Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಪ್ರಿಲ್ 12ರಂದು ಚೆನ್ನೈನಲ್ಲಿ ರಕ್ಷಣಾ ಪ್ರದರ್ಶನ 2018ನ್ನು ಉದ್ಘಾಟಿಸಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 12ರಂದು ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ಚೆನ್ನೈನ ಕಾಂಚಿಪುರಂ ಜಿಲ್ಲೆಯ ತಿರುವಿದಂತಾಲ್ ನಲ್ಲಿ ಅವರು ರಕ್ಷಣಾ ಪ್ರದರ್ಶನ ಡೆಫ್ ಎಕ್ಸ್ ಪೋ 2018ರ 10ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.

 

ಡೆಫ್ ಎಕ್ಸ್ ಪೋ ದ ಈ ವರ್ಷದ ಶೀರ್ಷಿಕೆ “ಭಾರತ: ಹೊರಹೊಮ್ಮುತ್ತಿರುವ ರಕ್ಷಣಾ ಉತ್ಪಾದನಾ ತಾಣ’’ ಎಂಬುದಾಗಿದ್ದು, ಭಾರತದ ರಕ್ಷಣಾ ವ್ಯವಸ್ಥೆ ಮತ್ತು ಸಾಧನಗಳ ರಫ್ತು ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಡೆಫ್ ಎಕ್ಸ್ ಪೋ ದಲ್ಲಿ 150 ಅಂತಾರಾಷ್ಟ್ರೀಯ ಪ್ರದರ್ಶಕರು ಸೇರಿದಂತೆ 670ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಎಂ.ಎಸ್.ಎಂ.ಇ. ವಲಯಕ್ಕೆ ಸುಮಾರು ಶೇ.15ರಷ್ಟು ನ್ಯಾಯಸಮ್ಮತ ಪ್ರತಿನಿಧಿತ್ವ ನೀಡಲಾಗಿದೆ.

 

ಟಾಟಾ, ಎಲ್ ಅಂಡ್ ಟಿ, ಕಲ್ಯಾಣಿ, ಭಾರತ್ ಫೋರ್ಜ್, ಮಹೀಂದ್ರ, ಎಂ.ಕೆ.ಯು, ಡಿಆರ್.ಡಿ.ಓ, ಎಚ್.ಎ.ಎಲ್., ಬಿ.ಇ.ಎಲ್., ಬಿಡಿಎಲ್, ಬಿ.ಇ.ಎಂ.ಎಲ್, ಎಂ.ಡಿ.ಎಲ್., ಜಿಆರ್.ಎಸ್.ಇ, ಜಿಎಸ್.ಎಲ್, ಎಚ್.ಎಸ್.ಎಲ್, ಮಿಧಾನಿ, ಆರ್ಡಿನೆನ್ಸ್ ಕಾರ್ಖಾನೆಗಳು ಸೇರಿದಂತೆ ಇತರ ಹಲವು ಭಾರತೀಯ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಲಾಕ್ಹೇಡ್ ಮಾರ್ಟಿನ್, ಬೋಯಿಂಗ್ (ಯು.ಎಸ್.ಎ.), ಸಾಬ್ (ಸ್ವೀಡನ್), ಏರ್ ಬಸ್, ರಫಾಯೆಲ್ (ಫ್ರಾನ್ಸ್), ರೋಸನ್ ಬರೋನ್ ಎಕ್ಸ್ ಪೋರ್ಟ್ಸ್, ಯುನೈಟೆಡ್ ಶಿಪ್ ಬಿಲ್ಡಿಂಗ್ (ರಷ್ಯಾ), ಬಿ.ಎ.ಇ. ಸಿಸ್ಟಮ್ಸ್ (ಯುಕೆ), ಸಿಬತ್ (ಇಸ್ರೇಲ್), ವಾರ್ತ್ ಸಿಲಾ (ಫಿನ್ ಲ್ಯಾಂಡ್), ರೊಹೋದೆ ಮತ್ತು ಸ್ಕವರ್ಜ್ (ಜರ್ಮನಿ)  ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳು ಡೆಫ್ ಎಕ್ಸ್ ಪೋ 2018ರಲ್ಲಿ ಭಾಗಿಯಾಗುತ್ತಿವೆ.

 

ಪ್ರಧಾನಮಂತ್ರಿಯವರು ಚೆನ್ನೈನ ಅಡಿಯಾರ್ ನ ಕ್ಯಾನ್ಸರ್ ಸಂಸ್ಥೆಗೂ ಭೇಟಿ ನೀಡಲಿದ್ದಾರೆ. ಶ್ರೀ ಪೆರಂಬದೂರ್ ನಲ್ಲಿ ವಜ್ರಮಹೋತ್ಸವ ಕಟ್ಟಡ, ಉಪಶಮನ ಚಿಕಿತ್ಸಾ ಕೇಂದ್ರ (ಮಹಾವೀರ್ ಆಶ್ರಯ್) ಅಡಿಯಾರ್ ಕ್ಯಾನ್ಸರ್ ಸಂಸ್ಥೆಯಲ್ಲಿ ಡೇ ಕೇರ್ ಕೇಂದ್ರ ಮತ್ತು ನರ್ಸ್ ಗಳ ವಸತಿಗೃಹದ ಉದ್ಘಾಟನೆ ಸಲುವಾಗಿ ಅವರು ಫಲಕ ಅನಾವರಣ ಮಾಡಲಿದ್ದಾರೆ.

*****