Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಚ್.ಐ.ವಿ. ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ವಿಧೇಯಕ, 2014 ತಿದ್ದುಪಡಿಗಳಿಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಚ್.ಐ.ವಿ. ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ವಿಧೇಯಕ, 2014ಕ್ಕೆ ಅಧಿಕೃತ ತಿದ್ದುಪಡಿಗಳಿಗೆ ತನ್ನ ಅನುಮೋದನೆಯನ್ನು ನೀಡಿದೆ.

ಎಚ್.ಐ.ವಿ. ಮತ್ತು ಏಡ್ಸ್ ನೊಂದಿಗೆ ಜೀವನ ಸಾಗಿಸುತ್ತಿರುವ ಜನರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಎಚ್.ಐ.ವಿ. ಮತ್ತು ಏಡ್ಸ್ ಮಸೂದೆ 2014ನ್ನು ರಚಿಸಲಾಗಿದೆ. ಈ ಮಸೂದೆಯ ನಿಬಂಧನೆಗಳು ಎಚ್.ಐ.ವಿ. ಸಂಬಂಧಿತ ತಾರತಮ್ಯವನ್ನು ನಿವಾರಿಸುತ್ತವೆ, ಹಾಲಿ ಇರುವ ಕಾರ್ಯಕ್ರಮಗಳನ್ನು ಕಾನೂನಾತ್ಮಕ ಹೊಣೆಗಾರಿಕೆಗೆ ತಂದು ಬಲಪಡಿಸುತ್ತದೆ ಮತ್ತು ಕುಂದುಕೊರತೆ ನಿವಾರಿಸಲು ಮತ್ತು ದೂರುಗಳ ಬಗ್ಗೆ ತನಿಖೆ ನಡೆಸಲು ಔಪಚಾರಿಕ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಎಚ್.ಐ.ವಿ. ಮತ್ತು ಏಡ್ಸ್ ಹಬ್ಬದಂತೆ ತಡೆಯುವ ಮತ್ತು ನಿಯಂತ್ರಿಸಲು ಮಸೂದೆ ಬಯಸುತ್ತದೆ, ಎಚ್.ಐ.ವಿ. ಮತ್ತು ಏಡ್ಸ್ ಇರುವ ಜನರ ವಿರುದ್ಧದ ತಾರತಮ್ಯವನ್ನು ಪ್ರತಿಬಂಧಿಸುತ್ತದೆ, ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಒಪ್ಪಿಗೆಯ ಮಾಹಿತಿ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ,ಎಚ್ಐವಿಯೊಂದಿಗೆ ಜೀವಿಸುವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಸಂಸ್ಥೆಗಳ ಮೇಲೆ ಹೊಣೆಗಾರಿಕೆ ನಿಗದಿಪಡಿಸುತ್ತದೆ. ಈ ಮಸೂದೆಯು ಎಚ್.ಐ.ವಿ. ಸಂಬಂಧಿತ ಪರೀಕ್ಷೆ, ಚಿಕಿತ್ಸೆ ಮತ್ತು ವೈದ್ಯಕೀಯ ಪ್ರಯೋಗಾಲಯಗಳ ಸಂಶೋಧನೆಗೆ ಒಪ್ಪಿಗೆ ಮತ್ತು ಗೌಪ್ಯತೆಯ ಖಾತ್ರಿಯೊಂದಿಗೆ ಆರೋಗ್ಯ ಸೇವೆಯ ಹೆಚ್ಚಿನ ಅವಕಾಶದ ಗುರಿಯನ್ನು ಹೊಂದಿದೆ.

ಈ ವಿಧೇಯಕ ಎಚ್.ಐ.ವಿ. ಪಾಸಿಟಿವ್ ವ್ಯಕ್ತಿಗಳ ಮತ್ತು ಅದರೊಂದಿಗೆ ಬದುಕುತ್ತಿರುವವರ ವಿರುದ್ಧ ಮಾಡಲಾಗುವ ತಾರತಮ್ಯದ ಕಾರಣಗಳನ್ನು ಪಟ್ಟಿ ಮಾಡುತ್ತದೆ ಮತ್ತು ಅದನ್ನು ನಿಷೇಧಿಸುತ್ತದೆ. ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ನಿರಾಕರಣೆ, ವಜಾಗೊಳಿಸುವುದು, ತಾರತಮ್ಯ ಅಥವಾ ಅನುಚಿತ ವರ್ತನೆಗಳನ್ನು ಅದು ಒಳಗೊಂಡಿದೆ:

(i) ಉದ್ಯೋಗ

(ii) ಶಿಕ್ಷಣ ಸಂಸ್ಥೆಗಳು,

(iii) ಆರೋಗ್ಯ ರಕ್ಷಣೆ ಸೇವೆಗಳು,

(iv) ವಾಸ್ತವ್ಯ ಅಥವಾ ಬಾಡಿಗೆ ಮನೆ,

(v) ಸಾರ್ವಜನಿಕ ಅಥವಾ ಖಾಸಗಿ ಕಚೇರಿಯಲ್ಲಿ ನಿಲ್ಲಿಸುವುದು, ಮತ್ತು

(vi) ವಿಮೆಯ ನಿಬಂಧನೆ (ವಿಮಾ ಲೆಕ್ಕಾಚಾರ ಅಧ್ಯಯನದ ಆಧಾರದ ಹೊರತು). ಉದ್ಯೋಗ ಅಥವಾ ಆರೋಗ್ಯ ಸೇವೆ ಪಡೆದುಕೊಳ್ಳಲು ಅಥವಾ ಶಿಕ್ಷಣ ಪಡೆದುಕೊಳ್ಳಲು ಅವಶ್ಯಕ ಎಂದು ಎಚ್.ಐ.ವಿ.ಪರೀಕ್ಷೆ ಮಾಡಿಸುವುದನ್ನು ಸಹ ನಿಷೇಧಿಸಲಾಗಿದೆ.

ಪ್ರತಿಯೊಬ್ಬ ಎಚ್.ಐ.ವಿ. ಸೋಂಕಿತ ಅಥವಾ ಬಾಧಿತ 18 ವರ್ಷ ವಯೋಮಾನದ ಒಳಗಿನ ವ್ಯಕ್ತಿ ಮನೆಯಲ್ಲಿ ಹಂಚಿಕೊಂಡು ಬಾಳುವ ಮತ್ತು ಕುಟುಂಬದ ಸೌಲಭ್ಯ ಪಡೆದುಕೊಳ್ಳುವ ಹಕ್ಕುಳ್ಳವನಾಗಿರುತ್ತಾನೆ. ಎಚ್.ಐ.ವಿ. ಪಾಸಿಟೀವ್ ವ್ಯಕ್ತಿಗಳ ಮತ್ತು ಅದರೊಂದಿಗೆ ಬಾಳುತ್ತಿರುವವರ ಬಗ್ಗೆ ಮಾಹಿತಿಯನ್ನು ಯಾವುದೇ ವ್ಯಕ್ತಿ ಪ್ರಕಟಿಸುವುದನ್ನು ಅಥವಾ ಅವರ ವಿರುದ್ಧ ದ್ವೇಷ ಭಾವನೆ ಪ್ರತಿಪಾದಿಸುವುದನ್ನು ನಿರ್ಬಂಧಿಸುತ್ತದೆ. ಅಲ್ಲದೆ ಈ ಮಸೂದೆಯು ಅಪ್ರಾಪ್ತ ವಯಸ್ಕರಿಗೆ ಪಾಲಕರ ಅಧಿಕಾರವನ್ನೂ ಒದಗಿಸುತ್ತದೆ. ಎಚ್.ಐ.ವಿ. ಅಥವಾ ಏಡ್ಸ್ ಬಾಧಿತ ಕುಟುಂಬದ ವ್ಯವಹಾರವನ್ನು ಅರ್ಥೈಸಿಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವಷ್ಟು ಸೂಕ್ತವಾದ ಪ್ರೌಢತೆಯನ್ನು ಹೊಂದಿರುವ 12 ರಿಂದ 18 ವರ್ಷದೊಳಗಿನ ವ್ಯಕ್ತಿಗೆ 18 ವರ್ಷದೊಳಗಿನ ವಯಸ್ಸಿನ ಮತ್ತೊಬ್ಬ ಸೋದರನ ಪಾಲಕನಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ಬ್ಯಾಂಕ್ ಖಾತೆ ನಿರ್ವಹಣೆ, ಆಸ್ತಿಯ ನಿರ್ವಹಣೆ, ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಸಮರ್ಥನಾಗಿರುತ್ತಾನೆ.

ಆತನ ಒಪ್ಪಿಗೆ ಇಲ್ಲದೆಯೇ ಅಥವಾ ನ್ಯಾಯಾಲಯದ ಆದೇಶದ ಅಗತ್ಯದ ಹೊರತಾಗಿ ಯಾವುದೇ ವ್ಯಕ್ತಿ ಆತನ ಎಚ್.ಐ.ವಿ. ಸ್ಥಿತಿಯ ಬಗ್ಗೆ ಬಹಿರಂಗ ಮಾಡುವಂತಿಲ್ಲ ಎಂಬುದನ್ನು ಮಸೂದೆ ಬಯಸುತ್ತದೆ. ಎಚ್.ಐ.ವಿ. ಪಾಸಿಟೀವ್ ಇರುವ ವ್ಯಕ್ತಿಯ ಮಾಹಿತಿಯ ದಾಖಲೆಗಳನ್ನು ಇಟ್ಟುಕೊಂಡಿರುವ ಸಂಸ್ಥೆಗಳು ದತ್ತಾಂಶ ಸಂರಕ್ಷಣೆ ಕ್ರಮ ಅಳವಡಿಸಿಕೊಳ್ಳಬೇಕು. ಮಸೂದೆಯ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು:

(i) ಎಚ್.ಐ.ವಿ. ಮತ್ತು ಏಡ್ಸ್ ಹಬ್ಬುವುದನ್ನು ತಡೆಯುವುದು,

(ii) ಎಚ್ಐವಿ ಅಥವಾ ಏಡ್ಸ್ ವ್ಯಕ್ತಿಗಳಿಗೆ ಆಂಟಿರೆಟ್ರೋವೈರಲ್ ಚಿಕಿತ್ಸೆ ಮತ್ತು ಸೋಂಕು ನಿರ್ವಹಣೆ ಒದಗಿಸುವುದು,

(iii) ಅವರಿಗೆ ಅದರಲ್ಲೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಲ್ಯಾಣ ಯೋಜನೆಗಳನ್ನು ಪಡೆಯುವ ಅವಕಾಶ ಒದಗಿಸುವುದು,

(iv) ವಯಸ್ಸಿಗೆ ತಕ್ಕದಾದ, ಲಿಂಗ ಸಂವೇದನೆಯ, ಮತ್ತು ರೋಗಲಕ್ಷಣವಿಲ್ಲದ ಎಚ್.ಐ.ವಿ. ಅಥವಾ ಏಡ್ಸ್ ಶಿಕ್ಷಣ ಸಂವಹನ ಕಾರ್ಯಕ್ರಮ ರೂಪಿಸುವುದು, ಮತ್ತು

(v) ಎಚ್.ಐ.ವಿ. ಅಥವಾ ಏಡ್ಸ್ ಇರುವ ಮಕ್ಕಳ ಚಿಕಿತ್ಸೆ ಮತ್ತು ಆರೋಕ್ಷ ರಕ್ಷಣೆಗೆ ಮಾರ್ಗಸೂಚಿ ರೂಪಿಸುವುದು. ರಾಜ್ಯದ ಆರೈಕೆ ಮತ್ತು ಬಂಧನದಲ್ಲಿರುವಾಗಲೂ ಪ್ರತಿ ವ್ಯಕ್ತಿಗೆ ಎಚ್ಐವಿ ತಡೆಗಟ್ಟುವಿಕೆ, ಪರೀಕ್ಷೆ,ಚಿಕಿತ್ಸೆ ಮತ್ತು ಸಮಾಲೋಚನೆ ಸೇವೆಗಳ ಹಕ್ಕು ಹೊಂದಿರುತ್ತಾನೆ. ಈ ವಿಧೇಯಕವು ಎಚ್.ಐ.ವಿ. ಪಾಸಿಟೀವ್ ಇರುವ ವ್ಯಕ್ತಿಗಳು ಎದುರಿಸುತ್ತಿರುವ ಪ್ರಕರಣಗಳನ್ನು ಆದ್ಯತೆಯ ಆಧಾರದ ಮೇಲೆ ನ್ಯಾಯಾಲಯಗಳು ವಿಲೇ ಮಾಡಬೇಕು ಮತ್ತು ಗೌಪ್ಯತೆಯನ್ನು ಖಾತ್ರಿ ಪಡಿಸಬೇಕು.

ಈ ವಿಧೇಯಕದಿಂದ ಯಾವುದೇ ಆರ್ಥಿಕ ಪರಿಣಾಮ ಇರುವುದಿಲ್ಲ. ಈಗಾಗಲೇ ಬಹುತೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಅಥವಾ ಹಾಲಿ ಇರುವ ವಿವಿಧ ಸಚಿವಾಲಯಗಳು ಕೈಗೊಂಡಿರುವ ತರಬೇತಿ, ಸಂವಹನ ಮತ್ತು ನಿರ್ವಹಣೆ ಇತ್ಯಾದಿ ವ್ಯವಸ್ಥೆಯಲ್ಲಿ ಇದನ್ನು ಸೇರಿಸಬಹುದಾಗಿದೆ. ಕಾಯಿದೆಯ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರಗಳು ಓಂಬುಡ್ಸ್ ಮನ್ ನೇಮಕ ಮಾಡಲು ಈ ಮಸೂದೆಯಲ್ಲಿ ಅವಕಾಶವಿದೆ ಮತ್ತು ಅದರ ಅನುಸರಣೆ ಮಾಡದ ಪ್ರಕರಣಗಳಲ್ಲಿ ದಂಡನೆಯ ಕ್ರಮಗಳೂ ಇವೆ. ಒಂಬುಡ್ಸ್ ಮನ್ ಒಂದು ಪ್ರತ್ಯೇಕ ಕಾಯ ಆಗಿರಲೇಬೇಕೆಂದೇನಿಲ್ಲ, ಆದರೆ, ಯಾವುದೇ ಹಾಲಿ ಇರುವ ರಾಜ್ಯ ಸರ್ಕಾರದ ಕಾರ್ಯಕಾಯಕ್ಕೆ ಈ ಕಾರ್ಯ ವಹಿಸಬಹುದಾಗಿದೆ ಅಥವಾ ಹೆಚ್ಚುವರಿ ಹೊಣೆ ನೀಡಬಹುದಾಗಿದೆ.

ಭಾರತದಲ್ಲಿ ಸುಮಾರು 21 ಲಕ್ಷ ಮಂದಿ ಎಚ್.ಐ.ವಿ.ಯೊಂದಿಗೆ ಬದುಕುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಕಳೆದ ಒಂದು ದಶಕದಲ್ಲಿ ಎಚ್.ಐ.ವಿ.ಯ ಪ್ರಭುತ್ವ ಕಡಿಮೆ ಆಗುತ್ತಿದೆಯಾದರೂ, ಈ ಮಸೂದೆಯು ಸುಸ್ಥಿರ ಅಭಿವೃದ್ಧಿ ಗುರಿಯ ಹಿನ್ನೆಲೆಯಲ್ಲಿ ಹೊಸ ಸೋಂಕು ತಡೆಯಲು ಮತ್ತು 2030ರಹೊತ್ತಿಗೆ ಈ ಸೋಂಕು ರೋಗವನ್ನು ಕೊನೆಗಾಣಿಸುವ ಗುರಿ ಸಾಧನೆಗಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳಿಗೆ ಸೂಕ್ತ ಬೆಂಬಲ ನೀಡಿದೆ.

****

AKT/VBA/SH