ಏಷ್ಯನ್ ಪ್ಯಾರಾ ಗೇಮ್ಸ್ 2026 ರ ಮಹಿಳೆಯರ 1500 ಮೀಟರ್ ಟಿ 12/13 ಸ್ಪರ್ಧೆಯಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಚಿನ್ನದ ಪದಕ ಗೆದ್ದ ಸೌಮ್ಯಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಚೊಚ್ಚಲ ಸ್ಪರ್ಧೆಯಲ್ಲಿ ಅವರ ಅಸಾಧಾರಣ ಪ್ರದರ್ಶನವು ಅವರ ಪ್ರತಿಭೆ, ಸಮರ್ಪಣೆ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದೆ;
“ನಿಜವಾಗಿಯೂ ಒಂದು ಸುವರ್ಣ ಆರಂಭ!
ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಸೌಮ್ಯ ಅದ್ಭುತ ಛಾಪು ಮೂಡಿಸಿದ್ದಾರೆ, ಮಹಿಳೆಯರ 1500 ಮೀಟರ್ ಟಿ 12/13 ಸ್ಪರ್ಧೆಯಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಚಿನ್ನ ಗೆದ್ದಿದ್ದಾರೆ!
ಚೊಚ್ಚಲ ಸ್ಪರ್ದೆಯಲ್ಲಿ ಇಂತಹ ಅಸಾಧಾರಣ ಪ್ರದರ್ಶನವನ್ನು ನೀಡಿರುವುದು ಅವರ ಪ್ರತಿಭೆ, ಸಮರ್ಪಣೆ ಮತ್ತು ದೃಢನಿಶ್ಚಯದ ಬಗ್ಗೆ ಮಾತನಾಡುತ್ತದೆ. ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi”
*****
A Golden debut indeed! Soumya has made a spectacular mark at the Asian Para Games 2026, winning Gold in the Women’s 1500m T12/13 event with a Personal Best timing too! Delivering such an exceptional performance on debut speaks volumes about her talent, dedication and determination. Congratulations to her: PM @narendramodi
— PMO India (@PMOIndia) October 19, 2026