Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇನ್ ಸ್ಟ್ರುಮೆಂಟೇಷನ್ ಲಿಮಿಟೆಡ್ ಕೋಟಾ ಘಟಕ ಮುಚ್ಚಲು ಮತ್ತು ಪಾಲಕ್ಕಾಡ್ ಘಟಕವನ್ನು ಕೇರಳ ಸರ್ಕಾರಕ್ಕೆ ಹಸ್ತಾಂತರಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇನ್ ಸ್ಟ್ರುಮೆಂಟೇಷನ್ ಲಿಮಿಟೆಡ್ ನ ಕೋಟಾ ಘಟಕವನ್ನು ಮುಚ್ಚಲು ಮತ್ತು ಪಾಲಕ್ಕಾಡ್ ಇನ್ ಸ್ಟ್ರುಮೆಂಟೇಷನ್ ಲಿಮಿಟೆಡ್ ಘಟಕವನ್ನು ಕೇರಳ ಸರ್ಕಾರಕ್ಕೆ ಹಸ್ತಾಂತರಿಸಲು ತನ್ನ ಅನುಮೋದನೆ ನೀಡಿದೆ.

ಇದಕ್ಕೆ ಸಂಬಂಧಿಸಿದಂತೆ ಸಂಪುಟವು, ಒಟ್ಟು ಅಂದಾಜು 438 ಕೋಟಿ ರೂಪಾಯಿ ಆಗುವ ಬಾಕಿ ವೇತನ, ಶಾಸನಾತ್ಮಕ ಬಾಕಿ ಇತ್ಯಾದಿ ಸೇರಿದಂತೆ ಇನ್ ಸ್ಟ್ರುಮೆಂಟೇಷನ್ ಲಿಮಿಟೆಡ್ ನ ಕೋಟ ಘಟಕದ ಉದ್ಯೋಗಿಗಳಿಗೆ 2007ರ ರಾಷ್ಟ್ರೀಯ ವೇತನ ಶ್ರೇಣಿಯಂತೆ ಆಕರ್ಷಕ ವಿಆರ್.ಎಸ್/ ವಿ.ಎಸ್.ಎಸ್. ಪ್ಯಾಕೇಜ್ ನೀಡಿಕೆಗೆ ತನ್ನ ಅನುಮೋದನೆ ನೀಡಿದೆ.