Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿರುವ ಪರ್ಮೋದ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ 1500 ಮೀಟರ್‌ ಟಿ46 ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿರುವ ಪರ್ಮೋದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಂದಿನ ಆವೃತ್ತಿಯಂತೆಯೇ ಈ ಬಾರಿಯೂ ಬೆಳ್ಳಿ ಪದಕ  ಗೆದ್ದಿರುವುದು ಉತ್ತಮ ಸಾಧನೆಯಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಕ್ರೀಡಾ ಪಯಣದಲ್ಲಿ ಅವರು ಇದೇ ರೀತಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುತ್ತಾ ಇತರರಿಗೆ ಸ್ಫೂರ್ತಿಯಾಗಲಿ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್‌ ಪೋಸ್ಟ್‌ ಹೀಗಿದೆ: 

“ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ 1500 ಮೀಟರ್‌ ಟಿ 46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಪರ್ಮೋದ್ ಅವರಿಗೆ ಅಭಿನಂದನೆಗಳು! ಹಿಂದಿನ ಆವೃತ್ತಿಯಂತೆಯೇ ಈ ಬಾರಿಯೂ ಬೆಳ್ಳಿ ಪದಕವನ್ನು ಗೆದ್ದಿರುವುದು ಉತ್ತಮ ಸಾಧನೆಯಾಗಿದೆ. ಅವರು ತಮ್ಮ ಕ್ರೀಡಾ ಪಯಣದಲ್ಲಿ ಹೀಗೆಯೇ ಉತ್ತಮ ಸಾಧನೆಗಳನ್ನು ಮುಂದುವರಿಸಲಿ ಮತ್ತು ಇತರರಿಗೆ ಪ್ರೇರಣೆಯಾಗಲಿ: ಪ್ರಧಾನಮಂತ್ರಿ @narendramodi”

 

*****