Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉಪರಾಷ್ಟ್ರಪತಿ ಅವರ ಆತ್ಮೀಯ ಶುಭಾಶಯಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್  ಅವರ ಆತ್ಮೀಯ ಹಾರೈಕೆಗಳು ಮತ್ತು ಹಿತ ನುಡಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಭಾರತದ ಜನರ ವಿಶ್ವಾಸ ಮತ್ತು ಸಹಭಾಗಿತ್ವದೊಂದಿಗೆ ಈ ಸೇವಾ ಪಯಣವು ಪ್ರತಿ ಹಂತದಲ್ಲೂ ಬಲಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉಪರಾಷ್ಟ್ರಪತಿಯವರ ಅವಲೋಕನಗಳು ಅತ್ಯಂತ ಉತ್ತೇಜನಕಾರಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ವಿಕಸಿತ ಭಾರತ’ದ ಸಾಮೂಹಿಕ ಮುನ್ನೋಟ ಸಾಕಾರಗೊಳಿಸಲು ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಬದ್ಧ ಎಂದು ಶ್ರೀ ಮೋದಿ ಅವರು ಪುನರುಚ್ಚರಿಸಿದ್ದಾರೆ.

ಪ್ರಧಾನಮಂತ್ರಿಯವರು ‘ಎಕ್ಸ್’ ಪೋಸ್ಟ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರೇ ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಹಿತಕರ ಮಾತುಗಳಿಗೆ ಧನ್ಯವಾದಗಳು.
ಭಾರತದ ಜನರ ವಿಶ್ವಾಸ ಮತ್ತು ಸಹಭಾಗಿತ್ವದಿಂದ ಈ ಸೇವಾ ಪಯಣವು ಪ್ರತಿ ಹಂತದಲ್ಲೂ ಬಲಗೊಂಡಿದೆ.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನಿಮ್ಮ ಅವಲೋಕನಗಳು ಅತ್ಯಂತ ಪ್ರೇರಣಾದಾಯಕವಾಗಿದೆ.

‘ವಿಕಸಿತ ಭಾರತ’ದ ನಮ್ಮ ಸಾಮೂಹಿಕ ಮುನ್ನೋಟವನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚಿನ ಚೈತನ್ಯದೊಂದಿಗೆ ಕಾರ್ಯನಿರ್ವಹಿಸಲು ನಾನು ಬದ್ಧನಾಗಿದ್ದೇನೆ. @VPIndia”

 

*****