Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ 2026ರಲ್ಲಿ ತಮ್ಮ ಭಾಷಣದ ತುಣುಕುಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ 2026ರಲ್ಲಿ ತಮ್ಮ ಭಾಷಣದ ತುಣುಕುಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ 2026ರಲ್ಲಿ ತಾವು ಮಾಡಿದ ಭಾಷಣದ ಕೆಲವು ಭಾಗಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ:

“ಭಾರತವು ಉತ್ಪಾದನೆ ಸಂಬಂಧಿತ ಶಿಕ್ಷೆಯಿಂದ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕಗಳತ್ತ ಸಾಗಿದೆ.

ನಿಗದಿತ ಮಿತಿಗಳನ್ನು ಮೀರಿ ಉತ್ಪಾದನೆ ಮಾಡಿದ್ದಲ್ಲಿ ಕಂಪನಿಗಳಿಗೆ ದಂಡ ವಿಧಿಸುತ್ತಿದ್ದ ಕಾಲವಿತ್ತು! ಲೈಸೆನ್ಸ್ ರಾಜ್ ನ ಆ ಮನಸ್ಥಿತಿಯಿಂದಾಗಿ ಉದ್ಯಮ, ಉತ್ಪಾದನೆ ಮತ್ತು ಉದ್ಯೋಗ ಸೃಜನೆಗೆ ಪ್ರೋತ್ಸಾಹ ಸಿಗಲಿಲ್ಲ. 

ಪ್ರಸ್ತುತದ ವಿಧಾನ ಸಂಪೂರ್ಣ ಭಿನ್ನವಾಗಿದೆ. ನಾವು ಉತ್ಪಾದನೆಗೆ ಪ್ರೋತ್ಸಾಹಕ ನೀಡುತ್ತೇವೆ, ಮಹತ್ವಾಕಾಂಕ್ಷೆಯನ್ನು ಉತ್ತೇಜಿಸುತ್ತೇವೆ ಮತ್ತು ನಮ್ಮ ಉದ್ಯಮಿಗಳನ್ನು ನಂಬುತ್ತೇವೆ.

ಭಾರತವು ಉದ್ಯಮವನ್ನು ನಿಯಂತ್ರಿಸುವ ಬದಲು ಅದನ್ನು ಕ್ರಿಯಾಶೀಲಗೊಳಿಸುವತ್ತ ಸಾಗಿದೆ.”

“ಆಡಳಿತದ ತತ್ವಶಾಸ್ತ್ರದಲ್ಲಿನ ಬದಲಾವಣೆಯೇ ಭಾರತದ ಸುಧಾರಣಾ ಪಯಣದ ತಿರುಳಾಗಿದೆ.

‘ಅನುಮತಿಸದ ಹೊರತು ನಿಷೇಧಿಸಲಾಗಿದೆ’ ಎಂಬ ತತ್ವದಿಂದ ‘ನಿಷೇಧಿತವಾಗಿರದ ಹೊರತು ಅನುಮತಿಸಲಾಗಿದೆ’ ಎಂಬೆಡೆ ಸಾಗುತ್ತಿದ್ದೇವೆ. ಜನ್ ವಿಶ್ವಾಸ್, ಅಪರಾಧ ಮುಕ್ತಗೊಳಿಸುವಿಕೆ, ಸಾವಿರಾರು ಕಡ್ಡಾಯ ಪಾಲನಾ ಅನುಸರಣೆಗಳು ಮತ್ತು ಅನೇಕ ಬಳಕೆಯಲ್ಲಿಲ್ಲದ ಕಾನೂನುಗಳನ್ನು ತೆಗೆದುಹಾಕುವ ಮೂಲಕ, ನಾವು ನಾಗರಿಕರು ಮತ್ತು ಉದ್ಯಮಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿದ್ದೇವೆ.”

“ನೀತಿ ನಿಯಮಗಳು ಜನಪರ, ಬೆಳವಣಿಗೆ ಪರ ಮತ್ತು ಅಭಿವೃದ್ಧಿ ಪರವಾಗಿರಬೇಕು…”

“ಬಹುತೇಕ ಅರ್ಥಪೂರ್ಣ ಕ್ರಾಂತಿ ಸುಧಾರಣೆಗಳು ಸದ್ದಿಲ್ಲದೇ ದೈನಂದಿನ ಜೀವನದ ಭಾಗವಾಗುತ್ತವೆ. ಅದು ನಿಜವಾಗಿಯೂ ‘ಸುಲಲಿತ ಜೀವನ’…”

 

*****