Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಯುರ್ವೇದ ದಿನದಂದು ಶುಭಾಶಯ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಯುರ್ವೇದ ದಿನದ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಆತ್ಮೀಯ ಶುಭಾಶಯಗಳನ್ನು ಕೋರಿದ್ದಾರೆ.

ಸಾಂಪ್ರದಾಯಿಕ ಔಷಧಗಳ ಸಾರ್ವಕಾಲಿಕ ವಿವೇಕವನ್ನು ಪ್ರಧಾನವಾಗಿ ಪ್ರಸ್ತಾಪಿಸುತ್ತಾ, ಆಯುರ್ವೇದವು ಕೇವಲ ಚಿಕಿತ್ಸಾ ಪದ್ಧತಿಯಲ್ಲ, ಬದಲಿಗೆ ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಗೆ ಪರಿಣಾಮಕಾರಿ ವಿಧಾನವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಆದರೆ ಈ ಶ್ರೀಮಂತ ಪರಂಪರೆಯನ್ನು ಪೋಷಿಸುವ ಸಂಕಲ್ಪವನ್ನು ಎಲ್ಲರೂ ಬಲಪಡಿಸಬೇಕೆಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರು ಆಯುರ್ವೇದದ ಸಮಗ್ರ ಸ್ವರೂಪವನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ  ಹೀಗೆ ಹೇಳಿದ್ದಾರೆ;

“ಆಯುರ್ವೇದ ದಿನದಂದು ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು! ಆಯುರ್ವೇದವು ಕೇವಲ ಚಿಕಿತ್ಸಾ ವಿಧಾನವಲ್ಲ, ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಗೆ ಪ್ರಬಲ ವಿಧಾನವಾಗಿದೆ. ಈ ಶ್ರೀಮಂತ ಪರಂಪರೆಯನ್ನು ಅಳವಡಿಸಿಕೊಳ್ಳುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ.

ಹಿತಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಹಿತಂ.

ಮಾನಂ ಚ ತಚ್ಚ ಯತ್ರೋಕ್ತಮಾಯುರ್ವೇದಃ ಸ ಉಚ್ಯತೇ.”

“आयुर्वेद दिवस की सभी देशवासियों को हार्दिक शुभकामनाएं! आयुर्वेद केवल उपचार की पद्धति नहीं, बल्कि स्वस्थ और संतुलित जीवनशैली का एक सशक्त माध्यम है। आइए, अपनी इस समृद्ध विरासत को अपनाने का संकल्प और मजबूत करें।

हिताहितं सुखं दुःखमायुस्तस्य हिताहितम्।

मानं च तच्च यत्रोक्तमायुर्वेदः स उच्यते।।”

ಯಾವ ರೀತಿಯ ಜೀವನಶೈಲಿ ಮನುಷ್ಯರಿಗೆ ಪ್ರಯೋಜನಕಾರಿ ಅಥವಾ ಹಾನಿಕಾರಕ, ಸಂತೋಷ ಅಥವಾ ಅತೃಪ್ತಿಕರ ಜೀವನ ಯಾವುದು, ಆರೋಗ್ಯಕರ ಜೀವನವನ್ನು ರೋಗಗಳಿಂದ ಬಾಧಿತ ಜೀವನದಿಂದ ಯಾವುದು ಪ್ರತ್ಯೇಕಿಸುತ್ತದೆ ಮತ್ತು ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಯಾವುದನ್ನು ಅಳವಡಿಸಿಕೊಳ್ಳಬೇಕು ಅಥವಾ ತಪ್ಪಿಸಬೇಕು ಎಂಬುದನ್ನು ವಿವರಿಸುವ ವಿಜ್ಞಾನ ಮತ್ತು ಜೀವಿತಾವಧಿಯ ಸ್ವರೂಪ ಮತ್ತು ಅಳತೆಯನ್ನು ವಿಸ್ತಾರವಾಗಿ ಚರ್ಚಿಸುವುದನ್ನೇ  ನಾವು ಆಯುರ್ವೇದ ಎಂದು ಕರೆಯುತ್ತೇವೆ.

 

*****