Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಗೇಮ್ಸ್ 2026ರ ಮಹಿಳೆಯರ ಹೈ ಜಂಪ್‌ ನಲ್ಲಿ ಕಂಚಿನ ಪದಕ ಗೆದ್ದಿರುವ ಪೂಜಾ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಗೇಮ್ಸ್ 2026ರ ಮಹಿಳೆಯರ ಹೈ ಜಂಪ್ (ಎತ್ತರ ಜಿಗಿತ) ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಪೂಜಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. 

ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ಈ ಸ್ಪರ್ಧೆಯಲ್ಲಿ ಎರಡು ದಶಕಗಳ ಬಳಿಕ ಭಾರತಕ್ಕೆ ಲಭಿಸಿರುವ ಮೊದಲ ಪದಕ ಇದಾಗಿದೆ ಎಂದು ಹೇಳಿರುವ ಪ್ರಧಾನಮಂತ್ರಿಗಳು, ಇದು ಸ್ಮರಣೀಯ ಸಾಧನೆ ಎಂದು ಬಣ್ಣಿಸಿದ್ದಾರೆ.

ಶ್ರೀ ಮೋದಿ ಅವರು ಪೂಜಾ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿಯವರ ಕಾರ್ಯಾಲಯ ‘ಎಕ್ಸ್’ ಪೋಸ್ಟ್‌ ನಲ್ಲಿ ಹೀಗೆ ಹೇಳಿದೆ:

“ ಭಾರತೀಯ ಅಥ್ಲೆಟಿಕ್ಸ್‌ ಗೆ ಹೆಮ್ಮೆಯ ಕ್ಷಣ!

“ಏಷ್ಯನ್ ಗೇಮ್ಸ್ 2026ರಲ್ಲಿ ಮಹಿಳೆಯರ ಹೈ ಜಂಪ್ (ಎತ್ತರ ಜಿಗಿತ) ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಪೂಜಾ ಅವರಿಗೆ ಅಭಿನಂದನೆಗಳು. ಏಷ್ಯನ್ ಗೇಮ್ಸ್‌ ನ ಈ ಸ್ಪರ್ಧಾ ವಿಭಾಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಅವಧಿಯ ನಂತರ ಭಾರತಕ್ಕೆ ಲಭಿಸಿರುವ ಮೊದಲ ಪದಕ ಇದಾಗಿದೆ. ಇದು ನಿಜಕ್ಕೂ ಸ್ಮರಣೀಯ ಸಾಧನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”

 

*****