Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರಾಖಂಡದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ತ್ರಿವೀಂದ್ರ ಸಿಂಗ್ ರಾವತ್ ಗೆ ಪ್ರಧಾನಿ ಅಭಿನಂದನೆ

ಉತ್ತರಾಖಂಡದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ತ್ರಿವೀಂದ್ರ ಸಿಂಗ್ ರಾವತ್ ಗೆ ಪ್ರಧಾನಿ ಅಭಿನಂದನೆ


ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ. ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

“ಇಂದು ಪ್ರಮಾಣ ವಚನ ಸ್ವೀಕರಿಸಿದ ಶ್ರೀ. ತ್ರಿವೇಂದ್ರ ಸಿಂಗ್ ರಾವತ್ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆಗಳು. ಅವರು ಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುತ್ತಾರೆ ಎಂಬ ನಂಬಿಕೆ ನನಗಿದೆ.

ಉತ್ತರಾಖಂಡದ ನೂತನ ಸರ್ಕಾರ ತನಗೆ ರಾಜ್ಯದ ಜನತೆ ತೋರಿದ ಅದ್ಭುತ ವಾತ್ಸಲ್ಯಕ್ಕೆ ದಾಖಲೆಯ ಅಭಿವೃದ್ಧಿಯ ಮೂಲಕ ಋಣ ತೀರಿಸಲಿದೆ,” ಎಂದು ಪ್ರಧಾನಿ ತಿಳಿಸಿದ್ದಾರೆ.

*****

AKT/SH