Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರಾಖಂಡ್ ನ ಕೇದಾರನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಪತಂಜಲಿ ಸಂಶೋಧನಾ ಸಂಸ್ಥೆಯ ಉದ್ಘಾಟನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡ್ ಗೆ ಭೇಟಿ ನೀಡಿದರು. ಕೇದಾರನಾಥ ದೇವಾಲಯದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ನೆರೆದಿದ್ದ ದೊಡ್ಡ ಸಂಖ್ಯೆಯ ಜನರಿಗೆ ಅವರು ಶುಭ ಕೋರಿದರು.

ನಂತರ ಪ್ರಧಾನಮಂತ್ರಿಯವರು ಹರಿದ್ವಾರ ಜಿಲ್ಲೆಯಲ್ಲಿ ಪತಂಜಲಿ ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು. ಸಂಸ್ಥೆಯ ಔಷಧ ಆವಿಷ್ಕಾರ ಮತ್ತು ಸಂಶೋಧನಾ ಪ್ರಯೋಗಾಲಯಕ್ಕೆ ಕೆಲ ಕಾಲ ಭೇಟಿ ನೀಡಿದರು, ಅವರೊಂದಿಗೆ ಸ್ವಾಮಿ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಐತಿಹಾಸಿಕವಾಗಿ ಹೆಮ್ಮ ಪಡುತ್ತಿರುವ ನಮ್ಮ ಪರಂಪರೆಯನ್ನು ನಾವು ಉಪೇಕ್ಷಿಸುವುದೂ ಇಲ್ಲ ಅಥವಾ ಮರೆಯುವುದೂ ಇಲ್ಲ ಎಂದರು. ನಮ್ಮ ಪೂರ್ವಿಕರ ನಾವಿನ್ಯಪೂರ್ಣ ಸ್ಫೂರ್ತಿಯನ್ನು ಸದಾ ಜೀವಂತವಾಗಿಡಬೇಕು ಎಂದೂ ಅವರು ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಾಗ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸುವಂತೆ ಪ್ರಧಾನಿ ಕರೆ ನೀಡಿದರು. ಹೊಸ ಆರೋಗ್ಯ ನೀತಿಯು, ಆರೋಗ್ಯ ಮತ್ತು ಉತ್ತಮಿಕೆಯ ವಿವಿಧ ವಿಷಯಗಳನ್ನು ಒಳಗೊಂಡಿದೆ ಎಂದರು. ನೈರ್ಮಲ್ಯ ಅಥವಾ ಸ್ವಚ್ಛತೆ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಸಂಗತಿಯಾಗಿದೆ ಎಂದರು.

ಪ್ರಧಾನಿಯವರು ವಿಶ್ವ ಗಿಡಮೂಲಿಕೆ ವಿಶ್ವಕೋಶದ ಮೊದಲ ಸಂಪುಟವನ್ನು ಬಿಡುಗಡೆ ಮಾಡಿದರು.

***

AKT/NT