ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಕ್ರೊಯೇಷಿಯಾ ನಡುವಿನ ಆರ್ಥಿಕ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ದ್ವಿಪಕ್ಷೀಯ ವಾಣಿಜ್ಯ ಮತ್ತು ಆರ್ಥಿಕ ಸಹಕಾರ ಅಭಿವೃದ್ಧಿ ಹಾಗೂ ಉತ್ತೇಜನದ ಗುರಿಯೊಂದಿಗೆ 1994ರ ಸೆಪ್ಟೆಂಬರ್ ನಲ್ಲಿ ಭಾರತ ಮತ್ತು ಕ್ರೊಯೇಷಿಯಾ ನಡುವೆ ಈ ಮುನ್ನ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು. ಭಾರತ ಮತ್ತು ಕ್ರೊಯೇಷಿಯಾ ನಡುವೆ ಹೊಸ ಒಪ್ಪಂದಕ್ಕೆ ಅಂಕಿತ ಹಾಕುವುದು 2009ರ ನವೆಂಬರನಲ್ಲಿ ಕೊನೆಗೊಂಡ ಹಾಲಿ ಒಪ್ಪಂದದ ಮುಂದುವರಿಕೆ ಆಗಲಿದೆ.
ಕ್ರೊಯೇಷಿಯಾದೊಂದಿಗೆ ಭಾರತದ ದ್ವಿಪಕ್ಷೀಯ ವಾಣಿಜ್ಯ 2012-13, 2013-14 ಮತ್ತು 2014-15ರಲ್ಲಿ ಅನುಕ್ರಮವಾಗಿ 152.01 ದಶಲಕ್ಷ ಅಮೆರಿಕನ್ ಡಾಲರ್, 148.86 ದಶಲಕ್ಷ ಅಮೆರಿಕನ್ ಡಾಲರ್, ಮತ್ತು 205.04 ದಶಲಕ್ಷ ಅಮೆರಿಕನ್ ಡಾಲರ್ ಆಗಿತ್ತು. ಕಳೆದ ಮೂರು ವರ್ಷಗಳಲ್ಲಿ ಸರಾಸರಿ ದ್ವಿಪಕ್ಷೀಯ ವ್ಯಾಪಾರದ ವೃದ್ಧಿ ಶೇ.17.44 ಆಗಿದೆ.