Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆದರ್ಶ ಹಾಗೂ ನಿಜವಾದ ಶ್ರೇಷ್ಠ ವ್ಯಕ್ತಿಯ ಗುಣಗಳನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ವೈಯಕ್ತಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಆದರ್ಶ ಮತ್ತು ನಿಜವಾದ ಶ್ರೇಷ್ಠ ವ್ಯಕ್ತಿಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ;

“परकार्येषु युक्तात्मा स्वकार्ये क्षिप्रसाधनम्।

सुहृत्कार्येषु निर्वृत्ती राजकार्येषु विक्रमः ।। “

‘ಇತರರ ಕೆಲಸವನ್ನು ಪೂರ್ಣ ಸಮರ್ಪಣಾಭಾವದಿಂದ ಮಾಡುವ, ತನ್ನ ವೈಯಕ್ತಿಕ ಕರ್ತವ್ಯಗಳನ್ನು ತ್ವರಿತವಾಗಿ ಹಾಗೂ ಸಮರ್ಥವಾಗಿ ಪೂರ್ಣಗೊಳಿಸುವ, ಸ್ನೇಹಿತರ ಕೆಲಸವನ್ನು ನಿಸ್ವಾರ್ಥವಾಗಿ ನಿರ್ವಹಿಸುವ ಮತ್ತು ರಾಷ್ಟ್ರದ ಕರ್ತವ್ಯಗಳನ್ನು ನೆರವೇರಿಸುವಲ್ಲಿ ಪರಾಕ್ರಮ ಹಾಗೂ ಧೈರ್ಯ ಪ್ರದರ್ಶಿಸುವ ವ್ಯಕ್ತಿಯೇ ನಿಜವಾದ ಅರ್ಥದಲ್ಲಿ ಶ್ರೇಷ್ಠ ವ್ಯಕ್ತಿಯಾಗಿರುತ್ತಾನೆ.

 

*****