ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯವಿಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ನವೆಂಬರ್ 29ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಈ ಕೆಳಗಿನ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ:-
1. ವೈದ್ಯರು, ವೈದ್ಯಾಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಹಾಗೂ ತಜ್ಞರ ವಿನಿಮಯ ಮತ್ತು ತರಬೇತಿ;
2. ಆರೋಗ್ಯ ಸೇವೆಗಳು, ಆರೋಗ್ಯ ರಕ್ಷಣೆಯ ಸೌಲಭ್ಯ ಸ್ಥಾಪನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೆರವು;
3. ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲದ ಅಲ್ಪಾವಧಿ ತರಬೇತಿ;
4. ಔಷಧ ಸಂಸ್ಥೆಗಳ, ವೈದ್ಯಕೀಯ ಸಲಕರಣೆಗಳ ಮತ್ತು ಪ್ರಸಾದನಗಳ ನಿಯಂತ್ರಣ ಮತ್ತು ಅದರ ಮೇಲಿನ ಮಾಹಿತಿಯ ವಿನಿಮಯ;
5. ಔಷಧ ವ್ಯಾಪಾರ ಅಭಿವೃದ್ಧಿಯ ಅವಕಾಶಗಳ ಉತ್ತೇಜನ;
6. ಜೆನರಿಕ್ ಮತ್ತು ಅಗತ್ಯ ಔಷಧಗಳ ದಾಸ್ತಾನು ಮತ್ತು ಔಷಧ ಪೂರೈಕೆಯ ಶೋಧದಲ್ಲಿ ಸಹಕಾರ;
7. ಆರೋಗ್ಯ ಸಾಧನಗಳು ಮತ್ತು ಔಷಧ ಉತ್ಪನ್ನಗಳ ದಾಸ್ತಾನು;
8. ಪರಸ್ಪರ ಆಸಕ್ತಿಯ ಎನ್.ಸಿ.ಡಿ.ಗಳ, ಅಂದರೆ ಎಸ್.ಡಿ.ಜಿ3 ಮತ್ತು ಸಂಬಂಧಿತ ಅಂಶಗಳ ಮೇಲೆ ಮಹತ್ವ ಹೊಂದಿರುವ ನ್ಯೂರೋಕಾರ್ಡಿಯೋವಾಸ್ಕ್ಯೂಲರ್ ಕಾಯಿಲೆಗಳು, ಕ್ಯಾನ್ಸರ್, ಸಿಓಪಿಡಿಗಳು, ಮಾನಸಿಕ ಆರೋಗ್ಯ ಮತ್ತು ಬುದ್ಧಿಮಾಂದ್ಯತೆ ತಡೆಗೆ ಸಹಯೋಗ;
9. ಸಾಂಕ್ರಾಮಿಕ ರೋಗಗಳು ಮತ್ತು ಗಾಳಿಯಿಂದ ಹರಡುವ ರೋಗಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಕ್ಷೇತ್ರದಲ್ಲಿನ ಸಹಯೋಗ;
10. ಸಿಡಿಜಿ2 ಮತ್ತು ಪೌಷ್ಟಿಕತೆ ಸೇವೆಗಳ ಸಂಘಟನೆಯ ನಿಟ್ಟಿನಲ್ಲಿ ಅಪೌಷ್ಟಿಕತೆ ಸೇರಿದಂತೆ (ಹೆಚ್ಚಿನ ಪೌಷ್ಟಿಕತೆ ಮತ್ತು ಕುಪೋಷಣೆ) ಸ್ವೀಕರಿಸುವ ಆಹಾರದ ಪೌಷ್ಟಿಕತೆಯ ಅಂಶಗಳು;
11. ಉತ್ಪಾದನೆ, ಪರಿವರ್ತನೆ, ವಿತರಣೆ ಮತ್ತು ಆಹಾರ ಸರಬರಾಜಿನ ಸುರಕ್ಷತೆ;
12. ಆಹಾರ ಕೈಗಾರಿಕೆ ನಿರ್ವಾಹಕರ ತರಭೇತಿ ಮತ್ತು ಸಂಶೋಧನೆ;
13. ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ ಮತ್ತು ಆರೋಗ್ಯಪೂರ್ಣ ಆಹಾರ ಸೇವನೆ ಹವ್ಯಾಸಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂವಹನ; ಹಾಗೂ
14. ಪರಸ್ಪರರು ಒಪ್ಪಿಗೆಯಿಂದ ಸಮ್ಮತಿಸುವ ಯಾವುದೇ ಇತರ ಕ್ಷೇತ್ರ.
ಸಹಕಾರದ ವಿವರಗಳನ್ನು ಹೆಚ್ಚು ವಿಸ್ತೃತಗೊಳಿಸಲು ಮತ್ತು ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಜಾರಿಯ ಉಸ್ತುವಾರಿಗೆ ಜಂಟಿ ಕಾರ್ಯ ಪಡೆ (ಜೆಡಬ್ಲ್ಯುಜಿ) ಸ್ಥಾಪಿಸಲಾಗುತ್ತದೆ.
****