Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಶಾನ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ


 ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕೆಳಗಿನ ಎಂ/ಓ ಡಿ.ಒ.ಎನ್.ಇ.ಆರ್ ಯೋಜನೆಗಳನ್ನು 2020ರ ಮಾರ್ಚ್ ವರೆಗೆ ಮುಂದುವರಿಸಲು ಅನುಮೋದನೆ ನೀಡಿತು.;

  • ಎನ್.ಇ.ಸಿ. ಅಡಿಯಲ್ಲಿ ಯೋಜನೆಗಳು- ಹಾಲಿ ಇರುವ ಮತ್ತು ಪ್ರಗತಿಯಲ್ಲಿರುವ (90:10 ಆಧಾರದ) ಹಣಕಾಸು ಹಂಚಿಕೆ ಆಧಾರದ ಯೋಜನೆಗಳು ಮತ್ತು ಶೇಖಡಾ 100  ಕೇಂದ್ರ ಹಣಕಾಸು ನೆರವಿನ ಹೊಸ ಯೋಜನೆಗಳು;
  • ಎನ್.ಇ.ಸಿ. ಹೂಡಿಕೆಯ ಇತರ ಯೋಜನೆಗಳು-ಆದಾಯ ಮತ್ತು ಬಂಡವಾಳ-ಶೇಖಡಾ 100 ರಷ್ಟು ಕೇಂದ್ರ ಹೂಡಿಕೆ ಆಧಾರದಲ್ಲಿ, ಈಗಿರುವ ಮಾದರಿಯಲ್ಲೇ ಮುಂದುವರಿಕೆ.
  • ಈಶಾನ್ಯ ರಸ್ತೆ ವಲಯ ಅಭಿವೃದ್ಧಿ ಯೋಜನೆ (ಎನ್.ಇ.ಆರ್.ಎಸ್.ಡಿ.ಎಸ್.)ಗೆ ಕೇಂದ್ರದಿಂದ ಶೇಖಡಾ 100 ಹಣಕಾಸು ನೆರವು ವಿಸ್ತರಣೆ.
  • ಲುಪ್ತವಾಗದ ಕೇಂದ್ರೀಯ ಸಂಪನ್ಮೂಲಗಳನ್ನು (ಎನ್.ಎಲ್.ಸಿ.ಪಿ.ಆರ್.-ಸಿ) ಅನುಷ್ಟಾನಕ್ಕಾಗಿ ಎನ್.ಇ.ಸಿ.ಗೆ ವರ್ಗಾವಣೆ.
  • ವಿವಿಧ ಮಂತ್ರಾಲಯಗಳು/ಇಲಾಖೆಗಳ ಪ್ರಯತ್ನಗಳನ್ನು ಜತೆಗೂಡಿಸುವ ಮೂಲಕ ಸಂಪನ್ಮೂಲಗಳ ಗರಿಷ್ಟ ಸದುಪಯೋಗ ಖಾತ್ರಿಪಡಿಸಲು ಪ್ರಸ್ತಾವನೆ.

ಎನ್.ಇ.ಸಿ., ಎನ್.ಎಲ್.ಸಿ.[ಪಿ.ಆರ್. (ಕೇಂದ್ರೀಯ) ಮತ್ತು ಎನ್.ಇ.ಆರ್.ಎಸ್.ಡಿ.ಎಸ್.  ಅಡಿಯಲ್ಲಿ ಪ್ರಗತಿಯಲ್ಲಿರುವ ಯೋಜನೆಗಳು ಈಶಾನ್ಯ ವಲಯದ ಜನತೆಗೆ ಸಾಮಾಜಿಕ –ಆರ್ಥಿಕ ಪ್ರಯೋಜನಗಳನ್ನು ಒದಗಿಸಲಿದ್ದು, ಅವರ ಜೀವನೋಪಾಯ ಗಳಿಕೆ ಸಾಮರ್ಥ್ಯವನ್ನು ಹೆಚ್ಚಿಸಲಿವೆ.

  ಪ್ರಸ್ತುತ, ಪ್ರಮುಖ ಯೋಜನೆಗಳಲ್ಲಿ ಬಹುಪಾಲು ಯೋಜನೆಗಳು  (840 ರಲ್ಲಿ 599) ಮಂಜೂರಾತಿಗೊಂಡ ವೆಚ್ಚದಲ್ಲಿ 72.12 % (ಒಟ್ಟು 7453.02 ಕೋ.ರೂ.ಗಳಲ್ಲಿ 5375.12 ಕೋ.ರೂ.) ಮತ್ತು 66 % ಸಾಲ ಬಾಧ್ಯತೆಯನ್ನು  (2299.72 ಕೋ.ರೂ.ಗಳಲ್ಲಿ 1518.64 ಕೋ.ರೂ. ) ಪ್ರಗತಿಯಲ್ಲಿರುವ ಎಲ್ಲಾ ಯೋಜನೆಗಳಿಗೆ ಸಂಬಂಧಿಸಿ ’ಎನ್.ಇ.ಸಿ. ಯೋಜನೆಗಳು-ವಿಶೇಷ ಅಭಿವೃದ್ದಿ ಯೋಜನೆ’ ಅಡಿಯಲ್ಲಿ ಹಣಕಾಸು ಒದಗಿಸಲಾಗುತ್ತಿದೆ. ಕೆಲವು ಆಯ್ದ ಯೋಜನೆಗಳಿಗೆ ಸಂಬಂಧಿಸಿ ಹಣಕಾಸನ್ನು ಕೇಂದ್ರ ಹಾಗು ರಾಜ್ಯಗಳು 90:10  ಆಧಾರದಲ್ಲಿ ಹಂಚಿಕೊಂಡು ಆಯಾ ರಾಜ್ಯಸರಕಾರಗಳು ಯೋಜನೆಗಳನ್ನು ಅನುಷ್ಟಾನಿಸುತ್ತಿವೆ. ಇದಲ್ಲದೆ ಆದಾಯ ಮತ್ತು ಬಂಡವಾಳವಾಗಿ ಶೇಖಡಾ 100 ಕೇಂದ್ರ ಹಣಕಾಸು ಒದಗಿಸಿದ್ದು ಇವುಗಳನ್ನು ರಾಜ್ಯ ಮತ್ತು ಕೇಂದ್ರದ ಏಜೆನ್ಸಿಗಳು ಅನುಷ್ಟಾನಿಸುತ್ತಿವೆ.

ಎನ್.ಇ.ಸಿ.-ವಿಶೇಷ ಅಭಿವೃದ್ದಿ ಯೋಜನೆಯನ್ನು ಕೇಂದ್ರ ವಲಯದ ಯೋಜನೆಯಾಗಿ ಪರಿವರ್ತಿಸಿ ಈ ಮೊದಲಿನ 90:10 ಆಧಾರದ ಹಣಕಾಸು ವ್ಯವಸ್ಥೆಗೆ ಬದಲಾಗಿ ಶೇಖಡಾ 100 ಕೇಂದ್ರ ನೆರವು ಒದಗಿಸಲಾಗುತ್ತದೆ. ಉಳಿದಂತೆ ಕೇಂದ್ರೀಯ ಹಣಕಾಸು ನೆರವಿನ ಯೋಜನೆಗಳಿಗೆ ಈ ಮೊದಲಿನಂತೆ  100 % ಕೇಂದ್ರ ನೆರವು ಮುಂದುವರಿಯುತ್ತದೆ.

ಇದಲ್ಲದೆ , ಎನ್.ಇ.ಸಿ. ಯು “ಈಶಾನ್ಯ ರಸ್ತೆ ವಲಯ ಅಭಿವೃದ್ದಿ ಯೋಜನೆ-ಕಾರ್ಯಕ್ರಮ ಘಟಕ” ಯೋಜನೆಯಡಿ ಪ್ರಮುಖ ಮತ್ತು ವ್ಯೂಹಾತ್ಮಕ ಮಹತ್ವದ ಅಂತರ ರಾಜ್ಯ ರಸ್ತೆಗಳ ಉನ್ನತೀಕರಣವನ್ನು ನಡೆಸುತ್ತಿದೆ. ಡಿ.ಒ.ಎನ್.ಇ.ಆರ್. ನಿಂದ ಎನ್.ಇ.ಸಿ.ಗೆ  ಅನುಷ್ಟಾನಕ್ಕಾಗಿ ವರ್ಗಾಯಿಸಲಾದ ಯೋಜನೆ ಶೇಖಡಾ 100 ಕೇಂದ್ರ ಧನಸಹಾಯದ ಯೋಜನೆಯಾಗಿದೆ. ಈ ಯೋಜನೆಯಡಿ 1000 ಕೋ.ರೂ.ಗಳನ್ನು ಒದಗಿಸಲಾಗಿದೆ.

’ಲುಪ್ತವಾಗದ ಕೇಂದ್ರ ಸಂಪನ್ಮೂಲ ನಿಧಿ- ಕೇಂದ್ರೀಯ (ಎನ್.ಎಲ್.ಸಿ.ಪಿ.ಆರ್. (ಕೇಂದ್ರೀಯ) ) ಹೆಸರಿನ ಇನ್ನೊಂದು ಯೋಜನೆ ಪ್ರಸ್ತುತ ಮೆ/ಒ ಡಿ.ಒ.ಎನ್.ಇ.ಆರ್. ಹಣಕಾಸು ನೆರವಿನೊಂದಿಗೆ ಅನುಷ್ಟಾನಗೊಳ್ಳುತ್ತಿದ್ದು, ಅದು ಸಂಬಂಧಿತ ಮಂತ್ರಾಲಯಗಳಿಗೆ / ಅವುಗಳ ಏಜೆನ್ಸಿಗಳಿಗೆ  ಅಗರ್ತಾಲಾ-ಅಖೌರಾ ರೈಲು ಜೋಡಣೆ, ಮಜೂಲಿ ದ್ವೀಪದಲ್ಲಿ ಕೊರೆತ ಇತ್ಯಾದಿ ಕಾರ್ಯಕ್ರಮಗಳಿಗೆ ಸಂಪನ್ಮೂಲವನ್ನು ಒದಗಿಸುತ್ತದೆ. ಈ ಯೋಜನೆ ಕೂಡಾ ಅನುಷ್ಟಾನಕ್ಕಾಗಿ ಎನ್.ಇ.ಸಿ.ಗೆ ವರ್ಗಾವಣೆಗೊಳ್ಳಲಿದೆ.

ಈ ಹಿಂದೆ ರಾಜ್ಯ ಅಥವಾ ಕೇಂದ್ರೀಯ ಘಟಕಗಳಿಗೆ ಹಣಕಾಸು ವಿತರಣೆ  ಮಾಡಲು ನಿಗದಿತ ವ್ಯವಸ್ಥೆ ಇರಲಿಲ್ಲ. ಈಗ ಎನ್.ಇ.ಸಿ.ಗೆ ಲಭ್ಯ ಇರುವ ಒಟ್ಟು ಹಣಕಾಸನ್ನು ಎರಡು ಘಟಕಗಳಿಗೆ ವಿಭಜಿಸಲು ಉದ್ದೇಶಿಸಲಾಗಿದೆ. (ರಾಜ್ಯ ಪಾಲು-60% ಮತ್ತು ಕೇಂದ್ರ ಪಾಲು -40% ) . ರಾಜ್ಯ ಘಟಕವನ್ನು ಆಯಾ ರಾಜ್ಯಗಳಲ್ಲಿ , ಅವುಗಳ ಪಾಲನ್ನು ಅನುಲಕ್ಷಿಸಿ ಮಂಜೂರು ಮಾಡಿ ಬಳಕೆ ಮಾಡಲಾಗುವುದು. ಕೇಂದ್ರೀಯ ಘಟಕಕ್ಕೆ ಸಂಬಂಧಿಸಿ , ಪ್ರಾದೇಶಿಕ ಮಟ್ಟದ ಯೋಜನೆಗಳಾಗಿದ್ದರೆ ಮತ್ತು ಅಂತರ್ ಮಂತ್ರಾಲಯಗಳ ಮಧ್ಯಪ್ರವೇಶ ಬೇಕಾಗಿರುವಂತಹ ಯೋಜನೆಗಳಾಗಿದ್ದರೆ ಅವುಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬಿದಿರು, ಹಂದಿ ಸಾಕಾಣಿಕೆ,ಪ್ರಾದೇಶಿಕ ಪ್ರವಾಸೋದ್ಯಮ, ಉನ್ನತ ಶಿಕ್ಷಣ, ಭೌಗೋಳಿಕ ಆರೋಗ್ಯರಕ್ಷಣೆ, ಮತ್ತು ಹಿಂದುಳಿದ ಪ್ರದೇಶಗಳ ಅಭಿವೃದ್ದಿಗೆ ವಿಶೇಷ ಮಧ್ಯಪ್ರವೇಶ, ಜೀವನೋಪಾಯ ಯೋಜನೆ, ಎನ್.ಇ.ಆರ್. ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಧ್ಯಪ್ರವೇಶ , ಸರ್ವೇಕ್ಷಣೆ ಮತ್ತು ತನಿಖೆ ಹಾಗು ಎನ್.ಇ.ಆರ್. ಉತ್ತೇಜನದಂತಹ ಆದ್ಯತಾ ಕ್ಶೇತ್ರಗಳನ್ನು ಇದಕ್ಕಾಗಿ ಗುರುತಿಸಲಾಗಿದೆ.

ಈ ಮೂಲಕ ಡಿ.ಒ.ಎನ್.ಇ.ಆರ್ ಮತ್ತು ಎನ್.ಇ.ಸಿ.ಗಳ ನಡುವೆ ಕೆಲಸ ಕಾರ್ಯಗಳ ಗೊಂದಲ ಏರ್ಪಡದಂತೆ ಸ್ಪಷ್ಟವಾದ ವಿಭಜನೆಯನ್ನು ಮಾಡಲಾಗಿದೆ.

ಈಶಾನ್ಯ ವಲಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಉತ್ತೇಜನ ಕೊಡಲು ಮತ್ತು ಇತರ ಕೆಲಸ ಕಾರ್ಯಗಳಿಗೆ , ಪ್ರವಾಸೋದ್ಯಮದ ಬಾಕಿ ಉಳಿದಿರುವ ವ್ಯವಸ್ಥೆಗಳನ್ನು  ’ನಿಗದಿತ ಸ್ಥಳಗಳ ಮತ್ತು ಸರ್ಕ್ಯೂಟ್ ಗಳ ಉತ್ಪಾದನಾ ಮೂಲ ಸೌಕರ್ಯ ಅಭಿವೃದ್ದಿ” (ಪಿ.ಐ.ಡಿ.ಡಿ.ಸಿ.) ಅಡಿಯಲ್ಲಿ ನಿರ್ವಹಿಸಬಹುದು.

ಇದಲ್ಲದೆ, ಸ್ಥಾಯೀ ಹಣಕಾಸು ಸಮಿತಿ (ಎಸ್.ಎಫ್.ಸಿ.) ಮಾದರಿಯಲ್ಲಿ  ಸಂಬಂಧಿತ ಮಂತ್ರಾಲಯಗಳ ಮತ್ತು ಡಿ.ಒ.ಎನ್.ಇ.ಆರ್. ಮಂತ್ರಾಲಯಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗುವುದು. ಕಾರ್ಯದರ್ಶಿ  ಅಧ್ಯಕ್ಷತೆಯ  ಈ ಸಮಿತಿ 5-15 ಕೋ.ರೂ.ಗಳವರೆಗಿನ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಿದೆ. ಇದು ಇತರ ಕೇಂದ್ರ ಮಂತ್ರಾಲಯಗಳ ಕಾರ್ಯಕ್ರಮಗಳನ್ನು ಏಕತ್ರಗೊಳಿಸುವ ಉದ್ದೇಶ ಹೊಂದಿದೆ ಮತ್ತು ಎಸ್.ಎಫ್.ಸಿ.ಪ್ರಕ್ರಿಯೆ ಮೂಲಕ ಒಂದೇ ಕಾರ್ಯಕ್ರಮ ಪುನರಾವೃತ್ತಿಯಾಗದಂತೆ ತಡೆಯುತ್ತದೆ.