Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಬೆಳ್ಳಿ ಪದಕ ಪಡೆದಿರುವ ನಿತ್ಯಶ್ರೀ ಸುಮತಿ ಸಿವನ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಎಸ್‌ ಹೆಚ್‌ 6 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವ ನಿತ್ಯಶ್ರೀ ಸುಮತಿ ಸಿವನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದು, ಈ ಬಾರಿ ಬೆಳ್ಳಿ ಪದಕ ಜಯಿಸಿರುವುದು ಅದ್ಭುತ ಸಾಧನೆಯಾಗಿದೆ ಎಂದು ಹೇಳಿರುವ ಶ್ರೀ ಮೋದಿ ಅವರು, ನಿತ್ಯಶ್ರೀ ಅವರು ಹೀಗೆಯೇ ಪ್ರಕಾಶಿಸುತ್ತಾ ದೇಶಕ್ಕೆ ಇನ್ನಷ್ಟು ಗೌರವ ತರಲಿ ಎಂದು ಆಶಿಸಿದ್ದಾರೆ. 

ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್‌ ನಲ್ಲಿ ಹೀಗೆ ಹಂಚಿಕೊಂಡಿದೆ:

“ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್‌ ಹೆಚ್‌ 6 ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿರುವ ನಿತ್ಯಶ್ರೀ ಸುಮತಿ ಸಿವನ್ ಅವರಿಗೆ ಅಭಿನಂದನೆಗಳು! ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದು, ಈ ಬಾರಿ ಬೆಳ್ಳಿ ಪದಕವನ್ನು ಪಡೆದಿರುವುದು ಅದ್ಭುತ ಸಾಧನೆಯಾಗಿದೆ. ಅವರು ಹೀಗೆಯೇ ಯಶಸ್ವಿಯಾಗಿ ಪ್ರಕಾಶಿಸುತ್ತಲಿರಲಿ ಮತ್ತು ದೇಶಕ್ಕೆ ಇನ್ನಷ್ಟು ಕೀರ್ತಿ ತರಲಿ: ಪ್ರಧಾನಮಂತ್ರಿ @narendramodi”

 

*****