ಏಷ್ಯನ್ ಪ್ಯಾರಾ ಕ್ರೀಡಾಕೂಟ 2026 ರಲ್ಲಿ, ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್ 11 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಹಿಮಾಂಶು ನಂದಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಹಿಮಾಂಶು ನಂದಲ್ ಅವರ ಅದ್ಭುತ ಈಜುವಿಕೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅವರ ಕ್ರೀಡಾ ಪ್ರದರ್ಶನವು ಅವರ ಪ್ರಯತ್ನ, ಸಹಿಷ್ಣುತೆ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು ಹಾಗೂ ಅವರ ಮುಂಬರುವ ಕ್ರೀಡಾ ಪ್ರಯಾಣಕ್ಕೆ ಶುಭ ಹಾರೈಸಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“ಹಿಮಾನ್ಶು ನಂದಲ್ ಅವರಿಂದ ಅದ್ಭುತ ಈಜು!
ಏಷ್ಯನ್ ಪ್ಯಾರಾ ಕ್ರೀಡಾಕೂಟ 2026 ರಲ್ಲಿ ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್ 11 ಸ್ಪರ್ಧೆಯಲ್ಲಿ ಅವರು ಕಂಚು ಪದಕ ಗೆದ್ದಿದ್ದಾರೆ. ಅವರ ಪ್ರದರ್ಶನವು ಅವರ ಪ್ರಯತ್ನ, ಸಹಿಷ್ಣುತೆ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ. ಅವರಿಗೆ ಅಭಿನಂದನೆಗಳು.
ಅವರ ಮುಂಬರುವ ಕ್ರೀಡಾ ಪ್ರಯಾಣಕ್ಕೆ ಶುಭ ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”
*****
Splendid swimming by Himanshu Nandal! He has won the Bronze in the Men's 400m Freestyle S11 event at the Asian Para Games 2026. His performance reflects his effort, endurance and discipline. Congratulations to him. Wishing him the very best for his upcoming sporting journey: PM @narendramodi
— PMO India (@PMOIndia) October 20, 2026