ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ 1500 ಮೀಟರ್ ಟಿ46 ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿರುವ ಪರ್ಮೋದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಹಿಂದಿನ ಆವೃತ್ತಿಯಂತೆಯೇ ಈ ಬಾರಿಯೂ ಬೆಳ್ಳಿ ಪದಕ ಗೆದ್ದಿರುವುದು ಉತ್ತಮ ಸಾಧನೆಯಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಕ್ರೀಡಾ ಪಯಣದಲ್ಲಿ ಅವರು ಇದೇ ರೀತಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುತ್ತಾ ಇತರರಿಗೆ ಸ್ಫೂರ್ತಿಯಾಗಲಿ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:
“ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ 1500 ಮೀಟರ್ ಟಿ 46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಪರ್ಮೋದ್ ಅವರಿಗೆ ಅಭಿನಂದನೆಗಳು! ಹಿಂದಿನ ಆವೃತ್ತಿಯಂತೆಯೇ ಈ ಬಾರಿಯೂ ಬೆಳ್ಳಿ ಪದಕವನ್ನು ಗೆದ್ದಿರುವುದು ಉತ್ತಮ ಸಾಧನೆಯಾಗಿದೆ. ಅವರು ತಮ್ಮ ಕ್ರೀಡಾ ಪಯಣದಲ್ಲಿ ಹೀಗೆಯೇ ಉತ್ತಮ ಸಾಧನೆಗಳನ್ನು ಮುಂದುವರಿಸಲಿ ಮತ್ತು ಇತರರಿಗೆ ಪ್ರೇರಣೆಯಾಗಲಿ: ಪ್ರಧಾನಮಂತ್ರಿ @narendramodi”
*****
Congratulations to Parmod on winning Silver in the Men’s 1500m T46 event at the Asian Para Games! Repeating his silver-medal finish from the previous edition is a fine achievement. May he continue to excel and inspire others through his sporting journey: PM @narendramodi
— PMO India (@PMOIndia) October 23, 2026