Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗಿತಕ್ಕೆ ಅವರು ನೀಡಿರುವ ಕೊಡುಗೆ ಪೀಳಿಗೆಗಳವರೆಗೆ ಸ್ಮರಿಸಲಾಗುತ್ತದೆ.

ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ಸಂಗೀತದಿಂದ ಭಾರತ ಮತ್ತು ವಿಶ್ವದಾದ್ಯಂತ ಜನ ಉತ್ಸಾಹಭರಿತರಾಗಿದ್ದರು, ಅವರು ಸಂಗೀತೋತ್ಸಾಹಿಗಳಿಗೆ ಸ್ಫೂರ್ತಿಯಾಗಿದ್ದರು.” ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/NT