ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರ ಕುರಿತ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಏಪ್ರಿಲ್ 9ರಂದು ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದ ಈ ಕೆಳಕಂಡ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ:-
i)ಔಷಧ ಮತ್ತು ಔಷಧೀಯ ಉತ್ಪನ್ನಗಳು;
ii)ವೈದ್ಯಕೀಯ ಬಳಕೆ ಉತ್ಪನ್ನಗಳು;
iii) ವೈದ್ಯಕೀಯ ಸಂಶೋಧನೆ;
iv)ವೈದ್ಯಕೀಯ ಸಲಕರಣೆ;
v)ಸಾರ್ವಜನಿಕ ಆರೋಗ್ಯ;
vi)ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ನಿಗಾ;
vii) ಆರೋಗ್ಯ ಪ್ರವಾಸೋದ್ಯಮ; ಮತ್ತು
viii) ಪರಸ್ಪರರು ಸಮ್ಮತಿಸುವ ಇತರೆ ಯಾವುದೇ ಕ್ಷೇತ್ರ.
ಸಹಕಾರದ ವಿವರಗಳನ್ನು ಮತ್ತಷ್ಟು ವಿವರಿಸಲು ಮತ್ತು ತಿಳಿವಳಿಕೆ ಒಪ್ಪಂದದ ಅನುಷ್ಠಾನದ ಕಣ್ಗಾವಲಿಗಾಗಿ ಕಾರ್ಯ ಗುಂಪಿನ ರಚನೆಯನ್ನೂ ಮಾಡಲಾಗುವುದು.
*****
AKT/VBA/SH