ಐಚಿ-ನಗೋಯಾದಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್ 2026 ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಭಾರತದ ತಂಡಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
ಅವರ ಛಲ, ಸಮರ್ಪಣಾಭಾವ ಮತ್ತು ದೃಢಸಂಕಲ್ಪವು 140 ಕೋಟಿ ಭಾರತೀಯರಿಗೆ ಸ್ಪೂರ್ತಿಯಾಗಿದೆ ಎಂದಿದ್ದಾರೆ.
ಕ್ರೀಡಾಪಟುಗಳು ಆತ್ಮವಿಶ್ವಾಸದಿಂದ ಸ್ಪರ್ಧಿಸಲಿ ಎಂದು ಹಾರೈಸಿದ ಶ್ರೀ ಮೋದಿ, ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವಂತೆ ಪ್ರೋತ್ಸಾಹಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಐಚಿ-ನಗೋಯಾದಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್ 2026 ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ, ಭಾರತದ ತಂಡಕ್ಕೆ ತುಕಡಿಗೆ ನನ್ನ ಶುಭಾಶಯಗಳು.
ನಮ್ಮ ಅದ್ಭುತ ಪ್ಯಾರಾ ಕ್ರೀಡಾಪಟುಗಳ ಬಗ್ಗೆ ಭಾರತಕ್ಕೆ ಅಪಾರ ಹೆಮ್ಮೆ ಇದೆ. ಅವರ ಛಲ, ಸಮರ್ಪಣಾಭಾವ ಮತ್ತು ದೃಢಸಂಕಲ್ಪವು 140 ಕೋಟಿ ಭಾರತೀಯರಿಗೆ ಸ್ಪೂರ್ತಿಯಾಗಿದೆ.
ಅವರು ಆತ್ಮವಿಶ್ವಾಸದಿಂದ ಸ್ಪರ್ಧಿಸಿ, ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿ.”
*****
As the Asian Para Games 2026 begin in Aichi-Nagoya, conveying my best wishes to the Indian contingent. India is immensely proud of our phenomenal para-athletes. Their grit, dedication and indomitable spirit inspire 140 crore Indians. May they compete with confidence and give their very best.
— Narendra Modi (@narendramodi) October 18, 2026