Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರತೀಯ ಪೆಟ್ರೋಲಿಯಂ ಮತ್ತು ಇಂಧನ ಸಂಸ್ಥೆ (ಐಐಪಿಇ) ಸ್ಥಾಪನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಂಸತ್ತಿನ ಶಾಸನದ ಮೂಲಕ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರತೀಯ ಪೆಟ್ರೋಲಿಯಂ ಮತ್ತು ಇಂಧನ ಸಂಸ್ಥೆ (ಐಐಪಿಇ)ಯನ್ನು ‘ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿ’ ಸ್ಥಾಪನೆ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಸಂಸ್ಥೆಯು ಆಡಳಿತ ಸ್ವರೂಪ ಮತ್ತು ಐಐಟಿಗಳಂತೆಯೇ ಪದವಿಯನ್ನು ಪ್ರದಾನ ಮಾಡುವ ಕಾನೂನಾತ್ಮಕ ಹಕ್ಕನ್ನೂ ಹೊಂದಿರುತ್ತದೆ. ಪೆಟ್ರೋಲಿಯಂ ಮತ್ತು ಇಂಧನ ಅಧ್ಯಯನಕ್ಕಾಗಿ “ಪ್ರಾವಿಣ್ಯತೆಯ ಕೇಂದ್ರ”ದ ಸ್ಥಾನಮಾನವನ್ನು ಈ ಸಂಸ್ಥೆಗೆ ನೀಡಲು ಅಗತ್ಯವಾದ ಪ್ರತ್ಯೇಕ ಕಾಯಿದೆಯನ್ನೂ ತರಲಾಗುತ್ತದೆ.

ಐಐಪಿಇ ಸ್ಥಾಪನೆಗಾಗಿ 655.46ಕೋಟಿ ರೂಪಾಯಿಗಳ ಬಂಡವಾಳ ವೆಚ್ಚಕ್ಕೆ ಮತ್ತು 200 ಕೋಟೋ ರೂಪಾಯಿಗಳನ್ನು ದತ್ತಿ ನಿಧಿಯ ದೇಣಿಗೆಯಾಗಿ (ತೈಲ ಕಂಪನಿಗಳಿಂದ ದತ್ತಿ ನಿಧಿಗಾಗಿ ನೀಡಲಾಗುವ 200 ಕೋಟಿ ರೂಪಾಯಿಗಳ ಕೊಡೆಗೆಯ ಹೊರತಾಗಿ) ನೀಡಲೂ ಸಂಪುಟವು ತನ್ನ ಅನುಮೋದನೆ ನೀಡಿದೆ.

ಆಂಧ್ರಪ್ರದೇಶ ಪುನಾರಚನೆ ಕಾಯಿದೆ 2014ರ 13ನೇ ಪರಿಚ್ಛೇದದ ಬದ್ಧತೆಯಂತೆ ಈ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪೆಟ್ರೋಲಿಯಂ ವಲಯಕ್ಕೆ ಗುಣಾತ್ಮಕ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಶಕ್ತಿಯನ್ನು ಒದಗಿಸುವ ಮತ್ತು ವಲಯದ ಬೆಳವಣಿಗೆಗೆ ಅಗತ್ಯವಾದ ಸಂಶೋಧನಾ ಚಟುವಟಿಕೆ ಉತ್ತೇಜಿಸುವ ಉದ್ದೇಶವನ್ನೂ ಇದು ಹೊಂದಿದೆ. ಐಐಪಿಇಯ ಸಂಶೋಧನಾ ಮತ್ತು ಶೈಕ್ಷಣಿಕ ಚಟುವಟಿಕೆಗಳು ಸಂಸ್ಥೆಯು ವಲಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಅಂದರೆ ವಿಶಾಖಪಟ್ಟಣಂ ಶುದ್ಧೀಕರಣ ಘಟಕದ ಕೆಜಿ – ಕಣಿವೆ ಮತ್ತು ಕಾಕಿನಾಡದ ಯೋಜಿತ ಪೆಟ್ರೋರಾಸಾಯನಿಕ ಸಮುಚ್ಛಯದಿಂದ ಸಾಮಿಪ್ಯತೆಯಿಂದ ಬಲ ಪಡೆಯುತ್ತದೆ.

ಹಿನ್ನೆಲೆ:

ಆಂಧ್ರಪ್ರದೇಶ ಸರ್ಕಾರವು ಐಐಪಿಇ ಸ್ಥಾಪನೆಗಾಗಿ ವಿಶಾಖಪಟ್ಟಣ ಜಿಲ್ಲೆಯ ಸಬ್ಬಾವರಂ ಮಂಡಳದಲ್ಲಿ 200 ಎಕರೆ ಭೂಮಿಯನ್ನು ಉಚಿತವಾಗಿ ನೀಡಿದೆ. ಐಐಪಿಇ ಎಪಿ ಸೊಸೈಟಿ ನೋಂದಣಿ ಕಾಯಿದೆ 2001ರ ಅಡಿಯಲ್ಲಿ ಸೊಸೈಟಿಯಾಗಿ 18/04/2016ರಂದು ನೋಂದಣಿಯಾಗಿದೆ. 2016-17ನೇ ಶೈಕ್ಷಣಿಕ ಸಾಲಿಗಾಗಿ ಎರಡು ಪದವಿ ಕಾರ್ಯಕ್ರಮಗಳಿಗಾಗಿ ಅಂದರೆ ಪೆಟ್ರೋಲಿಯಂ ಎಂಜನಿಯರಿಂಗ್ ಮತ್ತು ಕೆಮಿಕಲ್ ಎಂಜನಿಯರಿಂಗ್ (ಪ್ರತಿಯೊಂದು ಕೋರ್ಸ್ ಗೂ ತಲಾ 50 ವಿದ್ಯಾರ್ಥಿಗಳಂತೆ) ಕೋರ್ಸ್ ಆರಂಭಕ್ಕಾಗಿ ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಐಐಪಿಇಯ ತಾತ್ಕಾಲಿಕ ಸಮುಚ್ಚಯವನ್ನು ಸ್ಥಾಪಿಸಲಾಗಿದೆ. ಐಐಟಿ ಖರಗ್ಪುರ್ ಈ ಸಂಸ್ಥೆಯ ಬೋಧನೆಯ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದೆ.

***

AKT/VBA/SH