Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭವ್ಯ ಗೆಲುವು ಸಾಧಿಸಿದ ಸುವರ್ಣ ರಾಜ್‌ಗೆ ಪ್ರಧಾನಮಂತ್ರಿ ಅಭಿನಂದನೆ


2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ ಡಿಸ್ಕಸ್ ಥ್ರೋ (ಚಕ್ರ ಎಸೆತ) F54 ವಿಭಾಗದಲ್ಲಿ ಭವ್ಯ ಗೆಲುವು ಸಾಧಿಸಿದ ಸುವರ್ಣ ರಾಜ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ.

ಸುವರ್ಣ ರಾಜ್ ಅವರ ಈ ಯಶಸ್ಸು ಅವರ ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ಕ್ರೀಡಾ ಶ್ರೇಷ್ಠತೆಯ ಕಡೆಗಿನ ಅಚಲ ಬದ್ಧತೆಯ ಫಲವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಭಾರತವು ಈ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿದೆ ಎಂದು ತಿಳಿಸಿರುವ ಅವರು, ಸುವರ್ಣ ರಾಜ್ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:

“2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ ಡಿಸ್ಕಸ್ ಥ್ರೋ F54 ವಿಭಾಗದಲ್ಲಿ ಭವ್ಯ ಗೆಲುವು ಸಾಧಿಸಿದ ಸುವರ್ಣ ರಾಜ್ ಅವರಿಗೆ ಅಭಿನಂದನೆಗಳು! ಅವರ ಈ ಯಶಸ್ಸು ಅವರ ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ಕ್ರೀಡಾ ಶ್ರೇಷ್ಠತೆಯ ಕಡೆಗಿನ ಅಚಲ ಬದ್ಧತೆಯ ಫಲವಾಗಿದೆ. ಭಾರತವು ಈ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”

 

*****