Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರ್‌.ಎಸ್‌.ಎಸ್. ಸಂಸ್ಥಾಪನಾ ದಿವಸದ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ


ಶತಾಬ್ದಿ ವರ್ಷದ ವಿಶೇಷ ಶ್ರೀ ವಿಜಯದಶಮಿ ಉತ್ಸವ ಸಂದರ್ಭದಲ್ಲಿ ಡಾ. ಮೋಹನ್ ಭಾಗವತ್ ಅವರು ಮಾಡಿದ ಪ್ರೇರಕ ಭಾಷಣವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆರ್‌.ಎಸ್‌.ಎಸ್. ಸಂಸ್ಥಾಪನಾ ದಿವಸದ ವಿಶೇಷ ಸಂದರ್ಭದಲ್ಲಿ ಎಲ್ಲಾ ಸ್ವಯಂಸೇವಕರಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು ಮತ್ತು ನಾಗಪುರದಲ್ಲಿ ಶತಾಬ್ದಿ ವರ್ಷದ ವಿಶೇಷ ಶ್ರೀ ವಿಜಯದಶಮಿ ಉತ್ಸವದ ಸಂದರ್ಭದಲ್ಲಿ ಮಾಡಿದ ಸರಸಂಘ ಚಾಲಕ್ ಡಾ. ಮೋಹನ್ ಭಾಗವತ್ ಅವರ ಪ್ರೇರಕ ಭಾಷಣವನ್ನು ಪ್ರಧಾನಮಂತ್ರಿಯವರ ಹಂಚಿಕೊಂಡರು.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಸರಣಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ:

“ಇಂದು, ಆರ್‌.ಎಸ್‌.ಎಸ್. ಸಂಸ್ಥಾಪನಾ ದಿವಸದ ವಿಶೇಷ ಸಂದರ್ಭದಲ್ಲಿ, ಎಲ್ಲಾ ಸ್ವಯಂಸೇವಕರಿಗೆ ನನ್ನ ಶುಭಾಶಯಗಳು. ಕಳೆದ ವರ್ಷಗಳಲ್ಲಿ ಆರ್‌.ಎಸ್‌.ಎಸ್. ಅನ್ನು ಪೋಷಿಸಿದ ಎಲ್ಲ ಮಹನೀಯರಿಗೆ ನಾನು ಗೌರವ ಸಲ್ಲಿಸುತ್ತೇನೆ.

ಸೇವೆ, ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಸಾಮರಸ್ಯದ ಗಮನಾರ್ಹ ಶತಮಾನವನ್ನು ಆರ್‌.ಎಸ್‌.ಎಸ್. ಪೂರೈಸಿದೆ. ಅಸಂಖ್ಯಾತ ಸ್ವಯಂಸೇವಕರು ಆಳವಾದ ಕರ್ತವ್ಯ ಪ್ರಜ್ಞೆ ಮತ್ತು ರಾಷ್ಟ್ರ-ಪ್ರಥಮ ಮನೋಭಾವದಿಂದ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ.

ಈ ಚೈತನ್ಯವು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿಯನ್ನು ಬಲಪಡಿಸಲಿ ಎಂದು ಆಶಿಸುತ್ತೇನೆ.

राष्ट्रीय स्वयंसेवक संघ के स्थापना दिवस के विशेष अवसर पर सभी स्वयंसेवकों को मेरी हार्दिक शुभकामनाएं! मैं उन सभी विभूतियों को भी नमन करता हूं, जिन्होंने अपने अथक परिश्रम और सेवाभाव से संघ को सींचा और संवारा है।

राष्ट्रीय स्वयंसेवक संघ ने सेवा, राष्ट्र निर्माण और सामाजिक प्रतिबद्धता का गौरवशाली शताब्दी वर्ष पूर्ण किया है। अनगिनत स्वयंसेवकों ने अपने समर्पण, कर्तव्य-निष्ठा और राष्ट्र-प्रथम की भावना से सदैव समाज के उत्थान के लिए कार्य किया है।

मुझे विश्वास है कि यह भावना आने वाले समय में भी देश को और सशक्त एवं सुदृढ़ करेगी।”

“ನಾಗ್ಪುರದಲ್ಲಿ ನಡೆದ ಶತಾಬ್ದಿ ವರ್ಷದ ಶ್ರೀ ವಿಜಯದಶಮಿ ಉತ್ಸವದ ವಿಶೇಷ ಸಂದರ್ಭದಲ್ಲಿ ಪರಮ ಪೂಜ್ಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಅತ್ಯಂತ ಪ್ರೇರಣಾದಾಯಕ ಭಾಷಣ ಮಾಡಿದ್ದಾರೆ.

ರಾಷ್ಟ್ರೀಯ ಪ್ರಗತಿ ಮತ್ತು ಸಾಮಾಜಿಕ ಏಕತೆ, ಸ್ವಾವಲಂಬನೆಯ ಅಗತ್ಯ ಮತ್ತು ಸಮಾಜದ ಸ್ವರೂಪವನ್ನು ಬಲಪಡಿಸುವುದು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಅವರು ಸುದೀರ್ಘವಾಗಿ ಮಾತನಾಡಿದ್ದಾರೆ.

ಪ್ರತಿಯೊಬ್ಬ ಆರ್‌.ಎಸ್‌.ಎಸ್. ಸ್ವಯಂಸೇವಕನ ಅವಿಭಾಜ್ಯ ಅಂಗವಾಗಿರುವ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಯ ಬಗ್ಗೆ ಅವರು ಒತ್ತು ನೀಡಿದ್ದು ವಿಶೇಷವಾಗಿ ಗಮನಾರ್ಹವಾಗಿದೆ.

ಅವರು, ಪಂಚ ಪರಿವರ್ತನೆಯ ಬಗ್ಗೆ ಮತ್ತು ಇವು ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಹೇಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದು ಎಂಬುದರ ಬಗ್ಗೆಯೂ ಮಾತನಾಡಿದರು.

@RSSorg

@DrMohanBhagwat

https://www.youtube.com/live/PcWgPtMVw_Q?si=mCFMUSKnpi_UvUhQ”

 

*****