ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆಹಾರ ಸಂಸ್ಕರಣಾ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಒಡಂಬಡಿಕೆಗೆ (ಎಂ.ಒ.ಸಿ.) ತನ್ನ ಅನುಮೋದನೆ ನೀಡಿತು.
ಪ್ರಯೋಜನಗಳು:
ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಹಕಾರ ಉಭಯ ದೇಶಗಳ ಆಹಾರ ಸಂಸ್ಕರಣಾ ವಲಯಕ್ಕೆ ಲಾಭದಾಯಕವಾಗಲಿದೆ. ಇದು ಎರಡೂ ದೇಶಗಳಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಉತ್ತಮ ವಿಧಾನಗಳ ಬಗ್ಗೆ ತಿಳುವಳಿಕೆಯನ್ನು ಉತ್ತೇಜಿಸಲಿದೆ ಮತ್ತು ಅದರಿಂದ ಆಹಾರ ಸಂಸ್ಕರಣಾ ವಲಯದಲ್ಲಿ ಸುಧಾರಣೆಗಳಿಗೆ ಸಹಾಯವಾಗಲಿದೆ ಹಾಗು ಮಾರುಕಟ್ಟೆ ಲಭ್ಯತೆಯಲ್ಲೂ ಸುಧಾರಣೆಯಾಗಲಿದೆ. ಇದು ಸಮಾನತೆ ಹಾಗು ಒಳಗೊಳ್ಳುವಿಕೆಗೂ ಸಹಕಾರಿಯಾಗಲಿದೆ. ನವೀನ ತಂತ್ರಜ್ಞಾನ ಮತ್ತು ಸಂಸ್ಕರಣಾ ವಿಧಾನಗಳ ಪ್ರವೇಶದಿಂದ ದೇಶದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದ ಸುಧಾರಣೆಗೂ ಈ ಎಂ.ಒ.ಸಿ. ನೆರವಾಗಲಿದೆ. ಉತ್ತಮ ಮಾರುಕಟ್ತೆ, ಉತ್ತಮ ವಿಧಾನ ಮತ್ತು ಪದ್ದತಿಗಳ ಲಭ್ಯತೆಯಿಂದಾಗಿ ದೇಶದಲ್ಲಿ ಆಹಾರ ಸಂಸ್ಕರಣೆ ಹೆಚ್ಚಲಿದೆ.
***