ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ (ಆರ್.ಟಿ.ಇ.), 2009ರ ತಿದ್ದುಪಡಿಗೆ ತನ್ನ ಅನುಮೋದನೆ ನೀಡಿದೆ. 2015ರ ಮಾರ್ಚ್ 31ರವರೆಗೆ ಉದ್ಯೋಗದಲ್ಲಿರುವ ಎಲ್ಲ ಶಿಕ್ಷಕರಿಗೂ ಶೈಕ್ಷಣಿಕ ಪ್ರಾಧಿಕಾರ ನಿಗದಿ ಮಾಡಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪಡೆದುಕೊಳ್ಳುವ ಖಾತ್ರಿ ಒದಗಿಸುತ್ತದೆ, ಮತ್ತು ಅಂತ ತರಬೇತಿ ಪಡೆಯುವ ನಾಲ್ಕುವರ್ಷಗಳಿಗೆ ಅಂದರೆ 2019ರ ಮಾರ್ಚ್ 31ರವರೆಗೆ ವಿಸ್ತರಿಸಿದೆ.
ಇದು ಸೇವೆಯಲ್ಲಿರುವ ತರಬೇತಿ ಪಡೆಯದ ಪ್ರಾಥಮಿಕ ಶಿಕ್ಷಕರಿಗೆ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿಕೊಳ್ಳಲು ಮತ್ತು ದೇಶದಲ್ಲಿರುವ ಎಲ್ಲ ಪ್ರಾಥಮಿಕ ಶಿಕ್ಷಕರು ಕನಿಷ್ಠ ವಿದ್ಯಾರ್ಹತೆಯ ಮಾನದಂಡವನ್ನು ಖಾತ್ರಿಪಡಿಸುತ್ತದೆ. ಅಲ್ಲದೆ ಬೋಧನೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಎಲ್ಲ ಶಿಕ್ಷಕರೂ ಅಗತ್ಯವಾದ ಕನಿಷ್ಠ ವಿದ್ಯಾರ್ಹತೆಯನ್ನು ಪಡೆದುಕೊಳ್ಳುವುದನ್ನೂ ಖಾತ್ರಿಪಡಿಸುತ್ತದೆ. ಒಟ್ಟಾರೆಯಾಗಿ ಇದು, ಶಿಕ್ಷಕರ, ಬೋಧನಾ ಪ್ರಕ್ರಿಯೆ ಮತ್ತು ಆ ಮೂಲಕ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಗೆ ಕಾರಣವಾಗುತ್ತದೆ. ಇದು ಪ್ರಾಥಮಿಕ ಶಿಕ್ಷಣದ ಸುಧಾರಣೆಯ ಸರ್ಕಾರದ ನಿಲುವನ್ನು ಪುನಶ್ಚೇತನಗೊಳಿಸುತ್ತದೆ.
ಹಿನ್ನೆಲೆ:
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ (ಆರ್.ಟಿ.ಇ.), 2009, 2010ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇದು 6-14 ವಯೋಮಿತಿಯೊಳಗಿನ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. ಕಾಯಿದೆಯ ಸೆಕ್ಷನ್ 23(2)ಯ ನಿಯಮಗಳು, ಪ್ರಾಥಮಿಕ ಹಂತದ ಎಲ್ಲ ಶಿಕ್ಷಕರೂ ಈ ಕಾಯಿದೆಯ ಆರಂಭದ ಹೊತ್ತಿಗೆ ಆರ್.ಟಿ.ಇ. ಕಾಯಿದೆ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪಡೆಯದಿದ್ದಲ್ಲಿ, ಆ ಶೈಕ್ಷಣಿಕ ಅರ್ಹತೆಯನ್ನು ಮುಂದಿನ ಐದು ವರ್ಷಗಳಲ್ಲಿ ಅಂದರೆ 2015ರ ಮಾರ್ಚ್ 31ರೊಳಗೆ ಪಡೆದುಕೊಳ್ಳಬೇಕಿತ್ತು. ಆದಾಗ್ಯೂ, ಕೆಲವು ರಾಜ್ಯ ಸರ್ಕಾರಗಳು ಒಟ್ಟಾರೆ ಇರುವ 66.41 ಲಕ್ಷ ಪ್ರಾಥಮಿಕ ಹಂತದ ಶಿಕ್ಷಕರ ಪೈಕಿ, 11 ಲಕ್ಷ ಜನರು ಇನ್ನೂ ತರಬೇತಿರಹಿತರಾಗಿದ್ದಾರೆ (ಈ ಪೈಕಿ 5.12 ಲಕ್ಷ ಶಿಕ್ಷಕರು ಸರ್ಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ಹಾಗೂ 5.98 ಲಕ್ಷ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ). ಹೀಗಾಗಿ 2015ರ ಮಾರ್ಚ್ 31ರೊಳಗೆ ಉದ್ಯೋಗದಲ್ಲಿದ್ದ ಎಲ್ಲ ಶಿಕ್ಷಕರೂ ಶೈಕ್ಷಣಿಕ ಪ್ರಾಧಿಕಾರ ನಿಗದಿ ಮಾಡಿರುವ ಕನಿಷ್ಠ ವಿದ್ಯಾರ್ಹತೆ ಪಡೆಯಲು ಆಗದ ಕಾರಣ, ಆರ್.ಟಿ.. ಕಾಯಿದೆ 2009ಕ್ಕೆ ಸೂಕ್ತ ತಿದ್ದುಪಡಿ ತಂದು, ಈ ಅವಧಿಯನ್ನು ನಾಲ್ಕುವರ್ಷಗಳವರೆಗೆ ಅಂದರೆ 2019ರ ಮಾರ್ಚ್ 31ರವರೆಗೆ ವಿಸ್ತರಿಸುವ ಅಗತ್ಯಬಿದ್ದಿತ್ತು.
******
AKT/VBA/SH