ಲದೇ ನಿನ್ನೆಯ ಆತಿಥ್ಯ ಮತ್ತು ಈ ವಾತಾವರಣಕ್ಕಾಗಿ ಗುಜರಾತ್ನಗ ಎಲ್ಲ ಜನರಿಗೆ ನನ್ನಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ಸ್ನೇಹಿತರೇ, ಅರೆಮನಸ್ಸಿನ ನಿಶ್ಚಯ, ನಿರ್ಬಂಧಿತ ಕನಸುಗಳೊಂದಿಗೆ ಯಾವುದೇ ದೇಶ ಮುನ್ನಡೆಯಲು ಸಾಧ್ಯವಿಲ್ಲ. ದೇಶದ ಯಶಸ್ಸಿನ ಹಾರಾಟ, ಸಮಾಜದ ಯಶಸ್ಸಿನ ಹಾರಾಟ ಅಥವಾ ವ್ಯಕ್ತಿಯೊಬ್ಬನ ಯಶಸ್ಸಿನ ಹಾರಾಟವನ್ನು ನಿರ್ಧರಿಸಲು ಕೇವಲ ಕನಸುಗಳ ವಿಸ್ತರಣೆಗೆ ಮಾತ್ರ ಸಾಮರ್ಥ್ಯವಿದೆ. ವಿಸ್ತಾರವಾದ ಕನಸುಗಳು, ಅಗಣಿತ ವಿಸ್ತಾರದ ಯಶಸ್ಸಿನ ಹಾರಾಟ ಮತ್ತು ಅನಿಗದಿತ ಮನೋಬಲ ಹೊಂದಿರುವ ನೂತನ ಭಾರತ ಇದಾಗಿದೆ. ಹಳೆಯ ಕನಸೊಂದನ್ನು ನಿಜವಾಗಿಸುವ ನಿಟ್ಟಿನಲ್ಲಿ ಭಾರತ ಅತ್ಯಂತ ದೊಡ್ಡ ಮತ್ತು ಬಹಳ ಪ್ರಮುಖ ಹೆಜ್ಜೆ ಇಟ್ಟಿದೆ. ಮುಂಬಯಿ-ಅಹಮದಾಬಾದ್ ಉನ್ನತ ವೇಗದ ರೈಲು ಮಾರ್ಗದ ಶಂಕುಸ್ಥಾಪನೆ ಸಮಾರಂಭದ ಸಂದರ್ಭ ದೇಶದ 1.25ಶತಕೋಟಿ ಜನರಿಗೆ ಶುಭಾಶಯಗಳನ್ನು ಕೋರುವುದಲ್ಲದೇ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.

ಉನ್ನತ ವೇಗ, ಕ್ಷಿಪ್ರ ಪ್ರಗತಿ ಮತ್ತು ವೇಗದ ತಂತ್ರಜ್ಞಾನದೊಂದಿಗೆ ಫಲಿತಾಂಶಗಳನ್ನು ಬೇಗನೆ ನೀಡುವ ಯೋಜನೆ ಈ ಬುಲೆಟ್ ಟ್ರೇನ್ ಯೋಜನೆಯಾಗಿದೆ.ಇದುಕೇಂದ್ರಸರಕಾರದಅತ್ಯಂತಮಹತ್ವಾಕಾಂಕ್ಷಿಯೋಜನೆಯೂಆಗಿದೆ. ಇದು ಅನುಕೂಲಕರ ಮಾತ್ರವಲ್ಲದೇ ಸುರಕ್ಷಿತವಾಗಿದ್ದು, ಉದ್ಯೋಗಾವಕಾಶ ಮತ್ತು ವೇಗಗಳೆರಡನ್ನೂ ತರಲಿದೆ. ಇದು ಮಾನವಸ್ನೇಹಿ ಅಲ್ಲದೇ ಪರಿಸರ ಸ್ನೇಹಿಯೂ ಆಗಿದೆ. ಇಂದು ಭಾರತ ಮತ್ತು ಜಪಾನ್ಗದಳ ಸಂಬಂಧಗಳಿಗೆ ಐತಿಹಾಸಿಕ ದಿನವಾಗಿದೆ ಮತ್ತು ಭಾವನಾತ್ಮಕ ಸಂದರ್ಭವೂ ಆಗಿದೆ. ಉತ್ತಮ ಸ್ನೇಹಿತ ಯಾವಾಗಲೂ ಸಮಯ ಮತ್ತು ಗಡಿಗಳ ಮಿತಿಗಳನ್ನು ಮೀರಿದವನಾಗಿರುತ್ತಾನೆ ಮತ್ತು ಜಪಾನ್ ತಾನು ಭಾರತಕ್ಕೆ ಎಷ್ಟು ಹತ್ತಿರದ ಸ್ನೇಹಿತನಾಗಿದೆ ಎಂದು ಪ್ರದರ್ಶಿಸಿದೆಯಲ್ಲದೇ ಇದು ಸಮಯ ಮತ್ತು ಗಡಿಗಳನ್ನು ಮೀರಿದ್ದಾಗಿದೆ.ದ್ವಿಪಕ್ಷೀಯ ಸಂಬಂಧಗಳನ್ನು ದೃಢಪಡಿಸುವಲ್ಲಿ ಉತ್ತಮ ಚಿಹ್ನೆಯಾಗಿರುವ ಮುಂಬೈ ಮತ್ತು ಅಹಮದಾಬಾದ್ ನಡುವಿನ ಮೊದಲ ಉನ್ನತ ವೇಗದ ರೈಲು ಯೋಜನೆ ಉತ್ತಮ ನಿದರ್ಶನವಾಗಿದೆ. ಈ ಯೋಜನೆಯ ಶಂಕುಸ್ಥಾಪನೆ ಇಷ್ಟೊಂದು ಕಡಿಮೆ ಸಮಯದಲ್ಲಿ ನಡೆಯುತ್ತಿದೆ ಎಂದರೆ ಅದರ ಅತ್ಯಂತ ದೊಡ್ಡ ಗೌರವ ನನ್ನ ಅತ್ಯುತ್ತಮ ಸ್ನೇಹಿತ ಆಬೆ ಸಾನ್ ಅವರಿಗೆ ಸಲ್ಲಬೇಕಾಗಿದೆ. ವೈಯಕ್ತಿಕ ಆಸಕ್ತಿ ತೋರಿಸುವುದರೊಂದಿಗೆ ಶಿಂಜೊ ಆಬೆ ಅವರು ಈ ಯೋಜನೆಯಲ್ಲಿ ಯಾವುದೇ ಅಡೆತಡೆಗಳು ಇರದ ಖಾತ್ರಿ ಮಾಡಿಕೊಟ್ಟರು.
ಸ್ನೇಹಿತರೆ, ಸಾರಿಗೆಯ ವಿಧಗಳ ಅಭಿವೃದ್ಧಿಯೊಂದಿಗೆ ಮಾನವ ನಾಗರಿಕತೆಯ ಬೆಳವಣಿಗೆ ಅತ್ಯಂತ ಹತ್ತಿರವಾದ ಸಂಪರ್ಕ ಹೊಂದಿದ್ದು, ಏಷ್ಯಾದ ನಾಗರಿಕತೆಯನ್ನು ಹತ್ತಿರದಿಂದ ನೋಡಿದರೆ ಆ ಕಾಲದಲ್ಲಿ ಗ್ರಾಮಗಳು, ನಗರಗಳು ಮತ್ತು ಜನರು ನದಿಗಳ ದಡಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂಬುದು ಕಂಡುಬರುತ್ತದೆ. ಅಲ್ಲದೆ, ಈ ಪ್ರದೇಶಗಳು ಅಭಿವೃದ್ಧಿಯ ಕೇಂದ್ರಗಳಾಗಿದ್ದವು. ಆನಂತರ, ರಸ್ತೆಗಳು ಅಭಿವೃದ್ಧಿಯ ಮಾಧ್ಯಮಗಳಾಗಿದ್ದು ಹೆದ್ದಾರಿಗಳು ಎಲ್ಲಿ ಸಾಗುತ್ತವೊ ಅಲ್ಲಿ ನಗರಗಳು ಅಭಿವೃದ್ಧಿ ಹೊಂದಿದ್ದವು. ಈಗ ಮುಂದಿನ ಪೀಳಿಗೆಯ ಬೆಳವಣಿಗೆ ಉನ್ನತ ವೇಗದ ಮಾರ್ಗಗಳಲ್ಲಿ ಮಾತ್ರ ಕಂಡುಬರಲಿದೆ.

ಸ್ನೇಹಿತರೆ, ರೈಲುಮಾರ್ಗಗಳಾಗಲಿ ಅಥವ ಜಲಮಾರ್ಗಗಳಾಗಲಿ ಅಥವಾ ವೈಮಾನಿಕ ಮಾರ್ಗಗಳಾಗಲಿ ಸಾರಿಗೆ ವ್ಯವಸ್ಥೆ ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ದೇಶದಲ್ಲಿ ಸಂಪರ್ಕಕ್ಕೆ ಈ ಸಾರಿಗೆ ವ್ಯವಸ್ಥೆ ಅಡಿಪಾಯವಾಗುತ್ತದೆ ಅಲ್ಲದೆ, ಈ ರೀತಿಯ ಸಂಪರ್ಕ ಜನರಿಗೆ ಹಲವಾರು ಮತ್ತು ಅನೇಕ ಮಾರ್ಗಗಳಲ್ಲಿ ಲಾಭ ಉಂಟು ಮಾಡುತ್ತದೆ. ಅಮೆರಿಕಾದ ಇತಿಹಾಸ ತಿಳಿದಿರುವವರಿಗೆ, ರೈಲ್ವೆಯ ಅಭಿವೃದ್ಧಿಯ ನಂತರ ಅಮೆರಿಕಾದಲ್ಲಿ ಆರ್ಥಿಕ ಪ್ರಗತಿಯ ನೂತನ ಯುಗ ಯಾವರೀತಿ ಆರಂಭವಾಯಿತು ಎಂಬುದರ ಬಗ್ಗೆ ಇಂದು ಜಗತ್ತು ಅಮೆರಿಕಾದ ಇತಿಹಾಸವನ್ನು ತಿಳಿದಿದೆ.

ಕೆಲಕಾಲದ ಮುನ್ನ ನಮ್ಮ ಸ್ನೇಹಿತ ಅಬೆ ಸಾನ್ ಅವರು 2ನೇ ವಿಶ್ವ ಸಮರದ ನಂತರ ಜಪಾನ್ನದ ಸ್ಥಿತಿಯ ಬಗ್ಗೆ ಹೇಳಿದ್ದರು. ಎಷ್ಟು ಕೆಟ್ಟ ಜೀವನ ಅದಾಗಿತ್ತು, ಯಾವ ರೀತಿಯ ಬಡತನ ಅಲ್ಲಿತ್ತು? ಆದರೆ ಜಪಾನ್ನುಲ್ಲಿ 1964ರಲ್ಲಿ ಬುಲೆಟ್ ಟ್ರೇನ್ ಆರಂಭಿಸಲಾಗಿತ್ತು. ಮತ್ತು ಈ ತಂತ್ರಜ್ಞಾನ ಜಗತ್ತಿನ 15 ದೇಶಗಳಿಗೆ ಹಂತ ಹಂತವಾಗಿ ಹರಡಿದ್ದು ಇದು ಜಪಾನ್ನಈ ಆರ್ಥಿಕ ಸ್ಥಿತಿಯನ್ನು ಪರಿವರ್ತಿಸಿತ್ತು. ಇಂದು ಇದರ ನೆರಳನ್ನೇ ಯುರೋಪ್ನಿಂಂದ ಚೀನಾದವರೆಗೆ ನೋಡಬಹುದಾಗಿದೆ. ಉನ್ನತವೇಗದ ರೈಲುಗಳು ಕೇವಲ ಆರ್ಥಿಕ ಬದಲಾವಣೆಗಳನ್ನು ತರುವಲ್ಲಿ ಅತ್ಯಂತ ಪ್ರಮುಖಪಾತ್ರ ವಹಿಸಿದ್ದಲ್ಲದೆ, ಈ ದೇಶಗಳಲ್ಲಿ ಸಾಮಾಜಿಕ ಬದಲಾವಣೆಗಳನ್ನು ತರುವಲ್ಲಿಯೂ ಪ್ರಮುಖಪಾತ್ರ ವಹಿಸಿವೆ. ಅಂದಿನಿಂದ ಬಹಳಷ್ಟು ಸಮಯ ಬದಲಾಗಿದೆ. ಹಾಗೂ ಅಗತ್ಯಗಳು ಬದಲಾಗಿವೆ. ಆದ್ದರಿಂದ ನಮ್ಮ ಮಾರ್ಗಗಳಲ್ಲಿ ಬದಲಾವಣೆಗಳನ್ನು ತರುವುದು ಅನಿವಾರ್ಯವಾಗಿದೆ. ಸಮಯದೊಂದಿಗೆ ಸಣ್ಣ ಪ್ರಯತ್ನಗಳನ್ನು ಮಾಡಲಾಗಿದೆ. ಹೊಸ ವಿಷಯಗಳನ್ನು ಸೇರಿಸಲಾಗಿದೆ. ಆದರೆ, ನಿಧಾನವಾಗಿ ಚಲಿಸಲು ಇಂದು ಸಮಯವಲ್ಲ. ಸಮಯ ಯಾರಿಗೂ ಹೆಚ್ಚಾಗಿ ಕಾಯುವುದಿಲ್ಲ. ಕಳೆದ 25 ವರ್ಷಗಳಲ್ಲಿ ಎಷ್ಟು ಬದಲಾಗಿದೆಯೋ ಅಷ್ಟು ತಂತ್ರಜ್ಞಾನ ಹಿಂದಿನ ನೂರು ವರ್ಷಗಳಲ್ಲಿ ಬದಲಾವಣೆ ಕಂಡಿದ್ದಿಲ್ಲ. ಅಷ್ಟು ಕ್ಷಿಪ್ರವಾಗಿ ಬದಲಾವಣೆಗಳು ಉಂಟಾಗುತ್ತಿದ್ದಲ್ಲಿ ಇಂದು ನಾವು ಕೇವಲ ಸಂಪರ್ಕದಿಂದಾಚೆಗೆ ಉನ್ನತ ವೇಗದ ಸಂಪರ್ಕಕ್ಕೆ ಆದ್ಯತೆ ನೀಡಬೇಕಿದೆ. ಇದೇ ನಮ್ಮ ಆದ್ಯತೆಯಾಗಿದ್ದು ಇದರ ಮೇಲೆಯೇ ನಾವು ಒತ್ತು ನೀಡುತ್ತಿದ್ದೇವೆ. ಉನ್ನತ ವೇಗದ ಸಂಪರ್ಕ ವೇಗವನ್ನು ಹೆಚ್ಚಿಸಿ ದೂರವನ್ನು ಕಡಿಮೆ ಮಾಡುತ್ತದೆ. ಮತ್ತು ಆರ್ಥಿಕ ಪ್ರಗತಿಗಾಗಿ ನೂತನ ಮಾರ್ಗಗಳನ್ನು ತೆರೆಯುತ್ತದೆ.

ಸ್ನೇಹಿತರೆ, ಉತ್ಪಾದಕತೆ ಮತ್ತು ಆಯಾ ದೇಶದ ಆರ್ಥಿಕ ಪ್ರಗತಿಯ ನಡುವೆ ನೇರ ಸಂಬಂಧವಿವೆ. ಉತ್ಪಾದಕತೆ ಇದ್ದಲ್ಲಿ ಬೆಳವಣಿಗೆ ಉಂಟಾಗುತ್ತದೆ. ಉನ್ನತ ವೇಗದ ಸಂಪರ್ಕದೊಂದಿಗೆ ಹೆಚ್ಚಿನ ಉತ್ಪಾದಕತೆಯ ಮೇಲೆ ನಾವು ಒತ್ತು ನೀಡುತ್ತಿದ್ದೇವೆ.
ಸ್ನೇಹಿತರೆ, ಈ ಸಂದರ್ಭದಲ್ಲಿ ಜಪಾನ್ನವ ಸ್ನೇಹದ ಮತ್ತೊಂದು ವಿಷಯವನ್ನು ವಿಶೇಷವಾಗಿ ನಾನು ಶ್ಲಾಘಿಸಲು ಇಚ್ಛಿಸುತ್ತೇನೆ. ನಾವು ಭಾರತೀಯರು, ಅದರಲ್ಲೂ ಮುಖ್ಯವಾಗಿ ನಾವು ಗುಜರಾತಿಗಳು ಮತ್ತು ಅಹ್ಮದಾಬಾದ್ನಒವರು ಏನಾದರೂ ಖರೀದಿಸಲು ಅಥವಾ ಮಾರಲು ಹೋದಲ್ಲಿ ಪ್ರತಿಯೊಂದನ್ನು ನಾವು ತೂಕ ಮಾಡಿ ಗಮನಿಸುತ್ತೇವಲ್ಲದೇ ಪ್ರತಿ ಪೈಸೆಯ ಲೆಕ್ಕ ಇಡುತ್ತೇವೆ.

ನಾವು ಲಾಭ ನಷ್ಟಗಳೆರಡನ್ನು ಸತತವಾಗಿಹಾಗೂನಿರಂತರವಾಗಿ ವಿಶ್ಲೇಷಿಸುತ್ತೇವೆ. ಸಾಧಾರಣ ಬೈಕ್ ಖರೀದಿಸಲು ನಾವು ಹೋದಾಗ ಮತ್ತು ಬ್ಯಾಂಕ್ನಿಂ ದ ಸಾಲ ಪಡೆಯಬೇಕಾದಾಗ 10 ಬ್ಯಾಂಕ್ಗಮಳ ಬಾಗಿಲನ್ನು ತಟ್ಟುತ್ತೇವೆ. ಪ್ರತಿ ಬ್ಯಾಂಕ್ ಅನ್ನು ಕನಿಷ್ಠ10 ಬಾರಿ ಸಂದರ್ಶಿಸುತ್ತೇವೆ ಅಲ್ಲದೆ, ಯಾರು ನಮಗೆ ಸಾಲವನ್ನು ಕಡಿಮೆ ಬಡ್ಡಿಯಲ್ಲಿ ನೀಡುತ್ತಾರೆ ಎಂದು ಲೆಕ್ಕಾಚಾರ ಹಾಕುತ್ತೇವೆ. ಒಂದು ಬ್ಯಾಂಕ್ ಸಾಲವನ್ನು ಶೇ.8ರ ಬಡ್ಡಿಯಲ್ಲಿ ನೀಡಿದರೆ ಮತ್ತೊಂದು ಬ್ಯಾಂಕ್ ಶೇ.9ರಲ್ಲಿ ನೀಡಬಹುದು. ಇಂತಹ ಸಂದರ್ಭದಲ್ಲಿ ನಾವು ಮತ್ತೆ ಲೆಕ್ಕಾಚಾರ ಹಾಕುತ್ತೇವೆ. ಈ ಬಡ್ಡಿದರದಲ್ಲಿ ನಾನು ಬೈಕ್ ಖರೀದಿಸಿದರೆ ಅಂತಿಮವಾಗಿ ಸಾಲ ಮತ್ತು ಬಡ್ಡಿಯ ಹಣಪಾವತಿ ಸಂದರ್ಭ ಬೈಕ್ನಬ ವೆಚ್ಚ ಅಂತಿಮವಾಗಿ ಎಷ್ಟಾಗುತ್ತದೆ ಅಲ್ಲದೆ, ಎಷ್ಟು ವರ್ಷಗಳಲ್ಲಿ ಹಣ ಪಾವತಿ ಮಾಡಬೇಕು ಎಂಬುದನ್ನು ಯೋಚಿಸುತ್ತೇವೆ. ಈ ಎಲ್ಲಾ ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿ ನಾವು ನೋಡುತ್ತೇವೆ ಅಲ್ಲದೆ, ದರ ಕಡಿಮೆ ಮಾಡಿಕೊಳ್ಳುವ ಕೋರಿಕೆಯೊಂದಿಗೆ ಬ್ಯಾಂಕ್ಗ್ಳನ್ನು ಎಷ್ಟು ಬಾರಿ ಸಂದರ್ಶಿಸುತ್ತೇವೆ ಅಂದರೆ ಬ್ಯಾಂಕಿನ ಉದ್ಯೋಗಿಯೂ ಸುಸ್ತಾಗುವಷ್ಟು ವಿಚಾರಿಸಿರುತ್ತೇವೆ. ಶೇ.8 ಅಥವ 9ರ ದರದಲ್ಲಿ ಸಾಲ ಪಡೆಯಲು ಆಗುವುದಿಲ್ಲ. ಬಡ್ಡಿ ದರವನ್ನು ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ಯಾರಾದರೂ ಶೇ.0.5ರಷ್ಟು ಬಡ್ಡಿದರ ಕಡಿಮೆ ಮಾಡಿದರೂ ಸಂಭ್ರಮ ಆಚರಿಸುತ್ತೇವೆ. ಇದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಮತ್ತು ಬಹುಶಃ ಅಹ್ಮದಾಬಾದ್ನತ ಜನರಿಗೆ ಬಹಳಷ್ಟು ಜನರಿಗೆ ತಿಳಿದಿದೆ.ಇದುಎಲ್ಲಡೆನಡೆಯುವಕ್ರಮವೂಆಗಿದೆ.

ಇದರಲ್ಲಿಯಾವುದೇಬದಲಾವಣೆಗಳುಇರುವುದಿಲ್ಲ.

ಸ್ನೇಹಿತರೆ, ಯೋಚಿಸಿ, ಭಾರತಕ್ಕೆ ಅಬೆಸಾನ್ರಂರತಹ ಸ್ನೇಹಿತ ಮತ್ತು ಜಪಾನ್ನಂ್ತಹ ಸ್ನೇಹಿತ ಸಿಕ್ಕಂತೆ ಯಾರಿಗೂ ಒಬ್ಬ ಸ್ನೇಹಿತ ಅಥವಾ ಬ್ಯಾಂಕ್ ಸಿಗಲು ಸಾಧ್ಯವಿಲ್ಲ. ಯಾರಾದರೂ ಬಡ್ಡಿರಹಿತ ಸಾಲವನ್ನು ನೀಡಿ ಅದನ್ನು 10 ಅಥವಾ20 ವರ್ಷಗಳಲ್ಲದೆ 50 ವರ್ಷಗಳಲ್ಲಿ ವಾಪಸ್ಸು ಪಾವತಿ ಮಾಡುವ ಕೊಡುಗೆ ನೀಡುತ್ತೇವೆ ಎಂದರೆ ಯಾರಾದರೂ ಇದನ್ನ ನಂಬುತ್ತಾರೆಯೇ? ಜನರಿಗೆ ಈ ರೀತಿಯ ಬ್ಯಾಂಕ್ ಸಿಗುವುದಿಲ್ಲ. ಆದರೆ ಭಾರತಕ್ಕೆ ಅಂತಹ ಸ್ನೇಹಿತ ಸಿಕ್ಕಿದ್ದು ಅವರು 88,000 ಕೋಟಿ ರೂ.ಗಳನ್ನು ಈ ಬುಲೆಟ್ ಟ್ರೇನ್ಗಾತಗಿ ಶೇ.0.1ರ ಬಡ್ಡಿದರದಲ್ಲಿ ನೀಡಲು ನಿರ್ಧರಿಸಿದ್ದಾರೆ.ಇಂಥಅವಕಾಶವನ್ನುನಾವುಕಳೆದುಕೊಳ್ಳಬಾರದುಎಂದುನಿರ್ಧರಿಸಿ ಈ ಮಹಾತ್ವಾಕಾಂಕ್ಷಿಯೋಜನೆಆರಂಭಿಸಿದ್ದೇವೆ. ಸಾಮಾನ್ಯಜನರಂತೆನಾವೂಕೂಡಸಾಲದಲೆಕ್ಕಾಚಾರವನ್ನುಮಾಡಿಯೇ ಈ ನಿರ್ಧಾರಕೈಗೊಂಡಿದ್ದೇವೆ.

ನಾನು ಗುಜರಾತ್ನಿಲ್ಲಿದ್ದಾಗ ಬುಲೆಟ್ ಟ್ರೇನ್ ಬಗ್ಗೆ ಮಾತನಾಡುವಾಗ, ನಾವು ಏಕೆ ಬುಲೆಟ್ ಟ್ರೇನ್ ತರಬೇಕು ಎಂದು ಮೋದಿ ಮಾತನಾಡುತ್ತಾರೆ. ಆದರೆ, ಅದನ್ನು ಯಾವಾಗ ತರುತ್ತಾರೆ ಎಂದು ಪ್ರಶ್ನಿಸುತ್ತಿದ್ದರು. ಈಗ ಅದನ್ನು ತರಲು ಆರಂಭಿಸುವಾಗ ಏತಕ್ಕಾಗಿ ಅದನ್ನು ತರುತ್ತಿದ್ದಾರೆ ಎಂದು ಜನರು ಕೇಳುವುದನ್ನು ಕಂಡರೆ ನನಗೆ ಆಶ್ಚರ್ಯವಾಗುತ್ತದೆ. ಒಳ್ಳೆಯಯೋಜನೆಗಳುಅನುಷ್ಠಾನಕ್ಕೆತಂದಾಗಮುಕ್ತಮುನಸ್ಸಿನಿಂದಅದನ್ನುಸ್ವಾಗತಿಸುವಮನಸ್ಸುಗಳುನಮಗೆಬೇಕಾಗಿದೆ. ಅಂಥಮನಸ್ಸುಗಳುನಮಗೆಬೆಂಬಲವನ್ನೂನೀಡುತ್ತವೆ.

ಸೋದರ-ಸೋದರಿಯರೆ ಈ ಬುಲೆಟ್ ಟ್ರೇನ್ ಭಾರತಕ್ಕೆ ಜಪಾನ್ನನ ಅತ್ಯಂತ ದೊಡ್ಡ ಉಡುಗೊರೆಯಾಗಿದೆ. ಅಲ್ಲದೆ, ಈ ಸಂಪೂರ್ಣ ಯೋಜನೆಯನ್ನು ಯಾವುದೇ ವೆಚ್ಚವಿಲ್ಲದೆ ನಿರ್ಮಿಸಲಾಗುತ್ತಿದೆ. ಈ ನೆರವು ನೀಡಲು ಅಲ್ಲದೆ, ಈ ಯೋಜನೆಯನ್ನು ಬೆಂಬಲಿಸಲು ಜೊತೆಗೆ ತಂತ್ರಜ್ಞಾನ ಮತ್ತು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಕ್ಕಾಗಿ ಜಪಾನ್ಗೆತ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸೋದರ-ಸೋದರಿಯರೆ, ಈ ಉನ್ನತ ವೇಗದ ರೈಲ್ವೆ ವ್ಯವಸ್ಥೆ ಎರಡು ಸ್ಥಳಗಳ ನಡುವಿನ ದೂರವನ್ನು ಕಡಿಮೆ ಮಾಡುವುದಲ್ಲದೆ, 500 ಕಿಲೋ ಮೀಟರ್ಗಳದೂರದಲ್ಲಿರುವ ಎರಡು ನಗರಗಳ ಜನರು ಮತ್ತಷ್ಟು ಪರಸ್ಪರ ಹತ್ತಿರವಾಗುತ್ತಾರೆ ಮತ್ತು ಅವರುಅಹ್ಮದಾಬಾದ್ನಿಂರದ ಅಮ್ಚಿ ಮುಂಬಯಿಗೆ ಈ ರೈಲು ಪ್ರಯಾಣಿಸಲಿದೆ ಎಂದು ನಾನು ಹೇಳಲು ಇಚ್ಛಿಸುತ್ತೇನೆ.
ಈ ಯೋಜನೆ ಪೂರ್ಣವಾದ ನಂತರ ಮುಂಬಯಿ ಮತ್ತು ಅಹ್ಮದಾಬಾದ್ ನಡುವಿನ ದೂರವನ್ನು ಎರಡು ಮೂರು ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ವಿಮಾನದಲ್ಲಿ ಪ್ರಯಾಣ ಬೆಳೆಸುವುದನ್ನು ಹೋಲಿಸಿದರೆ ಉನ್ನತ ವೇಗದ ರೈಲಿಗಿಂತಲೂ ಅರ್ಧ ಸಮಯದಲ್ಲಿ ಮುಂಬಯಿ ತಲುಪಬಹುದಾಗಿದೆ. ಆದರೆ, ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದು ಮತ್ತು ಅಲ್ಲಿನ ಔಪಚಾರಿಕತೆಗಳನ್ನು ಪೂರೈಸುವುದು ಮತ್ತು ವಿಮಾನ ನಿಲ್ದಾಣದಿಂದ ನಿಮ್ಮ ಕಚೇರಿ ಅಥವಾ ಮನೆಗೆ ಹೋಗುವುದರ ಸಮಯವನ್ನು ಸೇರಿಸಿದರೆ ಅದು ಇನ್ನೂ ಹೆಚ್ಚಾಗುತ್ತದೆ. ಈ ಎಲ್ಲಸಮಸ್ಯೆಗಳುಬುಲೆಟ್ ಟ್ರೇನ್ನಿಂದಕಡಿಮೆಯಾಗಬಹುದುಎಂಬುದುನನ್ನಅನಿಸಿಕೆ.

ಇದು ಎಷ್ಟು ದೊಡ್ಡ ಬದಲಾವಣೆ ತರಲಿದೆ ಎಂದು ನೀವು ಕಲ್ಪಿಸಿಕೊಳ್ಳಬಹುದು. ಜನರಿಗೆ ಇದು ಎಷ್ಟು ಸಮಯವನ್ನು ಉಳಿಸಲಿದೆ. ಮುಂಬಯಿ ಮತ್ತು ಅಹ್ಮದಾಬಾದ್ ರಸ್ತೆಗಳಲ್ಲಿ ಸಾವಿರಾರು ವಾಹನಗಳ ಸಂಚಾರವನ್ನು ಇದು ಕಡಿಮೆ ಮಾಡಲಿದೆ. ಮತ್ತು ಪರಿಸರದ ಮೇಲೆ ಇದು ಸಕಾರಾತ್ಮಕ ಪರಿಣಾಮ ಉಂಟು ಮಾಡುವುದಲ್ಲದೆ, ವಿದೇಶದಿಂದ ನಾವು ಆಮದು ಮಾಡಿಕೊಳ್ಳುವ ಇಂಧನ ಉಳಿತಾಯದಿಂದ ವಿದೇಶಿ ವಿನಿಮಯ ಉಳಿಸುತ್ತದೆ.

ಈ ಯೋಜನೆಯೊಂದಿಗೆ ಮುಂಬಯಿ ಮತ್ತು ಅಹ್ಮದಾಬಾದ್ ಮಾರ್ಗದಲ್ಲಿ ನೂತನ ಆರ್ಥಿಕ ವ್ಯವಸ್ಥೆ ನಿರ್ಮಾಣವಾಗಲಿದೆ. ಈ ಹಾದಿಯಲ್ಲಿ ಎರಡು ನಗರಗಳ ನಡುವಿನ ಸಂಪೂರ್ಣ ಪ್ರದೇಶ ಒಂದೇ ಆರ್ಥಿಕ ವಲಯವಾಗಿ ಪರಿವರ್ತಿತವಾಗಲಿದೆ. ಉನ್ನತ ವೇಗದ ಮಾರ್ಗ ಕೇವಲ ಸಂಚಾರದಲ್ಲಿ ವೇಗ ಹೆಚ್ಚಿಸುವುದಲ್ಲದೆ, ಮಾರಾಟಕ್ಕೆ ಹೆಚ್ಚಿನ ಚಾಲನೆ ನೀಡಲಿದೆ. ಜೊತೆಗೆ ಬೇರೆ ಬೇರೆ ಪ್ರದೇಶಗಳ ನಡುವಿನ ಪರಸ್ಪರ ವ್ಯವಹಾರ ಕಾರ್ಯವು ಹೆಚ್ಚಾಗಲಿದೆ ಅಲ್ಲದೆ, ಇದರಲ್ಲಿ ಮಾನವ ಶಕ್ತಿಯ ವರ್ಗಾವಣೆ ಅಥವ ವಸ್ತುಗಳ ಸಾಗಣೆ ಸೇರಿದೆ. ಈ ಕೆಲಸ ಅವರಿಗೆ ಮತ್ತಷ್ಟು ಸರಳ ಮತ್ತು ಸುಲಭವಾಗಲಿದೆ. ಇದರಿಂದ ದೇಶದ ಅಭಿವೃದ್ಧಿಗೆ ದಾರಿಯಾಗಲಿದೆ ಅಲ್ಲದೇಈಗಾಗಲೇ ನಾನು ಹೇಳಿದಂತೆ ದೇಶ ನೂತನ ವೇಗ ಪಡೆದುಕೊಳ್ಳಲಿದೆ. ಯಾವುದೇ ನೂತನ ತಂತ್ರಜ್ಞಾನ ಬಂದರೂ ಅದು ಕೇವಲ ಶ್ರೀಮಂತರಿಗೆ ಮಾತ್ರ ಬರುತ್ತದೆ ಎಂಬ ನಂಬಿಕೆ ಇದೆ. ಆದರೆ, ಅನುಭವದಲ್ಲಿ ಇದು ಬೇರೆಯಾಗಿದೆ. ತಂತ್ರಜ್ಞಾನವನ್ನು ಬಡವರ ಸಬಲೀಕರಣಕ್ಕೆ ಬಳಸಿದರೆ ಆಗ ನಾವು ಬಡತನದ ವಿರುದ್ಧದ ಹೋರಾಟವನ್ನು ಬಹಳ ಕ್ಷಿಪ್ರಗತಿಯಲ್ಲಿ ಗೆಲ್ಲಬಹುದು ಮತ್ತು ಆದ್ದರಿಂದ ನಮ್ಮ ಉದ್ದೇಶ ಏನೆಂದರೆ ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿ ಅದನ್ನು ದೇಶದ ಬಡವರ ಜೀವನಕ್ಕೆ ಸಂಪರ್ಕ ಹೊಂದುವಷ್ಟು ಕೈಗೆಟುಕುವಂತೆ ಮಾಡುವುದಾಗಿದೆ.

ದೇಶದ ಸಾಮಾನ್ಯ ನಿವಾಸಿಗಳು ಬಳಸಲು ಸಾಧ್ಯವಾದಾಗ ಮಾತ್ರ ತಂತ್ರಜ್ಞಾನ ಲಾಭದಾಯಕ ಎಂದು ನಾನು ನಂಬಿದ್ದೇನೆ. ಇಂದು ರೈಲ್ವೇಸ್ನಾಲ್ಲಿ ನಾವು ನೂತನ ಮತ್ತು ಉನ್ನತವಾಗಿ ಮುಂದುವರಿದ ತಂತ್ರಜ್ಞಾನಗಳನ್ನು ತರುತ್ತಿದ್ದು ನೂತನ ತಂತ್ರಜ್ಞಾನದ ಲಾಭವನ್ನು ದೇಶದ ಸಾಮಾನ್ಯ ಮನುಷ್ಯ ಪಡೆಯುವುದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಈ ಯೋಜನೆಯ ಸಂದರ್ಭದಲ್ಲಿ ತಂತ್ರಜ್ಞಾನದ ವರ್ಗಾವಣೆಯಿಂದ ರೈಲ್ವೇಸ್ ಲಾಭ ಪಡೆಯಲಿದೆ. ಇದರಿಂದ ಈ ಪ್ರದೇಶದ ತಂತ್ರಜ್ಞರು, ಮಾರಾಟಗಾರರು ಮತ್ತು ಉತ್ಪಾದಕರು ಲಾಭ ಪಡೆಯಲಿದ್ದು ಮತ್ತೊಂದು ಕಡೆ ನಮಗಿರುವ ರೈಲು ಮಾರ್ಗದ ಜಾಲ ಆಧುನೀಕರಣಗೊಳ್ಳುವುದಲ್ಲದೆ, ಇದರಿಂದ ಲಾಭ ಪಡೆಯಲಿದೆ.

ಸ್ನೇಹಿತರೆ, ಜಪಾನ್ನಿಂ ದ ನಾವು ತಂತ್ರಜ್ಞಾನವನ್ನು ಪಡೆಯುತ್ತಿರಬಹುದು ಅದರೆ, ಬುಲೆಟ್ ಟ್ರೇನ್ಗಾುಗಿ ಬಹಳಷ್ಟು ಸಂಪನ್ಮೂಲವನ್ನು ಭಾರತದಿಂದಲೇ ಕ್ರೋಡೀಕರಿಸಲಾಗುತ್ತಿದೆ. ಆದ್ದರಿಂದ ನಮ್ಮ ಕೈಗಾರಿಕೆಗಳು ವಿಶ್ವಮಟ್ಟದ ಉಪಕರಣಗಳನ್ನು ಉತ್ಪಾದಿಸಿ ಸಮಯಕ್ಕೆ ಸರಿಯಾಗಿ ಅವುಗಳನ್ನು ಪೂರೈಸಬೇಕಿದೆ. ಶೂನ್ಯ ಲೋಪ, ಶೂನ್ಯ ಪರಿಣಾಮದ ಉತ್ಪಾದನೆಯ ಮೇಲೆ ನಾವು ಒತ್ತು ನೀಡಬೇಕಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಕೂಡ ಪುನರ್ ದೃಢೀಕರಣವಾಗಲಿದೆ. ಈ ಯೋಜನೆ ತನ್ನೊಂದಿಗೆ ಸಾವಿರಾರು ನೇರ ಮತ್ತು ಪರೋಕ್ಷೆ ಉದ್ಯೋಗಾವಕಾಶಗಳನ್ನು ತರಲಿದೆ. ಸ್ನೇಹಿತರೇ, `ನೂತನ ಭಾರತ’ಕ್ಕಾಗಿ ದೇಶದಲ್ಲಿ ಸಮಗ್ರ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಇದೇ `ನೂತನ ಭಾರತ’ದ ಕನಸಾಗಿದೆ. ಆದ್ದರಿಂದ ಭವಿಷ್ಯದ ಪೀಳಿಗೆಗಳಿಗೆ ತಕ್ಕಂತೆ ಮೂಲ ಸೌಕರ್ಯವನ್ನು ನಿರ್ಮಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಅದು ರೈಲ್ವೇಯಾಗಿರಲಿ, ಹೆದ್ದಾರಿಯಾಗಿರಲಿ, ಜಲಮಾರ್ಗವಾಗಿರಲಿ ಅಥವಾ ವೈಮಾನಿಕ ಮಾರ್ಗವಿರಲಿ ಎಲ್ಲ ಕ್ಷೇತ್ರಗಳಲ್ಲಿ ಸಮನಾದ ರೀತಿಯಲ್ಲಿ ಮೂಲಸೌಕರ್ಯದ ಮೇಲೆ ನಾವು ಒತ್ತು ನೀಡುತ್ತಿದ್ದೇವೆಮತ್ತು ಈ ಕ್ಷೇತ್ರಗಳಲ್ಲಿ ಹಿಂದೆಂದೂ ಇಲ್ಲದಂಥ ವೇಗದಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ನಾವು ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಜಿಎಸ್ಟಿಿಯ ಲಾಭಗಳು ದೇಶದ ಸಾರಿಗೆ ವ್ಯವಸ್ಥೆಯಲ್ಲೂ ಕಾಣಬಹುದಾಗಿದ್ದು, ಟ್ರಕ್ಗತಳು ದಿನಾಲು ಸಂಚರಿಸುವ ದೂರ ಶೇ. 30ರಷ್ಟು ಹೆಚ್ಚಾಗಿದೆ. ಈ ಹಿಂದೆ ಸರಕುಗಳನ್ನು ಸಾಗಿಸುತ್ತಿದ್ದ ಟ್ರಕ್ಗ ಳು ಪ್ರತಿ ದಿನ 200 ಕಿಲೋಮೀಟರ್ ಗಳಷ್ಟು ಪ್ರಯಾಣಿಸುತ್ತಿದ್ದರೆ ಜಿಎಸ್ಟಿು ಅನುಷ್ಠಾನದ ಮತ್ತು ಚೆಕ್ಪೋ ಸ್ಟ್ಗಳ ತೊಂದರೆಗಳನ್ನು ತೆಗೆದುಹಾಕಿದ ನಂತರ ಇದೇ ಟ್ರಕ್ ಈ ಹಿಂದಿನ 200 ಕಿಲೋಮೀಟರ್ಗವಳ ಬದಲಿಗೆ 250 ಕಿಲೋಮೀಟರ್ಗಳಷ್ಟು ಪ್ರಯಾಣ ನಡೆಸುತ್ತಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಶೇ. 30ರಷ್ಟು ಹೆಚ್ಚಳ ಜಿಎಸ್ಟಿಗ ಅನುಷ್ಠಾನ ಒಂದರಿಂದಲೇ ಸಾಧ್ಯವಾಗಿದ್ದು, ಜನರು ಸರಕುಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯುವ ಸಾಧ್ಯತೆ ಇದೆ. ಪರಿಸರ ಸ್ನೇಹಿ ಸಾರಿಗೆ ಮಾರ್ಗವಾಗಿ ಜಲಮಾರ್ಗಗಳನ್ನು ಅಭಿವೃದ್ಧಿ ಪಡಿಸುವತ್ತ ಸರ್ಕಾರ ಬದ್ಧತೆ ಹೊಂದಿದೆ. ಈ ನಿಟ್ಟಿನಲ್ಲಿ ಮುಂದುವರಿದು ಹೆಚ್ಚಿನ ನೀರಿನ ಹರಿವು ಹೊಂದಿರುವ 106 ನದಿಗಳನ್ನು ರಾಷ್ಟ್ರೀಯ ಜಲಮಾರ್ಗಗಳ ರೀತಿಯಲ್ಲಿ ಅಭಿವೃದ್ಧಿ ಪಡಿಸುವತ್ತ ನಾವು ಶ್ರಮಿಸುತ್ತಿದ್ದೇವೆ. ವೈಮಾನಿಕ ಕ್ಷೇತ್ರ ಕೂಡ ಭಾರತದಲ್ಲಿ ನೂತನ ಸಂಭಾವ್ಯತೆಗಳನ್ನು ತರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವಿಮಾನದಲ್ಲಿ ಸಂಚರಿಸುವ ಅಂದರೆ ಸ್ವದೇಶಿ ವಿಮಾನಗಳಲ್ಲಿ ಹಾರಾಟ ನಡೆಸುವ ಜನಗಳ ಸಂಖ್ಯೆ ಸುಮಾರು 3 ಕೋಟಿಯಷ್ಟು ಹೆಚ್ಚಾಗಿದೆ. ವೈಮಾನಿಕ ಕ್ಷೇತ್ರವನ್ನು ಬಲಪಡಿಸುವುದಕ್ಕಾಗಿ ನಾವು ರಾಷ್ಟ್ರೀಯ ವೈಮಾನಿಕ ನೀತಿಯನ್ನು ನಾವು ಸೃಷ್ಟಿಸಿದ್ದೇವೆ. ಉಡಾನ್ ಯೋಜನಾ(ಹಾರಾಟದ ಯೋಜನೆ) ಸಹಾಯದೊಂದಿಗೆ ಮಧ್ಯಮವರ್ಗದ ಜನರ ಜೀವನ ಬದಲಾಗಲಿದೆ. ಈ ಯೋಜನೆಯಡಿ ದೇಶದ 70 ಸಣ್ಣ ನಗರಗಳು ಪರಸ್ಪರ ವೈಮಾನಿಕ ಸಂಪರ್ಕ ಹೊಂದಲಿದ್ದು ಇದರಿಂದ ದೇಶದ ಸಾಮಾನ್ಯ ನಾಗರಿಕರು ಕೈಗೆಟುಕುವ ಬೆಲೆಯ ವೈಮಾನಿಕ ಹಾರಾಟದ ಸೇವೆಗಳ ಲಾಭವನ್ನು ಕೆಲವೊಮ್ಮೆ ಪಡೆಯಬಹುದಾಗಿದೆ. ಪ್ರಸ್ತುತ ಇರುವ ರೈಲ್ವೆ ವ್ಯವಸ್ಥೆ ಮತ್ತು ನೂತನ ರೈಲ್ವೆ ಜಾಲದ ನಿರ್ಮಾಣವನ್ನು ಆಧುನಿಕ ತಂತ್ರಜ್ಞಾನ ಆಧರಿಸಿ ಸುಧಾರಿಸಲು ಎರಡು ಕಡೆಗೂ ಸಮಾನವಾಗಿ ಗಮನ ನೀಡಲಾಗುತ್ತಿದೆ. ರೈಲ್ವೆ ಮಾರ್ಗಗಳನ್ನು ಸ್ಥಾಪಿಸುವುದು, ರೈಲ್ವೆ ಮಾರ್ಗಗಳ ದ್ವಿಪಥ ನಿರ್ಮಾಣ, ಅವುಗಳ ವಿದ್ಯುದ್ದೀಕರಣ ಮುಂತಾದವುಗಳ ಕಾರ್ಯವನ್ನು ಹಿಂದೆಂದಿಗಿಂತಲೂ ವೇಗವಾಗಿ ಮಾಡಲಾಗುತ್ತಿದೆ. ಪ್ರಸ್ತುತ ಸರ್ಕಾರ ರೈಲ್ವೆಯಲ್ಲಿ ನಡೆಸುತ್ತಿರುವ ಹೂಡಿಕೆ ಹಿಂದೆಂದಿಗೂ ಆಗಿರಲಿಲ್ಲ. ಹೂಡಿಕೆಯಲ್ಲಿ ಹೆಚ್ಚಳದ ಜೊತೆಗೆ ಹಲವು ದಶಕಗಳಿಂದ ಪೂರ್ಣವಾಗದೆ ಉಳಿದಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಈಗ ಒತ್ತು ನೀಡಲಾಗುತ್ತಿದೆ. ಭಾರತ ಸರ್ಕಾರ ಸತತವಾಗಿ ಭಾರತೀಯ ರೈಲ್ವೆಯ ಸಾಮಥ್ರ್ಯವನ್ನು ಹೆಚ್ಚಿಸಲು ಮತ್ತು ಸರಕು ಸಾಗಣೆಗೆ ಹೆಚ್ಚಿನ ಅವಕಾಶ ಮಾಡಿಕೊಡಲು ಕೆಲಸ ಮಾಡುತ್ತಿದೆ.

ಪಶ್ಚಿಮ ವಲಯದ ಬದ್ಧತೆಯ ಸರಕು ಸಾಗಣೆ ಮಾರ್ಗವನ್ನು ಮುಂಬಯಿಯ ಜವಹರಲಾಲ್ ಬಂದರಿನಿಂದ ಉತ್ತರ ಪ್ರದೇಶದ ದಾದ್ರಿಯವರೆಗೆ ನಿರ್ಮಿಸಲಾಗುತ್ತಿದೆ. ಇದೇ ರೀತಿಯಲ್ಲಿ ಪೂರ್ವ ವಲಯದ ಬದ್ಧತೆಯ ಸರಕು ಸಾಗಣೆ ಮಾರ್ಗವನ್ನು ಕೊಲ್ಕತ್ತಾದಿಂದ ಲೂದಿಯಾನದವರೆಗೆ ನಿರ್ಮಿಸಲಾಗುತ್ತಿದೆ. ಮುಂದಿನ ಎರಡು ಮೂರು ವರ್ಷಗಳವರೆಗೆ ಈ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಪ್ರಯತ್ನ ನಡೆಸಿದ್ದೇವೆ. ಈ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಸಂಚಾರದಟ್ಟಣೆ ಕಡಿಮೆಯಾಗಲಿದ್ದು ಪ್ರಯಾಣಿಕರ ರೈಲುಗಳ ಸಮಯ ಉಳಿತಾಯವಾಗಲಿದೆ ಅಲ್ಲದೆ, ರೈಲ್ವೆಯ ಸಾಮರ್ಥ್ಯವು ಹೆಚ್ಚಾಗಲಿದೆ. ಈ ಎಲ್ಲದರಪ್ರಯೋಜನಜನಸಾಮಾನ್ಯರಿಗೆಆಗಲಿದೆ. ಒಂದುಒಳ್ಳೆಯಯೋಜನೆಯಿಂದಲಕ್ಷಾಂತರಮಂದಿಗೆನೆರವಾಗಲಿದೆ.

ಸ್ನೇಹಿತರೆ, ಉನ್ನತ ವೇಗದ ರೈಲು ಯೋಜನೆ ಆಧುನಿಕ ರೈಲು ನಿರ್ಮಾಣ ದೃಷ್ಠಿಕೋನದ ಭಾಗವಾಗಿದೆ. ಇದರ ಶಂಕುಸ್ಥಾಪನೆಯನ್ನು ಇಂದು ನಾವು ನೆರವೇರಿಸಿದ್ದೇವೆ ಎಂಬುದರ ಬಗ್ಗೆ ನಾನು ಬಹಳ ಹರ್ಷಗೊಂಡಿದ್ದೇನೆ. ಮತ್ತು ನನ್ನ ಪ್ರೀತಿಯ ಸೋದರ-ಸೋದರಿಯರೆ, ನನ್ನ ಪ್ರೀತಿಯ ದೇಶವಾಸಿಗಳೇ ಇಂದು ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಇದು ನಮ್ಮ ದೇಶದ 70ನೇ ವರ್ಷದ ಸ್ವಾತಂತ್ರ್ಯೋತ್ಸವವಾಗಿದೆ, ನಾವು ಸಾಬರ್ಮ ತಿ ಆಶ್ರಮದ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ನನಗೊಂದು ಆಶಯವಿದೆ. 2022-23ರಲ್ಲಿ ನಮ್ಮ ಸ್ವಾತಂತ್ರ್ಯದ 75ನೇ ವರ್ಷ ಪೂರ್ಣವಾಗುವ ಹೊತ್ತಿಗೆ ಈ ರೈಲು ಯೋಜನೆಯನ್ನು ನಾವು ಮುಗಿಸುವ ಕನಸು ನನಗಿದೆ. ಮತ್ತು ಅಬೆ ಸಾನ್ ಅವರು ಈಗ ತಾನೇ ಹೇಳಿದಂತೆ ಅದರಲ್ಲಿ ಸಂಚರಿಸಿ ನಾವಿಬ್ಬರೂ ಉದ್ಘಾಟನೆ ನಡೆಸುವ ಕನಸು ನನಗಿದೆ. ಜಪಾನ್ ಮತ್ತು ಭಾರತ ಮತ್ತೊಮ್ಮೆ ಈ ನಿರ್ಧಾರ ಕೈಗೊಂಡಿದ್ದು ಅದನ್ನು ಖಂಡಿತವಾಗಿ ನೆರವೇರಿಸಲಿವೆ ಎಂಬುದರ ಖಾತ್ರಿಯನ್ನು ನಾನು ನಿಮಗೆ ನೀಡುತ್ತೇನೆ.

ಈ ಯೋಜನೆಯೊಂದಿಗೆ ಉನ್ನತ ವೇಗದ ರೈಲು ಪರಿಣತರನ್ನು ಸಿದ್ಧಗೊಳಿಸಲು ಉನ್ನತ ವೇಗದ ತರಬೇತಿ ಸಂಸ್ಥೆಯನ್ನು ಕೂಡ ಬರೋಡಾದಲ್ಲಿ ಸ್ಥಾಪಿಸಲಾಗುತ್ತಿದೆ.

ಇದು ಅತ್ಯಂತ ಪ್ರಮುಖ ಯೋಜನೆ ಎಂದು ನಾನು ನಂಬಿದ್ದೇನೆ. ರೈಲ್ವೇಸ್ಗೆ ಹಲವು ವರ್ಷಗಳಿಂದ ವಡೋದರ ಅತ್ಯಂತ ಪ್ರಮುಖ ಘಟಕವಾಗಿದೆ. ಈಗ ಜಪಾನ್ ಜೊತೆಗಿರುವುದರಿಂದ ಮತ್ತು ಉನ್ನತ ರೈಲ್ವೆಗೆ ಅಗತ್ಯವಿರುವ ಮಾನವಶಕ್ತಿ ಸಿದ್ಧಪಡಿಸಲು ನೂತನ ತಂತ್ರಜ್ಞಾನ ಕಲಿಸುವ ಅಗತ್ಯವಿದೆ. ಭಾರತದ ಯುವಜನತೆ ಅದರಲ್ಲೂ ವಿಶೇಷವಾಗಿ ಗುಜರಾತ್ನಿ ಯುವಜನತೆಗೆ ಈ ಅವಕಾಶ ಲಭಿಸಲಿದೆ. ದೇಶದಲ್ಲಿ ಮಾನವ ಸಂಪನ್ಮೂಲ ಕೌಶಲ್ಯ ಅಭಿವೃದ್ಧಿ ಇದ್ದಲ್ಲಿ ಆಗ ದೇಶದ ಶಕ್ತಿ ಹಲವು ಪಟ್ಟು ಹೆಚ್ಚುತ್ತದೆ ಅಲ್ಲದೆ, ಇದು ಕೇವಲ ಉನ್ನತ ವೇಗದ ರೈಲು ಮಾರ್ಗಕ್ಕಿಂತ ಹೆಚ್ಚಿನ ಲಾಭದಾಯಕವಾಗಿದ್ದು ಈ ಕಾರ್ಯವನ್ನು ಬರೋಡಾದಲ್ಲಿ ಜಪಾನ್ನತ ನೆರವಿನೊಂದಿಗೆ ಮಾಡಲಾಗುವುದು. ಇದು ಆಧುನಿಕ ತಂತ್ರಜ್ಞಾನದ ಕಾರ್ಯವಾಗಿದೆ ಮತ್ತು ಭಾರತದ ಯುವಜನತೆ ಇದಕ್ಕೆ ಸಿದ್ಧರಾಗಲಿದ್ದಾರೆ. ನೂತನ ಭಾರತಕ್ಕಾಗಿ ಅಂತಹ ಸಮರ್ಥ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಕಾರ್ಯವನ್ನು ಈ ಸಂಸ್ಥೆ ಕೈಗೊಳ್ಳಲಿದೆ ಎಂದು ನೀವು ಕಲ್ಪಿಸಿಕೊಳ್ಳಬಹುದು. ಉನ್ನತ ವೇಗದ ರೈಲು ಮಾರ್ಗದ ಶಂಕುಸ್ಥಾಪನೆಗಿಂತ ದೇಶದ ಯುವಜನತೆಗೆ ಉನ್ನತ ತರಬೇತಿ ಪೂರೈಸುವ ಈ ಸಂಸ್ಥೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಾನು ಹೆಚ್ಚಿನ ಮಹತ್ವ ನೀಡುತ್ತೇನೆ, ಏಕೆಂದರೆ ಈ ಸಂಸ್ಥೆ 21ನೇ ಶತಮಾನದ ಭಾರತಕ್ಕೆ ಅಡಿಪಾಯ ಹಾಕಲಿದೆ.

ಈ ಯೋಜನೆಯೊಂದಿಗೆ ಸಹಯೋಗ ಹೊಂದಿರುವ ಭಾರತ ಮತ್ತು ಜಪಾನ್ನ್ ಎಲ್ಲ ನಿಯೋಗಿಗಳು ಮತ್ತು ಉದ್ಯೋಗಿಗಳನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಅವರ ಪ್ರಯತ್ನಗಳಿಂದ ಯೋಜನೆ ಈ ಹಂತ ತಲುಪಿದೆ. ನಿಜವಾದ ಕೆಲಸ ಈಗ ಆರಂಭವಾಗುತ್ತಿದೆ. ಅವಧಿಗೆ ಮುನ್ನ ಈ ಯೋಜನೆಯನ್ನು ನಾವು ಒಂದಾಗಿ ಪೂರ್ಣಗೊಳಿಸುತ್ತೇವೆ ಎಂಬ ನಂಬಿಕೆ ನನಗಿದೆ ಮತ್ತು ನಾವದನ್ನು ಮಾಡಿಯೇ ತೀರುತ್ತೇವೆ. ಜಪಾನ್ನನ ಪ್ರಧಾನ ಮಂತ್ರಿ ಮತ್ತು ನನ್ನ ಅತ್ಯುತ್ತಮ ಸ್ನೇಹಿತ ಶಿಂಜೊ ಆಬೆ, ಆಬೆ ಸಾನ್ ಅವರಿಗೆ ಮತ್ತೊಮ್ಮೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ. ಭಾರತದ ರೈಲ್ವೇ ಜಾಲ ಎಷ್ಟು ದೊಡ್ಡದೆಂದರೆ ಜಪಾನ್ ಒಟ್ಟ್ಟು ಜನಸಂಖ್ಯೆಯಷ್ಟು ಜನರು ನಮ್ಮ ರೈಲ್ವೇ ಜಾಲದಲ್ಲಿ ಪ್ರಯಾಣಿಸುತ್ತಾರೆ. ಎಷ್ಟು ದೊಡ್ಡ ಜಾಲ, ಎಷ್ಟು ಬೃಹತ್ ಸಾಮರ್ಥ್ಯ? ನಮಗೆ ಸಾಕಷ್ಟು ಅವಕಾಶವಿದೆ, ನಮಗೆ ವೇಗವಿದೆ; ನಿಮ್ಮಲ್ಲಿ ಕೌಶಲ್ಯಗಳಿವೆ ಮತ್ತು ನಾವು ಜೊತೆಯಾಗಿ ಈ ‘ನೂತನ ಭಾರತ’ಕ್ಕೆ ವೇಗ ನೀಡಲು ಮುನ್ನಡೆಯೋಣ. ಗುಜರಾತ್ ಜನರು ನೀಡಿರುವ ಭರ್ಜರಿ ಸ್ವಾಗತ ಮತ್ತು ಗೌರವಗಳಿಗೆ ಗುಜರಾತ್ನಮ ಜನರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಮತ್ತೊಮ್ಮೆ ಸಲ್ಲಿಸುತ್ತೇನೆ ಮತ್ತು ಅವರು ಇವೆಲ್ಲವನ್ನು ಜಪಾನ್ನರ ಪ್ರಧಾನ ಮಂತ್ರಿ ಅವರು ಗೌರವಕ್ಕೆ ತಕ್ಕಂತೆ ನೆರವೇರಿಸಿದ್ದಾರೆ. ನಾನು ಗುಜರಾತ್ ಮತ್ತು ಮಹಾರಾಷ್ಟ್ರಗಳ ಸರ್ಕಾರಗಳೆರಡನ್ನೂ ಅಭಿನಂದಿಸುತ್ತೇನೆ. ಈ ಎರಡೂ ಸರ್ಕಾರಗಳು ಜೊತೆಯಾಗಿ ಅಲ್ಲದೇ ಭಾರತ ಸರ್ಕಾರ ಮತ್ತು ಜಪಾನ್ನೇ ಸರ್ಕಾರಗಳೊಂದಿಗೆ ಶ್ರಮಿಸಿ ಮಾಡಿ ಎಲ್ಲ ಕಾರ್ಯವನ್ನು ಒಂದರ ನಂತರ ಒಂದರಂತೆ, ಉನ್ನತ ವೇಗದಲ್ಲಿ ನಿರ್ವಹಿಸಿದ್ದಾರೆ ಅಲ್ಲದೇ ಸಂಪೂರ್ಣ ವ್ಯವಸ್ಥೆಯನ್ನು ಮುನ್ನಡೆಸಿದ್ದಾರೆ. ಈ ನಿಟ್ಟಿನಲ್ಲಿಎಲ್ಲರೂ ಈ ಯೋಜನೆಯಲ್ಲಿಭಾಗಿಯಾಗೋಣ.ಆದ್ದರಿಂದ ಗುಜರಾತ್ನಜ ಮುಖ್ಯ ಮಂತ್ರಿಯವರಿಗೂ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಅವರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಎಲ್ಲರಿಗೂಬಹಳಷ್ಟು ವಂದನೆಗಳು.