Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಬರಣಿಕಾ ಇಲಂಗೋವನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಏಷ್ಯನ್ ಕ್ರೀಡಾಕೂಟಕ್ಕೆ ತಮ್ಮ ಚೊಚ್ಚಲ ಪ್ರವೇಶದಲ್ಲೇ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಬರಣಿಕಾ ಇಲಂಗೋವನ್ ಅವರನ್ನು ಅಭಿನಂದಿಸಿದ್ದಾರೆ. ಅವರು ಇದನ್ನು ಭಾರತದ ಒಂದು ವಿಶೇಷ ಸಾಧನೆ ಮತ್ತು ಮಾದರಿ ಪದಕ ಎಂದು ಬಣ್ಣಿಸಿದ್ದಾರೆ.

“ಇದು ಹೆಮ್ಮೆಯ ಸಾಧನೆಯಾಗಿದ್ದು, ಈ ಕ್ರೀಡೆಯನ್ನು ಕೈಗೊಳ್ಳಲು ಇನ್ನೂ ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯವು ತನ್ನ X ಪೋಸ್ಟ್ ನಲ್ಲಿ  ಹೀಗೆ ಹೇಳಿದೆ:

“ಭಾರತಕ್ಕೆ ಒಂದು ವಿಶೇಷ ಸಾಧನೆ ಮತ್ತು ಮಾದರಿ ಪದಕ!

ಏಷ್ಯನ್ ಕ್ರೀಡಾಕೂಟಕ್ಕೆ ತಮ್ಮ ಚೊಚ್ಚಲ ಪ್ರವೇಶದಲ್ಲೇ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಬರಣಿಕಾ ಇಲಂಗೋವನ್ ಅವರಿಗೆ ಅಭಿನಂದನೆಗಳು. ಇದು ಹೆಮ್ಮೆಯ ಸಾಧನೆಯಾಗಿದ್ದು, ಈ ಕ್ರೀಡೆಯನ್ನು ಕೈಗೊಳ್ಳಲು ಇನ್ನೂ ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ: ಪ್ರಧಾನಮಂತ್ರಿ @narendramodi”

 

*****