ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಎಸ್ ಹೆಚ್ 6 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವ ನಿತ್ಯಶ್ರೀ ಸುಮತಿ ಸಿವನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದು, ಈ ಬಾರಿ ಬೆಳ್ಳಿ ಪದಕ ಜಯಿಸಿರುವುದು ಅದ್ಭುತ ಸಾಧನೆಯಾಗಿದೆ ಎಂದು ಹೇಳಿರುವ ಶ್ರೀ ಮೋದಿ ಅವರು, ನಿತ್ಯಶ್ರೀ ಅವರು ಹೀಗೆಯೇ ಪ್ರಕಾಶಿಸುತ್ತಾ ದೇಶಕ್ಕೆ ಇನ್ನಷ್ಟು ಗೌರವ ತರಲಿ ಎಂದು ಆಶಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್ ಹೆಚ್ 6 ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿರುವ ನಿತ್ಯಶ್ರೀ ಸುಮತಿ ಸಿವನ್ ಅವರಿಗೆ ಅಭಿನಂದನೆಗಳು! ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದು, ಈ ಬಾರಿ ಬೆಳ್ಳಿ ಪದಕವನ್ನು ಪಡೆದಿರುವುದು ಅದ್ಭುತ ಸಾಧನೆಯಾಗಿದೆ. ಅವರು ಹೀಗೆಯೇ ಯಶಸ್ವಿಯಾಗಿ ಪ್ರಕಾಶಿಸುತ್ತಲಿರಲಿ ಮತ್ತು ದೇಶಕ್ಕೆ ಇನ್ನಷ್ಟು ಕೀರ್ತಿ ತರಲಿ: ಪ್ರಧಾನಮಂತ್ರಿ @narendramodi”
*****
Congratulations to Nithya Sre Sumathy Sivan on winning Silver in Women’s Singles SH6 at the Asian Para Games! From winning the Bronze in the previous edition to Silver this time is a wonderful achievement. May she continue to shine and bring more laurels to the country: PM @narendramodi
— PMO India (@PMOIndia) October 23, 2026